ದಾವಣಗೆರೆ : ಬಾರವ್ವ ಬಾ ತಂಗಿ ಅಕ್ಷರ ಕಲಿರವ್ವ….ಈ ಅಕ್ಷರ ಯಾರದೋ ಕೈ ಅಕ್ಷರ ನಮ್ಮದೋ..ಮತ್ತೇನು ಹೊರುವ ಕೂಲಿಯದೋ.ಅನ್ನವ ಬೆಳೆವ ರೈತನದೋ…. ಇಂಥಾ ಜನಸ್ಪಂಧಿಸುವ ಹಾಡುಗಳ ..ಕೇಂದ್ರದ ಸಿದ್ಧಿಗೆ ಹೊಲಕ್ಕೆ ಹೋಗುವ ಹಳ್ಳಿಯ ಸಾಮಾನ್ಯ ರೈತ ಚಂದ್ರಣ್ಣ ,ಆಕಳು ಎಮ್ಮೆ ಕುರಿ ಮೇಯಿಸಲು ಹೊರಟ ಸೋಗಿಲು, ಗ್ರಾಮದ ಗೌರಮ್ಮ, ಕಬ್ಬಿಣ ಬಡಿಯಲು ಅಲ್ಲೆ ನಿಂತು ಹಾಡುಗಳಿಗೆ ಹೌದಪ್ಪ ಎನ್ನುತ್ತಾ ಜೋರಾಗಿ ನಗೆ ಕೇಕೆ ಹಾಕಿ ಚಪ್ಪಾಳೆ ತಟ್ಟಿದ ಹೊಸಹಳ್ಳಿ ಗ್ರಾಮದ ಅಬ್ದುಲ್ ಸಾಹೇಬರು, ನಾವು ಓದಿ ಬರೆಯದೇ ಇದ್ದದ್ದಕ್ಕೆ ಬೇರೆಯವರ ಹೊಲಕ್ಕೆ ಕೂಲಿ ಹೋಗೋದು ಎಂದು ಹ್ಯಾಪು ಮೊರೆ ಹಾಕಿ ಮುಖ ಇಳಿಬಿಟ್ಟ ಕರಿಯಮ್ಮ ಈ ಹಾಡು ಗಳು ಅವರದ್ದೇ ಬದುಕು ಬವಣೆ ಅಕ್ಷರ ಕಲಿಯದೇ ಈ ಇಳಿವಯಸ್ಸಿನಲ್ಲೂ ಎರಡಕ್ಷರ ಕಲಿಯೋದೇ ಲೆಕ್ಕ ಕೇಳೋದೆ ಎಂದ ಕೂಲಂಬಿ ಹರಿಜನ ಕೇರಿಯಲ್ಲಿನ ಚೌಡವ್ವ. ಒಂದೇ ಎರಡೇ ದಾಖಲಿಸಲು..
ಅಂಥ ಪರಿಣಾಮ ಬೀರಿದೆಯೇ ಎಂದರೆ ಹೌದು ಎಂದು ಹೊನ್ನಾಳಿ ರೂಪಶ್ರೀ ಕಲಾತಂಡ ಕಲಾವಿದರು ಸಾಕ್ಷರತೆ ಹಾಡುಗಳು ಅವರದೇ ಆದ ನಿತ್ಯ ಜೀವನದ ಕನ್ನಡಿ ಇದ್ದಂತೆ ಎಂದು ಮರುಗಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಹಳ್ಳಿಯ ಎಲ್ಲರಿಗೂ ಶಿಕ್ಷಣ ಕಲಿಯಲು ವಯಸ್ಸಿಲ್ಲ, ಅಕ್ಷರ ಜ್ಞಾನ ಇಲ್ಲದವರು ಜೀವನದಲ್ಲಿ ಏನೇನು ಸಂಕಷ್ಟ ಎದುರಿಸುವರೆಂಬ ಸಂದೇಶ ಸಾರುವ ಕೆಲ ನಿಮಿಷಗಳ ನಾಟಕ ನೆರೆದ ನೂರಾರು ಗ್ರಾಮಸ್ಥರು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಆಶಾ ಕಾರ್ಯಕರ್ತೆರು, ಅಂಗನವಾಡಿಯರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸಮುದಾಯ ವರ್ಗದ ಜನರ, ಮನತಟ್ಟಿದ ಸಾಕ್ಷರತೆ ಜಾಗೃತಿ ಮೂಡಿಸುವ ಅಭಿಯಾನ ಕೆಲ ಮನಮುಟ್ಟುವ ಹಾಗೆ ಕಲಾವಿದರು ಅವರಲ್ಲಿ ಒಬ್ಬರು ಎನ್ನುವ ನೈಜ ಸಹಜವಾಗಿ ಅಭಿನಯಿಸಿ ತೋರಿಸಿ ಅಕ್ಷರ ಅರಿವು ಮೂಡಿಸಲು ಶ್ರಮಿಸಿದರು.
ತಂಡದ ನೇತೃತ್ವ ವಹಿಸಿದ್ದ ಮಲ್ಲಿಕಾರ್ಜುನ ಸ್ವಾಮಿ ಐರಣಿಚಂದ್ರುರವರ ಹಿನ್ನೆಲೆ ಗಾಯನ ಕುಕ್ಕುವಾಡ ಮಹಾಂತೇಶ್ ಹಿರಿಯ ಕಲಾವಿದ ಬಾನಪ್ಪ ಅವರಗೆರೆ ರುದ್ರೇಶ್ ಲೋಕಿಕೆರೆ ಶಾಂಭವಿ ಹರಿಹರ ಪ್ರಬುದ್ಧತೆ ,ಪತ್ರಕರ್ತ ಪುರಂದರ್ ಲೋಕಿಕೆರೆ ನಾಟಕದ ನಿರೂಪಣೆ ರಾಜಶೇಖರ ಹೊನ್ನಾಳಿ ರವರ ಸಮಯ ಪಾಲನೆ ಒಟ್ಟಾರೆ ಸಾಕ್ಷರತೆ ಜಾಗೃತಿ ಜಾಥ ಆಯ್ದು ಹಳ್ಳಿ ಹಳ್ಳಿಗಳಲ್ಲಿ ಅಕ್ಷರ ಅರಿವು ಕಾರ್ಯಕ್ರಮ ಯಶಸ್ವಿ ಗೊಂಡಿತು.
