ಶ್ರೀಶೈಲ ದಲ್ಲಿ ವಿಶೇಷ ಪೂಜೆ: ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದವರಿಂದ ಲಿಂಗ ಪೂಜೆ

ದಾವಣಗೆರೆ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರರು, ಸೊಸೆಯಂದಿರು, ಪುತ್ರಿಯರು, ಅಳಿಯಂದಿರು ಮತ್ತು ಮೊಮ್ಮಕ್ಕಳು ಕುಟುಂಬ ಸಮೇತ ಶ್ರೀಶೈಲಕ್ಕೆ ಆಗಮಿಸಿ ಲಿಂಗಪೂಜೆಯಲ್ಲಿ ಪಾಲ್ಗೊಂಡಿದ್ದರು.
ಬಿಎಸ್‌ವೈ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ ಮತ್ತು ಬಿಜೆಪಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅವರು ಕುಟುಂಬ ಸಮೇತ ಶ್ರೀಶೈಲಕ್ಕೆ ಆಗಮಿಸಿ, ಪೂಜೆ ನೆರವೇರಿಸಿ, ಮಠಕ್ಕೆ ಹಾಜರಾಗಿ ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳ ದರ್ಶನ ಪಡೆದರು.
ಈ ಭೇಟಿ ರಾಜಕೀಯ ಕಾರಣಕ್ಕೋ ಅಥವಾ ಕುಟುಂಬದ ಶಾಂತಿಗಾಗಿಯೋ ಎಂಬ ಹಲವು ಕುತೂಹಲಗಳನ್ನು ಸಾರ್ವಜನಿಕ ವಲಯದಲ್ಲಿ ಕೆರಳಿಸಿದೆ.