ಶಿವಮೊಗ್ಗದ ‘ಸಹ್ಯಾದ್ರಿ ಚಿಟ್ಸ್ ಫಂಡ್’ ಈಗ ದಾವಣಗೆರೆಯಲ್ಲಿ
ದಾವಣಗೆರೆ : ಶಿವಮೊಗ್ಗ ನಗರದಲ್ಲಿ ಸತತ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿ ಬೆಳ್ಳಿ ಹಬ್ಬ ಸಂಭ್ರಮದ ನಂಬಿಕೆ,ಜನ ಸಾಮಾನ್ಯರ ವಿಶ್ವಾಸ ಗಳಿಸಿ ಇದೀಗ ದಾವಣಗೆರೆಯಲ್ಲಿ ಆರಂಭಗೊಂಡಿತು. ನಗರದ ಪಿ ಬಿ ರಸ್ತೆಯಲ್ಲಿನ ಮಲಬಾರ್ ಟೈರ್ಸ್ ಮೇಲ್ಭಾಗ ಮಹಡಿಯಲ್ಲಿ ನೂತನ ದಾವಣಗೆರೆ ಶಾಖೆ ಸಹ್ಯಾದ್ರಿ ಚಿಟ್ಸ್ ಫಂಡ್ ಕಂಪನಿ ಖ್ಯಾತ ಜವಳಿ ಉದ್ಯಮಿ ಬಿ ಸಿ ಉಮಾಪತಿ ಯುಧ್ಯಕ್ತವಾಗಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು .
ಚಿಟ್ ಫಂಡ್ ಅಂದ್ರೆ ನಾಲ್ಕು ಜನ ಸೇರಿ ಚೀಟಿ ಹಾಕಿ ಹಣ ಮಾಡಿ ಕಡೆಗೆ ಯಾರೋ ಒಬ್ಬರು ಕೈ ಎತ್ತಿ ಹೋಗುವರೆಂಬ ಭಾವನೆ, ರೂಢಿಗತ ಮಾತುಗಳು ನಮ್ಮಲ್ಲಿವೆ,ಆದರೆ ಈ ಸಹ್ಯಾದ್ರಿ ಚಿಟ್ಸ್ ಫಂಡ್ ಸಂಸ್ಥೆ ಸರ್ಕಾರದ ಪರವಾನಗಿ ಪಡೆದು ಜಿಎಸ್ಟಿ ಪಾವತಿಸಿ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಮುಖಾಂತರ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ತನ್ನತನ ಕಾಪಾಡಿಕೊಂಡು ಬಂದಿದೆ.
ನನಗೂ ಈ ಬಗ್ಗೆ ಮಾಹಿತಿ ಇರದೇ ಅದೇ ಭಾವನೆ ಹೊಂದಿದ್ದು ಈ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು ವೃತ್ತಿ ಪರ ಉದ್ಯಮಿ ಗಳು ಸತತ ೨೫ವರ್ಷಗಳ ಕಾಲ ನಿರಂತರ ಹಣಕಾಸು ವ್ಯವಹಾರ ಮಾಡಿ ಗ್ರಾಹಕರ ನಂಬಿಕೆ, ವಿಶ್ವಾಸ ಗಳಿಸಿ ಇದೀಗ ನಮ್ಮ ದಾವಣಗೆರೆ ನಗರದಲ್ಲಿ ಶಾಖೆ ಆರಂಭಿಸುತ್ತಿರುವುದು ಸಂತಸಕರ ಸಂಗತಿ. ಬ್ಯಾಂಕ್, ಸಹಕಾರಿ ಸಂಸ್ಥೆಗಳು ಅಷ್ಟೇನೂ ಆರೋಗ್ಯ ಕರ ಬೆಳವಣಿಗೆ ಕಾಣದಿರುವ ಸಂದರ್ಭದಲ್ಲಿ ಇಂಥ ಶಿಸ್ತು, ಕಟ್ಟುನಿಟ್ಟಿನ ಸರ್ಕಾರಿ ನಿಬಂಧನೆಗಳ ಪಾಲಿಸಿ ಯಶಸ್ವಿ ನೆಡೆಯುತ್ತಿದ್ದು ಜನ ಸಾಮಾನ್ಯರ ಸಣ್ಣ ವರ್ತಕ, ವ್ಯಾಪಾರಿಗಳಿಗೆ, ಉದ್ಯಮಿ ಗಳು ನೌಕರರಿಗೆ ಉಳಿತಾಯ ಕಷ್ಟ ಕಾಲದಲ್ಲಿ ನೆರವಾಗುವ ಇಂಥ ಚಿಟ್ಸ್ ಫಂಡ್ ಸಂಸ್ಥೆ ದಾವಣಗೆರೆಯಲ್ಲಿ ಯಶಸ್ವಿ ಯಾಗಿ ತನ್ನ ಸೇವೆ ಸಲ್ಲಿಸಿ
ಮತ್ತಷ್ಟು ವಿಶ್ವಾಸಾರ್ಹ ಕಾರ್ಯ ನಿರ್ವಹಿಸಲೆಂದು ಉಮಾಪತಿ ಆಶಿಸಿ,ಶುಭ ಹಾರೈಸಿದರು.
ನಗರದ ಛೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗ ಪ್ಪ, ಶಿವಮೊಗ್ಗದ ಶ್ರೀ ನಿಧಿ ಟೆಕ್ಸ್ ಟೈಲ್ ಮಾಲೀಕರಾದ ವೆಂಕಟೇಶ್ ಮೂರ್ತಿ, ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ವೇದಿಕೆಯಲ್ಲಿ ಸಹ್ಯಾದ್ರಿ ಚಿಟ್ಸ್ ಫಂಡ್ ನಾ ರಮೇಶ್ ಭಟ್, ದಾವಣಗೆರೆ ಬ್ರಾಂಚ್ ಉಸ್ತುವಾರಿ ಶಿವರಾಜ್ ಉಡುಗಣಿ ಉಪಸ್ಥಿತರಿದ್ದರು. ಆರಂಭದಲ್ಲಿ ಸಂಸ್ಥೆ ನಿರ್ದೇಶಕ ಶಿವಮೊಗ್ಗ ಹಿರಿಯ ಪತ್ರಕರ್ತ ವಿಜಯ್ ಕುಮಾರ್ ಸ್ವಾಗತಿಸಿ ಸಂಸ್ಥೆ ನಿರ್ದೇಶಕ ಶಿವರಾಜ್ ಉಡುಗಣಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಯಲ್ಲಿ ಡಾ.ಐತಾಳ್ ವಂದಿಸಿದರು.