teacher; ‘ಪ್ರತಿಯೊಬ್ಬರ ಸಾಧನೆಗೆ ಶಿಕ್ಷಕರು ನೀಡಿದ ಕೊಡುಗೆ ಅಪಾರ’
ದಾವಣಗೆರೆ, ಸೆ. 06: ಒಬ್ಬ ವಿದ್ಯಾರ್ಥಿ ಡಾಕ್ಟರ್, ಇಂಜಿನಿಯರ್, ರಾಜಕಾರಣಿ, ಕಾರ್ಪೊರೇಟರ್ ಆಗಲು ಶಿಕ್ಷಕರ (teacher) ಪಾತ್ರ ಬಹಳ ಮುಖ್ಯ. ಪ್ರತಿಯೊಬ್ಬರ ಸಾಧನೆಗೆ ಅವರ ಶಿಕ್ಷಕರು ನೀಡಿದ ಕೊಡುಗೆ ಅಪಾರ ಎಂದು ಶಿವಮೊಗ್ಗದ ಧಮಾಧ್ಯಕ್ಷರಾದ ಡಾ.ಫ್ರಾನ್ಸಿಸ್ ಸೆರಾವೋ ತಿಳಿಸಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಸೆಂಟ್ ಪಾಲ್ಸ್ ಕಾನ್ವೆಂಟ್ ಶಾಲೆ ಆವರಣದಲ್ಲಿ ಸೆಂಟ್ ಪಾಲ್ಸ್ ವಿದ್ಯಾ ಸಂಸ್ಥೆಯ ಪ್ಲಾಟಿನಂ ಜ್ಯೂಬಿಲಿಯ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
77 ವರ್ಷಗಳ ಹಿಂದೆ ಈ ಶಾಲೆ ಕೇವಲ 6 ವಿದ್ಯಾರ್ಥಿಗಳು, ಮೂವರು ಶಿಕ್ಷಕರೊಂದಿಗೆ ಆರಂಭಗೊಂಡು ಇತಿಹಾಸವಾಗಿದ್ದು, ಇಂದು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಲ್ಲಿ ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ ಓದಿದವರಲ್ಲಿ ವಿಜ್ಞಾನಿಗಳಾಗಿ, ಪೊಲೀಸ್ ಅಧಿಕಾರಿಗಳಾಗಿ, ವೈದ್ಯರಾಗಿ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ, ಉದ್ಯಮಿ, ರಾಜಕಾರಣಿಗಳು, ಪಾಲಿಕೆ ಮಹಾಪೌರರಾಗಿ, ಸದಸ್ಯರಾಗಿ, ಶಿಕ್ಷಕರಾಗಿ ಹೊರ ಹೊಮ್ಮಿ ತಮ್ಮ ಸೇವಾ ಕಾರ್ಯದಲ್ಲಿ ಯಶಸ್ಸು ಕಂಡಿದ್ದಾರೆ, ಕಾಣುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಗೆ, ಉನ್ನತ ಮಟ್ಟಕ್ಕೇರಲು ಶಾಲೆಯ ಸಿಸ್ಟರ್ಸ್ ಹಾಗೂ ಶಿಕ್ಷಕರು ತುಂಬಾ ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶ ಈ ವಿದ್ಯಾಸಂಸ್ಥೆಯದ್ದಾಗಿದೆ. ಈ ಶಾಲೆಯಲ್ಲಿ ಅಲ್ಮುನಿ ಎಂಬ ಹಳೆ ವಿದ್ಯಾರ್ಥಿಗಳ ಬಳಗವನ್ನು ಮಾಡಿ ಹಳೆಯ ಎಲ್ಲಾ ವಿದ್ಯಾರ್ಥಿಗಳು ಸೇರಿ ಸಂತೋಷ ಪಡುವಂತಾಗಿದೆ. ನೀವುಗಳು ಸಹ ಶಾಲೆಯಲ್ಲಿ ಶಿಕ್ಷಕರು ಕಲಿಸುವ ಪಾಠವನ್ನು ಶ್ರದ್ಧೆಯಿಂದ ಕಲಿತು, ನಿಮ್ಮ ಪೋಷಕರಿಗೆ, ಗುರುಗಳಿಗೆ, ಶಾಲೆಗೆ, ನಾಡಿಗೆ ಕೀರ್ತಿ ತರುವಂತಾಗಿರಿ ಎಂದು ಹಾರೈಸಿದರು.
ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ನಾನೂ ಸಹಾ ಈ ಶಾಲೆಯ ಹಳೆಯ ವಿದ್ಯಾರ್ಥಿ, ಈ ಶಾಲೆ ೭೫ ವರ್ಷ ಕಳೆದಿದೆ ಎಂದರೆ ನಂಬಲಾಗಲ್ಲ. ಅಲ್ಮುನಿ ಬಳಗವನ್ನು ಮಾಡಿ ಮತ್ತೆ ಎಲ್ಲರೂ ಸಹಾ ಸೇರುವಂತಹ ಕೆಲಸವನ್ನು ಈ ವಿದ್ಯಾಸಂಸ್ಥೆ ಮಾಡಿದೆ. ನೀವುಗಳೂ ಉತ್ತಮ ಪ್ರಜೆಗಳಾಗಿರಿ ಎಂದು ಶುಭ ಕೋರಿದರು.
“ಯುವ ಪೀಳಿಗೆ ಮಾಧಕ ವಸ್ತು” ವಿರುಧ್ಧ ಸಮರ ಸಾರಲು ಇನ್ಸೈಟ್ಸ್ ಐಎಎಸ್ ವಿನಯ್ ಕುಮಾರ್ ಕರೆ
ಶಾಲೆಯ ಅಲ್ಮುನಿ ಬಳಗದ ಅಧ್ಯಕ್ಷ ಮಾತನಾಡಿ, ಈ ವಿದ್ಯಾಸಂಸ್ಥೆಯಲ್ಲಿ ಓದಿದವರು ಅನೇಕರು ಅನೇಕ ಉನ್ನತ ಹುದ್ದೆಯಲ್ಲಿ, ದೇಶ, ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆ ಮಕ್ಕಳಿಗೆ ಉತ್ತಮ ಅಡಿಪಾಯವಾಗಿದೆ. ಯಾವುದೇ ಕ್ಷೇತ್ರ ಇರಲಿ, ನಿಸ್ವಾರ್ಥವಾಗಿ ಸೇವೆ ಮಾಡಿ ನಿಮ್ಮ ನಾಡಿಗೆ, ನಿಮ್ಮ ಗುರುಗಳಿಗೆ, ಶಾಲೆಗೆ ಕೀರ್ತಿ ತನ್ನಿರಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಸಿಸ್ಟರ್ ಮಾರ್ಜರಿ, ಸಿಸ್ಟರ್ ಮಾರ್ಟಿನಲ್, ಸಿಸ್ಟರ್ ಸಮಂತ, ಸಿಸ್ಟರ್ ವನೀಸಾ, ಸಿಸ್ಟರ್ ಸುಪ್ರಿಯ, ಸಿಸ್ಟರ್ ಲಿಂಡಾ, ಸಿಸ್ಟರ್ ರೋಸಿಂತಾ, ಶಾಲೆ ಹಳೆಯ ವಿದ್ಯಾರ್ಥಿನಿ, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ಶುಕ್ಲಶೆಟ್ಟ ಸೇರಿದಂತೆ ಶಿಕ್ಷಕರಾದ ಎಂ.ಕೆ.ಮಂಜುಳಾ, ವಿವಿಧ ವಿಭಾಗಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಲೆಯ ಮಕ್ಕಳು ಮುಖ್ಯಸ್ಥರುಗಳಿಗೆ, ಶಿಕ್ಷಕರುಗಳಿಗೆ ಪುಷ್ಪ ವೃಷ್ಟಿ ಮಾಡಿ ನಮಸ್ಕರಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.