ಎಸ್ಟಿ ಸಮುದಾಯಕ್ಕೆ ಮೇಯರ್ ಸ್ಥಾನ ಕೊಡಿಸುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದು ಗೆದ್ದ ಸವಿತಾ ಹುಲ್ಮನಿ ಗಣೇಶ್ – ಕೆ.ಎಲ್.ಹರೀಶ್ ಬಸಾಪುರ .
ದಾವಣಗೆರೆ :ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡುವ ಮೂಲಕ ದಾವಣಗೆರೆ ಮೇಯರ್ ಸ್ಥಾನ ಪ್ರಥಮ ಬಾರಿಗೆ ಎಸ್ಟಿ ಸಮುದಾಯಕ್ಕೆ ಸಿಗುವಂತೆ ಮಾಡುವಲ್ಲಿ ಸವಿತಾ ಹುಲ್ಮನಿ ಗಣೇಶ್ ಜಯಗಳಿಸಿದ್ದಾರೆ ಎಂದರೆ ತಪ್ಪಾಗಲಾರದು.
ರಾಜ್ಯದಲ್ಲಿ ಸ್ಪಷ್ಟ ಬಹುಮತ ಸಾಧಿಸದ ಬಿಜೆಪಿ, ಬೇರೆ ಪಕ್ಷದ ಶಾಸಕರನ್ನು ಸೆಳೆಯುವ ಮೂಲಕ ಸರ್ಕಾರ ರಚಿಸಿದಂತೆ… ದಾವಣಗೆರೆ ಮಹಾನಗರ ಪಾಲಿಕೆ ಎಲ್ಲೂ ಸಹ ಬಿಜೆಪಿ, ಕಳೆದ ನಾಲ್ಕು ಬಾರಿಯ ಮೇಯರ್ ಚುನಾವಣೆಯಲ್ಲಿ ಒಮ್ಮೆ ಆಡಳಿತ ಪಕ್ಷದ ಸದಸ್ಯರನ್ನು ಗೈರು ಮಾಡುವ ಮೂಲಕ, ಮಗದೊಮ್ಮೆ ಮೇಯರ್ ಅಭ್ಯರ್ಥಿಯನ್ನೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸುವ ಮೂಲಕ, ಈಗ ಆಡಳಿತ ಪಕ್ಷದ ಅಭ್ಯರ್ಥಿಯನ್ನೇ ಹೈಜಾಕ್ ಮಾಡುವ ಪ್ರಯತ್ನದ ಮೂಲಕ ಅಧಿಕಾರ ಹಿಡಿಯುವ ಪದ್ಧತಿಗೆ ಕಾಂಗ್ರೆಸ್ ನಾಯಕರ ನಡೆ ಬಿಜೆಪಿಗೆ ಅರ್ಥವಾಗದಂತೆ ಆಗಿದೆ.
ರಾಜ್ಯ ಬಿಜೆಪಿ ಸರ್ಕಾರ ದಾವಣಗೆರೆ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲು ತಂದಾಗ, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಹಾಗೂ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ರವರ ಸಾಮಾಜಿಕ ನ್ಯಾಯದ ಮೂಲಕ ಎಲ್ಲಾ ಸಮುದಾಯಕ್ಕೂ ಅಧಿಕಾರ ದೊರೆಯಲ್ಲಿ ಎಂಬ ಅಪೇಕ್ಷೆಯಂತೆ ಶ್ರೀಮತಿ ಸವಿತಾ ಹುಲ್ಮನೆ ಗಣೇಶ್ ಹೈಕೋರ್ಟ್ ಮೆಟ್ಟಿಲೇರಿ ಸರ್ಕಾರದ ತೀರ್ಮಾನಕ್ಕೆ ತಡೆಯಜ್ಞೆ ತರುವ ಮೂಲಕ ಎಸ್ಟಿ ಸಮುದಾಯಕ್ಕೆ ಮೇಯರ್ ಸ್ಥಾನದ ಅವಕಾಶ ದೊರೆಯುವಂತೆ ಮಾಡಿದ್ದು ಮಾತ್ರ ಸತ್ಯ.
ಏನೇ ಆಗಲಿ ಅಂತಿಮವಾಗಿ ರಾಜ್ಯ ಬಿಜೆಪಿ ಸರ್ಕಾರದ ಸೇಡಿನ ರಾಜಕಾರಣದಿಂದ ಮೇಯರ್ ಸ್ಥಾನದಿಂದ ವಂಚಿತವಾಗುತ್ತಿದ್ದ ಎಸ್.ಟಿ ಸಮುದಾಯಕ್ಕೆ, ಕಾನೂನು ಹೋರಾಟ ಮಾಡಿ ಮೇಯರ್ ಸ್ಥಾನ ದೊರೆಯುವಂತೆ ಮಾಡುವ ಮೂಲಕ ಸವಿತಾ ಹುಲ್ಮನೆ ಗಣೇಶ್ ವಿಜಯಿಯಾಗಿದ್ದರೆ.