ಜ.8 ರಂದು ಶ್ರೀ ಶಬರಿಮಲೈ ಅಯ್ಯಪ್ಪಸ್ವಾಮಿ ಮಹಾದೀಪೋತ್ಸವ ರದ್ಧು
ದಾವಣಗೆರೆ: ಶ್ರೀ ಶಬರಿಮಲೈ ಅಯ್ಯಪ್ಪಸ್ವಾಮಿ ಭಕ್ತವೃಂದ ಮಂಡಳಿಯಿಂದ ಇದೇ ಜ.೮ರ ಇಂದು ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ೨೭ನೇ ವರ್ಷದ ಮಹಾದೀಪೋತ್ಸವ ಮತ್ತು ಪಡಿಪೂಜೆಯನ್ನು ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ರದ್ದುಪಡಿಸಿದ್ದು, ಸಾಂಕೇತಿಕವಾಗಿ ಮಾತ್ರವೇ ಕಾರ್ಯಕ್ರಮ ನಡೆಯಲಿದೆ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಪಿ.ರಾಜಕುಮಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀಮಿತ ಸಂಖ್ಯೆಯ ಭಕ್ತರು, ಗುರುಸ್ವಾಮಿಗಳು ಮಾತ್ರವೇ ಸಾಂಕೇತಿಕ ದೀಪೋತ್ಸವ, ಪಡಿಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನುಳಿದಂತೆ ಜ.೧೪ರಂದು ಜ್ಯೋತಿ ಪೂಜೆ ಕಾರ್ಯಕ್ರಮ ಅದೇ ಸ್ಥಳದಲ್ಲಿ ನಡೆಯಲಿದೆ ಎಂದರು.
ಮಂಡಳಿ ಸಹಕಾರ್ಯದರ್ಶಿ ರಾಘವೇಂದ್ರ ಚವ್ಹಾಣ್, ನಿರ್ದೇಶಕರಾದ ಡಿ.ಆರ್.ರವೀಂದ್ರ ಬಾಳೆಹೊಲ, ಅನಿಲ್, ಶಿವ, ಕೆ.ರೇವಣಸಿದ್ದಪ್ಪ, ಅಜಯ್ ಗೋಷ್ಠಿಯಲ್ಲಿದ್ದರು.