ಕಲ್ಲಂಗಡಿ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಸತೀಶ್ ಪೂಜಾರ್

ಸತೀಶ್ ಪೂಜಾರ್
ದಾವಣಗೆರೆ: ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಹ ಸಂಚಾಲಕ ಸತೀಶ್ ಪೂಜಾರ್ ಅವರ ಹುಟ್ಟುಹಬ್ಬವನ್ನು ಶಿವರಾತ್ರಿ ಹಿನ್ನೆಲೆಯಲ್ಲಿ ಕಲ್ಲಂಗಡಿ ಹಣ್ಣು ಕತ್ತರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ನಗರದ ಎಂ.ಬಿ ಕೆರೆ ರಸ್ತೆಯಲ್ಲಿ, ಚಿನ್ನ ಬೆಳ್ಳಿ ಕೆಲಸಗಾರರ ಸ್ನೇಹಿತರ ಬಳಗದಿಂದ ಜನ್ಮದಿನ ಆಚರಿಸಲಾಯಿತು. ಕೇಕ್ ಕತ್ತರಿಸುವ ಬದಲು ಕಲ್ಲಂಗಡಿ ಹಣ್ಣು ಕತ್ತರಿಸಿ, ಹುಟ್ಟುಹಬ್ಬ ಆಚರಿಸಲಾಯಿತು. ಸ್ನೇಹಿತರು, ಹಿತೈಷಿಗಳು ಶುಭ ಹಾರೈಸಿದರು.
ಅರುಣ್ ಉಗ್ಗೆಹಳ್ಳಿ, ವೆಂಕಟೇಶ್ ಹರ್ಡೇಕರ್, ಸಚಿನ್ ವೆರ್ಣೇಕರ್, ಮಂಜುನಾಥ್ ರೇವಣಕರ್, ಮನೋಹರ್, ಗಣಪತಿ, ಅಭಿಷೇಕ್, ಮಂಜುನಾಥ್ ರಾಯ್ಕರ್, ನಾಗರಾಜ್, ಪ್ರವೀಣ್ ಮತ್ತು ಚಿನ್ನ ಬೆಳ್ಳಿ ಸಂಘದ ಇತರೆ ಸದಸ್ಯರು.