ಜಿಪ್ ಲೈನ್ ನಲ್ಲಿ‌ ಭಾಗಿಯಾಗಿ ಆಕರ್ಷಕ ಜಾಗೃತಿ ಮೂಡಿಸಿದ ಜಿಪಂ ಸಿಇಒ ಸುರೇಶ್ ಇಟ್ನಾಳ್

ಜಿಪ್ ಲೈನ್ ನಲ್ಲಿ‌ ಭಾಗಿಯಾಗಿ ಆಕರ್ಷಕ ಜಾಗೃತಿ ಮೂಡಿಸಿದ ಜಿಪಂ ಸಿಇಒ ಸುರೇಶ್ ಇಟ್ನಾಳ್

ದಾವಣಗೆರೆ :ದಾವಣಗೆರೆ ಮಹಾನಗರ ಪಾಲಿಕೆಯ ಆವರಣದಲ್ಲಿ ಸುಮಾರು 35 ಅಡಿ ಎತ್ತರದಿಂದ 50 ಮೀಟರ್ ಉದ್ದದ ಜಿಪ್ ಲೈನ್ ಅನ್ನು ಮಾಡಿಸುವುದರ ಮೂಲಕ ಮತದಾನ ಜಾಗೃತಿಯನ್ನು ವಿಶೇಷವಾಗಿ ನಡೆಸಲಾಯಿತು.

ಜಿಪ್ ಲೈನ್ ನಲ್ಲಿ‌ ಭಾಗಿಯಾಗಿ ಆಕರ್ಷಕ ಜಾಗೃತಿ ಮೂಡಿಸಿದ ಜಿಪಂ ಸಿಇಒ ಸುರೇಶ್ ಇಟ್ನಾಳ್

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಅವರು ಜಿಪ್ ಲೈನ್ ಮಾಡಿದ್ದುದು ಮತದಾರರ ಜಾಗೃತಿಗೆ ವಿಶೇಷ ಆಕರ್ಷಣೆಯಾಗಿತ್ತು.

ಈ ಸಾಹಸ ಕ್ರೀಡೆಯನ್ನು ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ನಡೆಸಿ ಕೊಟ್ಟಿತು. ಸುಮಾರು 100 ಕೂ ಹೆಚ್ಚಿನ ಯುವಕ, ಯುವತಿಯರು, ಕ್ರೀಡಾಪಟುಗಳು ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾ ನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತಾ ಎಂ ನೆಲವಿಗಿ, ಕಛೇರಿ ಸಿಬ್ಬಂದಿ ಸೈಯಾದ್ ಬಾಷಾ, ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಕಾರ್ಯದರ್ಶಿ ಹಾಗೂ ಸಾಹಸ ಕ್ರೀಡಾ ತರಬೇತುದಾರ ಎನ್. ಕೆ ಕೊಟ್ರೇಶ್, ಸಹಾಯಕ ತರಬೇತುದಾರರಾದ ಶಶಿಕುಮಾರ್, ನಾಗರಾಜ್, ಬಸವರಾಜ್, ದೀಪಕ್, ಸಂಗಮೇಶ್, ಮಾಲತೇಶ್,ಹ ರ್ಷ ಮುಂತಾದವರು ಉಪಸ್ಥಿತರಿದ್ದರು

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮತದಾರರು ಮತಗಟ್ಟೆಯ ಕಡೆಗೆ ಜಾಗೃತಿ ಮೂಡಿಸುವ ಸಲುವಾಗಿ,”ನಮ್ಮ ನಡೆ ಮತಗಟ್ಟೆ ಕಡೆ” ಎನ್ನುವ ಅಭಿಯಾನವನ್ನು ವಿಭಿನ್ನವಾಗಿ ಸಾಹಸ ಕ್ರೀಡೆಯಾದ ಜಿಪ್ ಲೈನ್ ಮಾಡುವುದರ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು.

ಜಿಪ್ ಲೈನ್ ನಲ್ಲಿ‌ ಭಾಗಿಯಾಗಿ ಆಕರ್ಷಕ ಜಾಗೃತಿ ಮೂಡಿಸಿದ ಜಿಪಂ ಸಿಇಒ ಸುರೇಶ್ ಇಟ್ನಾಳ್

Leave a Reply

Your email address will not be published. Required fields are marked *

error: Content is protected !!