ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಡೆ ಕಾರ್ತಿಕೋತ್ಸವದಲ್ಲಿ ರಾಯರಿಗೆ ವಿಶೇಷ ಅಲಂಕಾರ
ದಾವಣಗೆರೆ: ನಗರದ ಕೆಬಿ ಬಡಾವಣೆಯ ದೀಕ್ಷಿತ್ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಂದು ಕಡೆ ಕಾರ್ತಿಕೋತ್ಸವ ವಿಜೃಂಭಣೆಯಿಂದ ಜರುಗಿತು.
ಸಂಜೆ ಭಕ್ತ ಸಮೂಹ ಮಠದಲ್ಲಿ ನೆರೆದು ಶ್ರೀಗುರು ರಾಯರನ್ನು ಸ್ತುತಿಸಿ, ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ತೀಕೋತ್ಸವ ನಡೆಯಿತು.
ಕಾರ್ತಿಕೋತ್ಸವ ಪ್ರಯುಕ್ತ ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಗುರು ರಾಘವೇಂದ್ರರ ಕೀರ್ತನೆಗಳನ್ನು ಹಾಡಿ ರಾಯರಿಗೆ ತಮ್ಮ ಭಕ್ತಿಯನ್ನ ಸಮರ್ಪಿಸಿದರು.