ವಾಲ್ಮೀಕಿ ಜಾತ್ರೆಗೆ ಬಾರದ ಸುದೀಪ್ : ಆಕ್ರೋಶಗೊಂಡ ಅಭಿಮಾನಿಗಳಿಂದ ಖುರ್ಚಿ ತೂರಾಟ

ಆಕ್ರೋಶಗೊಂಡ ಅಭಿಮಾನಿಗಳಿಂದ ಖುರ್ಚಿ ತೂರಾಟ
ದಾವಣಗೆರೆ: ಹರಿಹರ ತಾಲ್ಲೂಕು ವಾಲ್ಮೀಕಿ ಜಾತ್ರೆಯಲ್ಲಿ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸುದೀಪ್ ಬಾರದೇ ಇದ್ದುದಕ್ಕೆ ಅಭಿಮಾನಿಗಳು ಆಕ್ರೋಶಗೊಂಡ ಗಲಾಟೆ ಮಾಡಿದ ಪ್ರಸಂಗ ಗುರುವಾರ ನಡೆಯಿತು.
ಜಾತ್ರಾ ಮಹೋತ್ಸವದ ಸಂಜೆ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸುತ್ತಾರೆಂಬ ನಿರೀಕ್ಷೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಆಗಮಿಸಿ ನೆರೆದಿದ್ದರು.
ಸಂಜೆ ಆಗಮಿಸಬೇಕಾಗಿದ್ದ ನಟ ಸುದೀಪ್ ಕಾರಣಾಂತರಗಳಿಂದ ಗೈರಾಗಿದ್ದರು. ಸುದೀಪ್ ಬರುವುದಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಅಭಿಮಾನಿಗಳು ಖುರ್ಚಿಗಳನ್ನು ತೂರಾಡಿ ಜಾತ್ರಾ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳೂ ಸಹ ಸುದೀಪ್ ಬರುತ್ತಾನೆ ಎಂದು ಭರವಸೆ ನೀಡಿದ್ದರು. ಸಂಜೆಯವರೆಗೂ ಸುದೀಪ್ ಬರುತ್ತಾರೆಂದು ಜಾತ್ರಾ ಸಮಿತಿ ಹೇಳಿಕೆ ನೀಡುತ್ತಿದ್ದುದು ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿತ್ತು.