SM Krishna: ಮಾಜಿ ಸಿಎಂ ಎಸ್.ಎಂ.ಕೃಷ್ಣ ರವರಿಗೆ ದಾವಣಗೆರೆ ನಗರದ ಎಸ್.ಎಮ್ ಕೃಷ್ಣ ಬಡಾವಣೆ ನಾಗರಿಕರಿಂದ ಶ್ರದ್ಧಾಂಜಲಿ

ದಾವಣಗೆರೆ: (SM Krishna) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದಮಹಮ್ಮದ್ ಆಯುಬ್ ಪೈಲ್ವಾನ್ ರವರ ಆದೇಶದ ಮೇರೆಗೆ ದಾವಣಗೆರೆ ನಗರದ ಭೂದಾಳ್ ರಸ್ತೆ, ಎಸ್.ಎಂ.ಕೃಷ್ಣ ಬಡಾವಣೆ, ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷರು ಸಿ.ಅಣ್ಣಪ್ಪರವರಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ ಎಸ್ ಎಂ ಕೃಷ್ಣ ರವರು ಕಾಲದಲ್ಲಿ ದಾವಣಗೆರೆಯ ಜಿಲ್ಲಾ ಉಸ್ತುವಾರಿಗಳಾಗಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ರವರ ಅಧ್ಯಕ್ಷತೆಯಲ್ಲಿ ದಾವಣಗೆರೆ ನಗರದಲ್ಲಿ 15000 ಆಶ್ರಯ ಮನೆಗಳನ್ನು ನಿರ್ಮಿಸಿದಂತಹ ಹೆಗ್ಗಳಿಕೆ ಎಸ್.ಎಂ ಕೃಷ್ಣರವರಿಗೆ ಸಲ್ಲುತ್ತದೆ ಎಂದು ನೆನಪಿಸಿದರು.
ಈ ಸಂದರ್ಭದಲ್ಲಿ ಎಲ್ ಎಂ ಹೆಚ್ ಸಾಗರ್ ಸದಸ್ಯರು ನಗರ ಪಾಲಿಕೆ ದಾವಣಗೆರೆ, ಅಂಜಿನಪ್ಪ ಬಾಪೂಜಿ, ದಾದಾಪಿರ್ ಕೊಡಪಾನ್, ಲೆಕೇತ್ ಅಲಿ, ಹರೀಶ್.ಹೆಚ್. ನಾಗರಾಜ್,ಅಕ್ಬರ್ ಭಾಷಾ, ಫೈಯಾಜ್ ಅಹಮದ್,ಉಮೇಶ್, ಸ್ವಾಮಿಣ್ಣಾ ನಾಯ್ಕ್, ಬಡಾವಣೆ ನಾಗರಿಕರು ಮುಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು.