ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಜ 26 ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ
ದಾವಣಗೆರೆ: ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಇವರು ಜ.25 ರಂದು ದಾವಣಗೆರೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನೆ ಸಮಾರಂಭ ಮತ್ತು ಭೂಮಿ ಪೂಜೆಯನ್ನು ನೆರೇವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎ ರವೀಂದ್ರನಾಥ್ ವಹಿಸುವರು. ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗಣ್ಯರು ಉಪಸ್ಥಿತಿರಿರುವರು.
ಕಾರ್ಯಕ್ರಮದ ವಿವರ: ಜ.25 ರಂದು ಸಂಜೆ 4.45ಕ್ಕೆ ರಿಂಗ್ ರಸ್ತೆ ಗಡಿಯಾರ ವೃತ್ತದಿಂದ ಸಪ್ತಗಿರಿ ಶಾಲೆ ಮಾರ್ಗವಾಗಿ ಕುಂದುವಾಡ ರಸ್ತೆಗೆ ಸೇರುವ ರಸ್ತೆ ಉದ್ಘಾಟನೆ. 5 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನಿರ್ಮಿಸಿರುವ ವಿದ್ಯುತ್ ಚಿತಾಗಾರದ ಲೋಕಾರ್ಪಣೆ. ನಂತರ 5.15ಕ್ಕೆ ಗಾಜಿನ ಮನೆಯ ಆವರಣದಲ್ಲಿ ನಿರ್ಮಿಸಿರುವ ಸಂಗೀತ ಕಾರಂಜಿ ಮತ್ತು ಲೇಸರ್ ಶೋ ಉದ್ಘಾಟನೆ. ಹಾಗೂ 5.40ಕ್ಕೆ ದೃಶ್ಯ ಕಲಾ ಕಾಲೇಜು ಆವರಣದಲ್ಲಿ ನಿರ್ಮಿಸಲಾಗುವ ಬಯಲು ರಂಗಮಂದಿರ ಹಾಗೂ ಥೀಮ್ ಪಾರ್ಕ್ ಕಾಮಗಾರಿಯ ಭೂಮಿ ಪೂಜೆ ನೆರೆವೇರಿಸುವರೆಂದು ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.