ನಗರದ ವಿವಿಧ ವಾರ್ಡ್ ನಲ್ಲಿ ಎಸ್ ಎಪ್ ಸಿ ವಿಶೇಷ ಅನುದಾನದ ಕಾಮಗಾರಿಗೆ ಚಾಲನೆ

ದಾವಣಗೆರೆ :ಮಹಾನಗರ ಪಾಲಿಕೆ ವ್ಯಾಪ್ತಿಯ 32 ನೇ ವಾರ್ಡ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಎಸ್ ಎಪ್ ಸಿ ವಿಶೇಷ ಅನುದಾನ ಅಡಿಯಲ್ಲಿ ಶಕ್ತಿ ನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಹಾಗೂ 23ನೇ ವಾರ್ಡ್ ಎಸ್.ಎಸ್.ಬಡಾವಣೆಯ ರಿಂಗ್ ರಸ್ತೆಯಿಂದ ಧೂಡಾ ಆಯುಕ್ತರ ಮನೆಯ ಮುಂಭಾಗದ ಒಳ ಚರಂಡಿ, ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀಎಸ್.ಎ.ರವೀಂದ್ರನಾಥ ರವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಹಾಪೌರ ಎಸ್.ಟಿ.ವೀರೇಶ್, ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, 32 ನೇ ವಾರ್ಡ್ ಸದಸ್ಯರು, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಉಮಾ ಪ್ರಕಾಶ್, ಹಾಗೂ 23ನೇ ವಾರ್ಡ್ ಸದಸ್ಯರಾದ ರೇಖಾ ಸುರೇಶ್ ಸ್ಥಾಯಿ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.