ಲೋಕಲ್ ಸುದ್ದಿ

ಸೋಲುವ ಭಯದಿಂದ ಅಪ ಪ್ರಚಾರ ಮಾಡಿಸುತ್ತಿದ್ದಾರೆ ಕಿವಿಗೊಡಬೇಡಿ; ಬಿ.ಎಂ. ವಾಗೀಶ ಸ್ವಾಮಿ

ಸೋಲುವ ಭಯದಿಂದ ಅಪಪ್ರಚಾರ ಮಾಡುತ್ತಿದ್ದಾರೆ ಕಿವಿಗೊಡಬೇಡಿ; ಬಿ.ಎಂ. ವಾಗೀಶಸ್ವಾಮಿ

ದಾವಣಗೆರೆ: ಸುಮಾರು ವರ್ಷಗಳಿಂದಲೂ ಕೆಲವರು ನನ್ನ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಇದನ್ನು ಮಾಯಕೊಂಡ ಕ್ಷೇತ್ರದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಒಬ್ಬ ವ್ಯಕ್ತಿಯನ್ನು ಎದುರಿಗೆ ಬಂದ ಎದುರಿಸುವ ಬದಲು ಬೇರೆಯವರ ಮೂಲಕ ಕಾನೂನು ಬಾಹಿರ ಹೇಳಿಕೆಗಳನ್ನು ಕೊಡಿಸಲಾಗುತ್ತಿದೆ. ಇದಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರಾಗಿ ಸ್ಪರ್ಧಿಸಿರುವ ಪುಷ್ಪಾ ಅವರ ಪತಿ ಬಿ.ಎಂ. ವಾಗೀಶ ಸ್ವಾಮಿ ಹೇಳಿದ್ದಾರೆ.

https://fb.watch/kglC9lBqom/?mibextid=DcJ9fc

ಮಾಯಕೊಂಡ ಕ್ಷೇತ್ರದ ಮತದಾರರಿಗೆ ಬದಲಾವಣೆ ಬೇಕು ಎಂಬ ನಿಟ್ಟಿನಲ್ಲಿ ಜನತೆ ನಮಗೆ ಎಲ್ಲಿಲ್ಲದ ಬೆಂಬಲ ತೋರಿಸುತ್ತಿದ್ದಾರೆ. ಇದನ್ನು ನೋಡಿ ನಮ್ಮ ಎದುರು ಸ್ಪರ್ಧಿಸುವಂತಹವರು ಸಹನೆ ಕಳೆದುಕೊಂಡಿದ್ದಾರೆ. ಕೆಲವರಿಂದ ತಪ್ಪು ಹೇಳಿಕೆಗಳನ್ನು ನೀಡಿಸುತ್ತಿದ್ದಾರೆ ಎಂದು ಹೇಳಿದರು.

ವಾಗೀಶ ಸ್ವಾಮಿ ಅವರನ್ನು ಬಂಧಿಸಬೇಕು ಎಂದು ಹೇಳುತ್ತಾರೆ. ನಾನು ತಪ್ಪು ಮಾಡಿದರೆ ಬಂಧಿಸಲಿ, ನನ್ನ ತಕರಾರಿಲ್ಲ. ಆದರೆ ವಿಷಯ ನ್ಯಾಯಾಲಯದಲ್ಲಿದ್ದು, ತಾವು ಸೋಲುತ್ತೇವೆಂಬ ಭಯದಿಂದ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಕಾನೂನು ಬದ್ಧವಾಗಿರುವುದರಿಂದಲೇ ನನ್ನ ಪತ್ನಿ ಪುಷ್ಪಾ ಅವರ ನಾಮಪತ್ರ ಸ್ವೀಕೃತವಾಗಿದೆ. ಚುನಾವಣಾ ಆಯೋಗ ಸ್ಪರ್ಧೆಗೆ ಅವಕಾಶ ನೀಡಿದೆ. ಚುನಾವಣೆಯಲ್ಲಿ ಸುಮ್ಮನೆ ಸ್ಪರ್ಧಿಸಲು ನಮಗೇನು ಬುದ್ಧಿ ಭ್ರಮಣೆಯಾಗಿಲ್ಲ. ಕಾನೂನಾತಮಕ ಅವಕಾಶ ಇದೆ ಎಂದೇ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದರು.

ಯಾವುದೇ ತಪ್ಪು ಹೇಳಿಕೆಗಳಿಗೆ ಕಿವಿಗೊಡದೆ. ಹಿಂದಿನಂತೆಯೇ ಪರೀತಿ ವಿಶ್ವಾಸ ತೋರಿಸುವಂತೆ ಅವರು ಮಾಯಕೊಂಡ ಕ್ಷೇತ್ರದ ಮತದಾರರಲ್ಲಿ ವೀಡಿಯೋ ಮೂಲಕ ಮನವಿ ಮಾಡಿದ್ದಾರೆ.

 

Click to comment

Leave a Reply

Your email address will not be published. Required fields are marked *

Most Popular

To Top