ಜಿಎಂಐಟಿ : 2023ರ ಸಾಲಿನ 610 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆ

ಜಿಎಂಐಟಿ : 2023ರ ಸಾಲಿನ 610 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆ

ದಾವಣಗೆರೆ : ನಗರದ ಪ್ರತಿಷ್ಠಿತ ಜಿ ಎಂ ತಾಂತ್ರಿಕ ಮಹಾವಿದ್ಯಾಲಯದ 2023ರ ಸಾಲಿನ ಒಟ್ಟು 610 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂ.ಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲವು ಸಾಫ್ಟ್ವೇರ್ ದೈತ್ಯ ಕಂಪನಿಗಳು ಆರ್ಥಿಕ ಹಿಂಜರಿತದಿಂದ 2023 ನೇ ಸಾಲಿನ ಐಟಿ ವಿದ್ಯಾರ್ಥಿಗಳಿಗೆ ನೇಮಕಾತಿ ನಿರ್ಬಂಧಿಸಿದ್ದವು. ಇಂತಹ ಪರಿಸ್ಥಿತಿಯಲ್ಲೂ ಇತರ ಪ್ರತಿಷ್ಠಿತ ಕಂಪನಿಗಳಾದ ಸೋನಾಟಾ ಸಾಫ್ಟ್ವೇರ್, ಮರ್ಸಿಡೇಸ್ ಬೆನ್ಸ್, ಎಕ್ಸಾವೇರ್ ಟೆಕ್ನಾಲಜೀಸ್, ಟೆಕ್ ಮಹೇಂದ್ರ, ರೋಬೋ ಸಾಫ್ಟ್ ಟೆಕ್ನಾಲಜೀಸ್, ಕ್ವಾಲಿಟೆಸ್ಟ್, ಇಂಟೆಲಿಪಾತ್ ಸಾಫ್ಟ್ವೇರ್, ಎಸ್ ಎಲ್ ಕೆ ಸಾಫ್ಟ್ ವೇರ್ ಸರ್ವಿಸಸ್ ಮುಂತಾದ ಹಲವು ಸಾಫ್ಟ್ ವೇರ್ ಕಂಪನಿಗಳು ಸಂದರ್ಶನ ಪ್ರಕ್ರಿಯೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ತಾಂತ್ರಿಕ ಗುಣಮಟ್ಟ ಹೆಚ್ಚಿಸಲು ಅನೇಕ ತರಬೇತಿ ಸಂಸ್ಥೆಗಳ ಮತ್ತು ಕೈಗಾರಿಕೆಗಳೊಡನೆ ಒಡಂಬಡಿಕೆ ಮಾಡಿಕೊಂಡಿದ್ದು, ಇದುವರೆಗೂ 92 ಕೈಗಾರಿಕೆಗಳೊಡನೆ ಪ್ಲೇಸ್ಮೆಂಟ್, ಇಂಡಸ್ಟ್ರಿಯಲ್ ವಿಸಿಟ್ಸ್, ಇಂಟರ್ನ್ಶಿಪ್ ಮತ್ತು ಕನ್ಸಲ್ಟೆನ್ಸಿ ವರ್ಕ್ ಚಟುವಟಿಕೆಗಳಿಗೆ ಒಪ್ಪಂದವಾಗಿದ್ದು, ವಿವಿಧ ಪ್ರತಿಷ್ಠಿತ ಕಂಪನಿಗಳ 11 ಸೆಂಟರ್ ಆಫ್ ಎಕ್ಸಲೆನ್ಸ್ ಒಳಗೊಂಡಿದೆ ಎಂದು ತಿಳಿಸಿದರು.

2024 ರ ಸಾಲಿನ ಹೊರಹೋಗುವ ವಿದ್ಯಾರ್ಥಿಗಳಿಗೆ ಈಗಾಗಲೇ ಕೆಲವು ಪ್ರತಿಷ್ಠಿತ ಕಂಪನಿಗಳು ಸಂದರ್ಶನ ಪ್ರಕ್ರಿಯೆ ನಡೆಸಲು ಅನುಮತಿ ಕೋರಿದ್ದು, ಆಗಸ್ಟ್ ತಿಂಗಳಿನ ಮಧ್ಯಭಾಗದಿಂದ ಸಂದರ್ಶನ ಪ್ರಕ್ರಿಯೆಗಳು ನಡೆಯಲಿವೆ ಎಂದು ಇದೇ ವೇಳೆ ತಿಳಿಸಿದರು.

ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಶ್ರೀ ಜಿಎಂ ಲಿಂಗರಾಜು, ಆಡಳಿತ ಅಧಿಕಾರಿ ಶ್ರೀ ವೈಯೂ ಸುಭಾಷ್ ಚಂದ್ರ, ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಮತ್ತು ಅಧ್ಯಾಪಕ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!