ಸರ್ವರನ್ನೂ ಸಮಾನಾಗಿ ಕಾಣುವ ಅಜಾತಶತ್ರು ಎಸ್ ಎ ರವೀಂದ್ರನಾಥ್ ಆರೋಗ್ಯ ಸುಧಾರಣೆಯಾಗಲಿ

ಎಸ್ ಎ ರವೀಂದ್ರನಾಥ್

ದಾವಣಗೆರೆ : ಸರ್ವ ಸಮಾಜದವರನ್ನೂ ಅತ್ಯಂತ ಪ್ರೀತಿಯಿಂದಲೇ ಮಾತನಾಡಿಸುವ ಹೆಮ್ಮೆಯ ಶಾಸಕರಾದ ಎಸ್ ಎ ರವೀಂದ್ರನಾಥ್ ಅವರು ಶೀಘ್ರದಲ್ಲೇ ಆರೋಗ್ಯ ಸುಧಾರಣೆಯಾಗಲಿ ಎಂದು ಶೋಷಿತ ವರ್ಗ ಗಳ ಒಕ್ಕೂಟ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿತು. ಬಾಡದ ಆನಂದರಾಜು ಸೇರಿದಂತೆ ಹಲವರು ಮಂಡಿ ಶಸ್ತ್ರ ಚಿಕಿತ್ಸೆಗೊಳಗಾದ ಶಾಸಕರಾದ ರವೀಂದ್ರನಾಥ್ ಅವರಿಗೆ ಶುಭ ಹಾರೈಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದಲೂ ಜನರ ಪ್ರೀತಿಯಿಂದಲೇ ಗೆದ್ದು ಶಾಸಕರು, ಮಂತ್ರಿಗಳಾದರೂ ಅಧಿಕಾರದ ದರ್ಪ ತೋರದೆ ಹಳ್ಳಿಯ ರೈತ ಮಗನಾಗಿ ಕೆಲಸ ಮಾಡುತ್ತಿದ್ದಾರೆ. ಹಿರಿಯರೇ ಬರಲಿ ಕಿರಿಯರೇ ಬರಲಿ ತಮ್ಮ ಜವಾರಿ ಭಾಷೆಯಿಂದಲೇ ಮಾತನಾಡಿಸುತ್ತಾ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರ ವಿಲ್ಲದೆ ನಾಲ್ಕು ದಶಕಗಳಿಂದ ಆಡಳಿತ ನಡೆಸುತ್ತಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದು ನಮ್ಮ ಸೌಭಾಗ್ಯ ಎಂದು ಶೋಷಿತ ವರ್ಗಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ಅವರು ತಿಳಿಸಿದರು. ಎಸ್ ಎ ರವೀಂದ್ರನಾಥ ಅವರು ಈ ಬಾರಿ ಮತ್ತೊಮ್ಮೆ ಶಾಸಕರಾಗುವುದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಏಕೆಂದರೆ ಜನರು ಸರಳ ಸಜ್ಜನಿಕೆ ರಾಜಕಾದಣಿಯಾದ ಇವರನ್ನೇ ಆಯ್ಕೆ ಮಾಡುತ್ತಾರೆ. ನಗರದಲ್ಲಿ ಯಾವುದೇ ಗಲಾಟೆಯಿಲ್ಲದೆ ಶಾಂತಿಯಿಂದ ಜನರು ನೆಮ್ಮದಿಯಾಗಿ ಬದುಕುತ್ತಿದ್ದಾರೆ ಇದಕ್ಕೆ ಕಾರಣ ಶಾಸಕರಾದ ಎಸ್ ಎ ರವೀಂದ್ರನಾಥ್ ಅವರ ಆಡಳಿತ. ಪುಂಡ ಪೋಕರಿಗಳಿಗೆ ಕಿಮ್ಮಕ್ಕು ಕೊಡದೇ ಜಿಲ್ಲೆಯಲ್ಲಿ ಎಲ್ಲರೂ ಸೌಹಾರ್ದ ತೆಯಿಂದ ಬದುಕುವ ವಾತಾವರಣವಿದೆ ಇದಕ್ಕೆಲ್ಲಾ ಕಾರಣ ನಮ್ಮ ಹೆಮ್ಮೆಯ ಶಾಸಕರು ರವೀಂದ್ರನಾಥ ಅವರು ಇಂದು ಕೆಲವು ಶಾಸಕರನ್ನ ಸಮಾನ್ಯ ಜನರು ಕಾಣಬೇಕೆಂದರೆ ಅವರ ಮನೆಬಾಗಿಲಲ್ಲಿ ದಿನಗಟ್ಟಲೇ ಕಾಯಬೇಕು ಆದರೆ ಜನರ ಬಳಿಯೇ ಹೋಗುವಂತ ಶಾಸಕರು ರವೀಂದ್ರನಾಥ್ ಅವರು. ಬಸವಣ್ಣನ ಭಾವಚಿತ್ರ ನೀಡಿ ಅನಾರೋಗ್ಯಕ್ಕೊಳಗಾದ ಇವರು ಶೀಘ್ರದಲ್ಲೇ ಆರೋಗ್ಯ ಚೇತರಿಕೆಯಾಗಲಿ ಎಂದಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕೊರಚ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಜಿ.ಕೃಷ್ಣಪ್ಪ.ಅಂಗವಿಕಲ ಸಂಘದ ಜಿಲ್ಲಾಧ್ಯಕ್ಷ ಧನುಂಜಯಕುಮಾರ್.ಉತ್ತರ ಬಿಜೆಪಿ ಅಧ್ಯಕ್ಷ ಬೇತೂರು ಸಂಗನಗೌಡ.ಮಾಜಿ ನಗರ ಪಾಲಿಕೆ ಸದಸ್ಯ ಹೆಚ್.ಎನ್.ಶಿವಕುಮಾರ್. ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಹನುಮೇಗೌಡ.

ನಾಗರಾಜ್.ಗಣೇಶ್. ಇನ್ನೂ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!