ಅಂಚೆ ಮತದಾನಕ್ಕೆ ಅಗತ್ಯ ಸೇವೆಗಳಡಿ ಕಾರ್ಯನಿರ್ವಹಿಸುವವರ ಮಾಹಿತಿ ಸಲ್ಲಿಸಿ -ದಕ್ಷಿಣ ಕ್ಷೇತ್ರದ ಚುನಾವಣಾಧಿಕಾರಿ ಶ್ರೀಮತಿ ರೇಣುಕಾ

ದಾವಣಗೆರೆ : ಅಂಚೆ ಮತಪತ್ರದ ಮೂಲಕ ಹಕ್ಕು ಚಲಾಯಿಸಬಹುದಾದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪಟ್ಟಿಮಾಡಿ ಚುನಾವಣಾಧಿಕಾರಿಗಳಿಗೆ ನೀಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ  ಚುನಾವಣಾಧಿಕಾರಿಗಳಾದ ಶ್ರೀಮತಿ ರೇಣುಕಾ  ಹೇಳಿದರು.

ಗುರುವಾರ ನಗರದ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಅವರು ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಗೆ ಸಂಬಂಧಿಸಿದಂತೆ ಅಗತ್ಯ ಸೇವೆಗಳಡಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಚುನಾವಣೆ ದಿನಾಂಕದಂದು ಅವರುಗಳ ಮತಗಟ್ಟೆಗಳಲ್ಲಿ ಮತದಾನ ಮಾಡಲು ಸಾಧ್ಯವಾಗದೇ ಇರುವುದರಿಂದ ಅಂಚೆ ಮತಪತ್ರದ ಮೂಲಕ ಮತದಾನ ಮಾಡಬಹುದಾಗಿದೆ.

ವಿದ್ಯುತ್, ಬಿಎಸ್.ಎನ್.ಎಲ್, ರೈಲ್ವೆ, ದೂರದರ್ಶನ, ಆರೋಗ್ಯ, ಕೆ.ಎಸ್.ಆರ್.ಟಿ.ಸಿ, ಟ್ರಾಫಿಕ್ ಪೋಲೀಸ್, ಮಾಧ್ಯಮಗಳು ಸೇರಿದಂತೆ 12 ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡುವುದರೊಂದಿಗೆ 106-ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ  107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪಿಗೆ ಒಳಪಡುವ ಅರ್ಹ ವ್ಯಕ್ತಿಗಳ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ಮಾಹಿತಿಯನ್ನು ಕಚೇರಿಗೆ ನೀಡಬೇಕು ಎಂದರು.

ಅಂಚೆ ಮತಪತ್ರದ ಮುಖಾಂತರ ಮತದಾನ ಮಾಡಲು ಇಚ್ಚಿಸುವ ಗೈರು ಹಾಜರಿ ಮತದಾರರು ತಮ್ಮ ವಿವರ ಹಾಗೂ ಮತದಾನದ ದಿನದಂದು ಅಗತ್ಯ ಸೇವೆಯಲ್ಲುವುದರ ಕುರಿತು ಕೋರಲಾದ ಎಲ್ಲಾ ವಿವರಗಳನ್ನು ಒದಗಿಸಿ ನಮೂನೆ-12ಡಿ ಯಲ್ಲಿ ರಿಟರ್ನಿಂಗ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.  ಈ ಅರ್ಜಿಯನ್ನು ಸಂಬಂಧಪಟ್ಟ ಸಂಸ್ಥೆಯು ನೇಮಕ ಮಾಡಿದ ನೋಡೆಲ್ ಅಧಿಕಾರಿಯು ಪರಿಶೀಲಿಸಬೇಕು ಸಂಬಂಧಪಟ್ಟ ಚುನಾವಣಾಧಿಕಾರಿ(ಆರ್‍ಓ) ಗೆ ತಲುಪಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ದೇವರಾಜ್, ಅಗ್ನಿಶಾಮಕ ದಳ ಅಧಿಕಾರಿ ಮುನಿಸ್ವಾಮಿ ನಾಯ್ಕ, ಬೆಸ್ಕಾಂ ವ್ಯವಸ್ಥಾಪಕ ಪ್ರಭಾಕರ್, ಕೆ.ಎಸ್.ಆರ್.ಟಿ.ಸಿ ಡಿಪೋ ವ್ಯವಸ್ಥಾಪಕರಾದ ಹನುಮಂತಪ್ಪ, ಹಾಗೂ ಆಜಾದ್ ನಗರ ಪಿ.ಎಸ್.ಐ ಕಾತರಾಜ್ ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

error: Content is protected !!