ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸಲು ಸೇವಾದಳ ಶಿಕ್ಷಣ ಅಗತ್ಯ : ಕ್ಷೇತ್ರ ಸಮನ್ವಯಾಧಿಕಾರಿ ಟಿ.ಎಸ್ ಪ್ರಕಾಶ್
ದಾವಣಗೆರೆ: ಮಕ್ಕಳಲ್ಲಿ ಶಿಸ್ತು ಮತ್ತು ಭಾವೈಕ್ಯತೆಯನ್ನು ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ಸೇವಾದಳ ಶಿಕ್ಷಣ ಅಗತ್ಯವಾಗಿದೆ ಎಂದು ಕ್ಷೇತ್ರ ಸಾಮಾನ್ಯ ಅಧಿಕಾರಿಗಳಾದ ಟಿ.ಎಸ್ ಪ್ರಕಾಶ ರವರು ಅಭಿಪ್ರಾಯಪಟ್ಟರು. ಚನ್ನಗಿರಿ ಪಟ್ಟಣದ ಬಿಆರ್ ಸಿ ತರಬೇತಿ ಕೇಂದ್ರದಲ್ಲಿ ಭಾರತ ಸೇವಾದಳ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ‍್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ಕರ‍್ಯಾಗಾರವನ್ನು ಮತ್ತು ಕೊರೋನ ಜಾಗೃತಿ ಕರ‍್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೋರೋನದಿಂದಾಗಿ ಮಕ್ಕಳ ಶಿಕ್ಷಣ ತುಂಬಾ ಕುಂಠಿತವಾಗಿರುತ್ತದೆ, ಮುಂದಿನ ದಿನಮಾನಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ತಿಳಿಸಿದರು.
ವೈದ್ಯರಾದ ಡಾ. ಚೆನ್ನಕೇಶವ ಮರ‍್ತಿ ರವರು ಮಾತನಾಡಿ ಕೊರೋನಾ ಸಂಪರ‍್ಣವಾಗಿ ನಾಶವಾಗಲು ಬಹಳ ಸಮಯ ಹಿಡಿಯುತ್ತದೆ, ಧರ‍್ಯವಾಗಿ ಇದರೊಂದಿಗೆ ಜೀವನ ಸಾಗಿಸುವುದನ್ನು ಕಲಿಯಬೇಕಾಗಿದೆ ಎಂದರು. ಸರ‍್ವಜನಿಕರು ಯೋಗಾಭ್ಯಾಸವನ್ನು ಪ್ರಾಣಾಯಾಮ ಅಭ್ಯಾಸವನ್ನು ಮಾಡಬೇಕಾಗಿದೆ. ದುಶ್ಚಟಗಳಿಂದ ದೂರ ಇದ್ದು ಉತ್ತಮವಾದ ಆಹಾರವನ್ನು ಸೇವಿಸಿ ಆರೋಗ್ಯವನ್ನು ಸಂರಕ್ಷಿಸಿ ಕೊಳ್ಳಬೇಕು ಎಂದರು. ಮಾಸ್ಕ್ ಧರಿಸಬೇಕು ಸ್ಯಾನಿಟೈಸರ್ ಉಪಯೋಗಿಸಬೇಕು ಹೊರಗೆ ಹೋಗಿ ಬಂದ ತಕ್ಷಣ ಮನೆಯಲ್ಲಿ ಯಾರನ್ನು ಸ್ರ‍್ಶಿಸದೆ ಸ್ವಯಂ ಸ್ವಚ್ಛತೆಯನ್ನು ಮಾಡಿಕೊಂಡು ಮನೆಯವರ ಆರೋಗ್ಯವನ್ನು ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಈ ಸಂರ‍್ಬದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಎ ಪಿ ಟಾಕುರ್ ಅವರು ಶಿಕ್ಷಕರಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಣೆ ಮಾಡಿದರು. ಎಂ ಅಣ್ಣಯ್ಯ ವಲಯ ಸಂಘಟಕರು, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿಗಳಾದ ವಿಜಯ್ ಕುಮಾರ್, ಎಂ ಎಸ್ ಮಂಜುನಾಥ ತಾಲೂಕು ಸಂಘಟಕರು, ತಾಲೂಕು ಸೇವಾದಳ ಕರ‍್ಯರ‍್ಶಿ ಮಂಜುನಾಥ್. ಹಾಗೂ ಕರ‍್ಯಕ್ರಮದಲ್ಲಿ ಸೇವಾದಳ ಶಿಕ್ಷಕರು, ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಭಾಗವಹಿಸಿದ್ದರು.