ದಾವಣಗೆರೆ: ಸ್ವಚ್ಛ ಮನ, ಸ್ವಚ್ಛ ಮನೆ ಶೀರ್ಷಿಕೆಯಡಿ ಅಸಂಕ್ರಮಿಕಾ, ಅನುವಂಶಿಕ, ರಕ್ತ ಸಂಬಂದಿ ಖಾಯಿಲೆ ಗಳ ಬಗ್ಗೆ ಸಾರ್ವಜನಿಕ ರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ಹೇಳಿದರು.
ಇಲ್ಲಿನ ಎಸ್.ನಿಜಲಿಂಗಪ್ಪ ಬಡಾವಣೆ ಯ ಗಡಿಯಾರ ಕಂಬದ ಸರ್ಕಲ್ ಬಳಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಇಲಾಖೆ , ಜಿಲ್ಲಾ ಯೋಗ ಒಕ್ಕೂಟ, ವಿವಿಧ ಸಂಘ, ಸಂಸ್ಥೆ ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ, ರಾಜ್ಯ ಸರ್ಕಾರ ಗಳು ಆರೋಗ್ಯ ಉಪ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಸಾರ್ವಜನಿಕ ರಿಗೆ ಸಾಕಷ್ಟು ಆರೋಗ್ಯ ದ ಬಗ್ಗೆ ಜಾಗೃತಿ ಕಾರ್ಯಕ್ರಮ ಗಳನ್ನು ಆಯೋಜಿಸುತ್ತ ಬಂದಿದೆ. ಪ್ರತಿಯೊಬ್ಬರು ನಿತ್ಯ ಯೋಗ, ಸೈಕ್ಲಿಂಗ್ ಸೇರಿದಂತೆ ವಿವಿಧ ಅರೋಗ್ಯ ಕರ ಚಟುವಟಿಕೆ ಗಳನ್ನು ಮಾಡುವುದರಿಂದ ಖಾಯಿಲೆ ಗಳಿಂದ ದೂರ ಇರಲು ಸಾಧ್ಯ ಎಂದರು.
ಜಿಲ್ಲಾ ಸರ್ವೇಕ್ಷಣಾ ಇಲಾಖೆಯ ಡಾ.ಜಿ.ಡಿ.ರಾ ಘವನ್ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರ ಗಳನ್ನು ಯೋಗ ಮತ್ತು ಹೆಲ್ತ್ ಅಂಡ್ ವೆಲ್ನೆಸ್ ಕೇಂದ್ರಗಳನ್ನಾಗಿ ಮೇಲ್ ದರ್ಜೆಗೆ ಏರಿಸಲಾಗಿದೆ. ಇದರ ಉದ್ದೇಶ ರೋಗಿ ಗಳಿಗೆ ಬರೀ ಚಿಕಿತ್ಸೆ ನೀಡುವುದು ಮಾತ್ರ ಅಲ್ಲ. ಅದರ ಜೊತೆ ಯೋಗ, ಧ್ಯಾನ, ಇ-ಸಂಜೀವಿನಿ, ಟೆಲಿ ಮೆಡಿಸಿನ್ ನಂತಹ ಬೇರೆ ಬೇರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ನವೆಂಬರ್ ನಿಂದ 2023ರ ಆಕ್ಟೋಬರ್ ವರೆಗೆ ಪ್ರತೀ ತಿಂಗಳು 14ನೇ ತಾರೀಕು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಇಂದು ಸೈಕಲ್ ಜಾಥಾ ಮೂಲಕ ಸಾರ್ವಜನಿಕ ರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ದೇವರಾಜ, ನಟರಾಜ್, ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ತೀರ್ಥರಾಜ್ ಹೋಲುರು, ಮಹಾಂತೇಶ, ನಿರಂಜನ, ಮಹೇಶ್, ಉಳವಯ್ಯ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕ ರು ಭಾಗವಹಿದ್ದರು.
ಜಾಥಾವು ಸಂಗೊಳ್ಳಿ ರಾಯಣ್ಣ ಸರ್ಕಲ್, ಪಿ.ಬಿ.ರಸ್ತೆ ಮೂಲಕ ಅಕ್ಕಮಹಾದೇವಿ ರಸ್ತೆ, ಹರಳೆಣ್ಣೆ ಕೊಟ್ರಬಸಪ್ಪ ಸರ್ಕಲ್, ಚರ್ಚ್ ರಸ್ತೆ , ಎಂಸಿಸಿ ಎ ಬ್ಲಾಕ್, ಮಾರ್ಗವಾಗಿ ವಾಪಾಸ್ ಎಸ್. ನಿಜಲಿಂಗಪ್ಪ ಬಡಾವಣೆ ತಲುಪಿತು.
