“ಯುವ ಪೀಳಿಗೆ ಮಾಧಕ ವಸ್ತು” ವಿರುಧ್ಧ ಸಮರ ಸಾರಲು ಇನ್ಸೈಟ್ಸ್ ಐಎಎಸ್ ವಿನಯ್ ಕುಮಾರ್ ಕರೆ

ದಾವಣಗೆರೆ: ಮಾಧಕ ವಸ್ತು ಗಳು ಸಾಮಾಜಿಕ ಪಿಡುಗು ಇಂಥ ಸಮಾಜ ವಿರೋಧಿ ವ್ಯಸನಗಳಿಂದ ಈಗೀನ ಯುವ ಸಮೂಹ ಯುವಜನರು ಬಲಿಯಾಗುತ್ತಿರುವುದು ಖೇದಕರ ಸಂಗತಿ, ಜೀವನವನ್ನೇ ಸರ್ವ ನಾಶ ಮಾಡುವ ಈ ಪೀಡುಗಿನ ವಿರುದ್ಧ ಸಮರ ಸಾರಲು -ಇನ್ಸೈಟ್ಸ್ ಐಎಎಸ್ ಕೋಚಿಂಗ್ ನಿರ್ದೇಶಕ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್ ರವರು ಕರೆ ನೀಡಿದರು. ನಗರದ ಜಯದೇವ ವೃತ್ತದಲ್ಲಿ ವಿಜಯ ಕರ್ನಾಟಕ ಪತ್ರಿಕೆ ಇನ್ ಸೈಟ್ಸ್ ಐಎಎಸ್ ಸೆಂಟರ್ , ತಪೋವನ, ಜಿಲ್ಲಾಡಳಿತ ಜಿಲ್ಲಾ ಪೋಲಿಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಧಕ ವ್ಯಸನ ಮುಕ್ತ ಕರ್ನಾಟಕ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಜಾಗತಿಕ ಮಟ್ಟದಲ್ಲಿ ಈ ಪೀಡುಗಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲೇಂದು ಆಶಿಸುತ್ತೇನೆ.

ಈಗೀನ ಶಿಕ್ಷಣ ಸಂಸ್ಥೆಗಳು ಬರೀ ಪಠ್ಯ ವಾಚನ ಅಂಕಗಳ ಬೆನ್ನತ್ತಿ ಹೋಗುವ ಪ್ರವೃತ್ತಿ ಬೆಳೆದಿದೆ, ಪಠ್ಯ ವಾಚನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಕಾರ್ಯ ನಿರ್ವಹಿಸಿ ಸಧೃಡ ಸಮಾಜ ನಿರ್ಮಾಣಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡಿಕೊಳ್ಳಲು ಸಹಕಾರ ಅಗತ್ಯಾ ವೆಂದು ತಿಳಿಸಿದರು,  ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ರವರ ಸೋಷಿಯಲ್ ಮೀಡಿಯಾ ಬಳಕೆ ಕೂಡ ಸಾಮಾಜಿಕ ಪಿಡುಗು, ಎಂಬ ಕಳಕಳಿ ಮಾನವೀಯ ಮೌಲ್ಯಗಳ ಮಾತನ್ನು ಬೆಂಬಲಿಸಿ ಪ್ರಭಾ ಮೇಡಂ ಸಾಂದರ್ಭಿಕ ಇಂಥ ಪೀಡುಗಿನ ವಿರುದ್ಧ ಇಡೀ ರಾಜ್ಯದ ಜನತೆಯುವ ಸಮೂಹ ಎಚ್ಚೆತ್ತು ಕೊಳ್ಳುವುದು ಸಮ, ಸಮಾಜದ ಏಳ್ಗೆಗಾಗಿ ಶ್ರಮಿಸುವತ್ತ ಹೆಜ್ಜೆ ಹಾಕಲಿ ಎಂದು ವಿನಯ್ ಆಶಿಸುತ್ತೇನೆ ಎಂದರು.

ಎಸ್. ಎಸ್. ಕೆ. ಟ್ರಸ್ಟೀ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ರವರು ಇಂಥ ಮಾಧಕ ವಸ್ತು ಪೀಡುಗಿನ ವಿರುದ್ಧ ಬೀದಿಗಿಳಿದು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜಯ ಕರ್ನಾಟಕ ಪತ್ರಿಕೆ ಸಹಯೋಗ ಸಂಸ್ಥೆ ಗಳ ಕಾರ್ಯ ಶ್ಲಾಘನೀಯ, ನಮ್ಮ ಬಾಪೂಜಿ ವಿದ್ಯಾಸಂಸ್ಥೆ ಕೈ ಜೋಡಿಸಲಿದೆ, ಯುವ ಪೀಳಿಗೆ ಮಾಧಕ ವಸ್ತು ಪೀಡುಗಿನಿಂದ ಮಾತ್ರ ಅಲ್ಲ ಸೋಷಿಯಲ್ ಮೀಡಿಯಾ ದಿಂದಲೂ ದೂರವಿದ್ದು ಶಿಕ್ಷಣ ನೈತಿಕತೆ ಬೆಳೆಸಿಕೊಳ್ಳಲು ಮನವಿ ಮಾಡಿದರು. ಜಿಲ್ಲಾಧಿಕಾರಿ ವೆಂಕಟೇಶ್ ರವರು ಪ್ರತಿ ಎರಡು ಗಂಟೆಗೊಮ್ಮೆ ಮಾಧಕ ವಸ್ತು ಪೀಡುಗಿನಿಂದ ನರಳುತ್ತಿರುವ ಜನರು ಬಲಿಯಾಗುವುದು ಬೇಡ ಹೆಚ್ಚಿನ ಸಂಖ್ಯೆಯಲ್ಲಿ ನಗರದಲ್ಲಿ ಈ ಪಿಡುಗು ಹೆಚ್ಚು, ಆರಂಭದಲ್ಲಿ ಕುತೂಹಲ ದಿಂದ ಆರಂಬಿಸಿದ ವ್ಯಕ್ತಿ ಕಡೆಗೆ ಅದೇ ಚಟವಾಗಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಸಂಶೋಧನೆ ಸಾಭಿತಾಗಿದೆ, ಕಾಲೇಜಿನ ವಿದ್ಯಾರ್ಥಿಗಳು ಈ ಪೀಡುಗಿನಿಂದ ದೂರವಿರುವಂತೆಕಿವಿ ಮಾತು ಹೇಳಿದರು.

ಮೊದಲಿಗೆ ನಗರದ ಗುಂಡಿ ಮಹಾದೇವಪ್ಪ ವೃತ್ತದಲ್ಲಿ ನೂತನ ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಜಾಗೃತಿ ಅಭಿಯಾನ ಜಾಥಾ ಗೇ ಚಾಲನೆ ನೀಡಿದರು. ಜಯದೇವ ವೃತ್ತದಲ್ಲಿ ನೆಡೆದ ಪ್ರತಿಜ್ಞಾ ವಿಧಿ ಯನ್ನ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಬೋಧಿಸಿದರು, ಅಧ್ಯಕ್ಷತೆಯನ್ನು ತಪೋವನ ಸಂಸ್ಥೆ ನಿರ್ದೇಶಕ ಶಶಿಕುಮಾರ್ ಮೆಹಾರ್ವಾಡೆ, ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸಿ ಇ ಓ ಸುರೇಶ್ ಇಟ್ನಾಳ್,  ಅಪಾರ ಎಸ್ಪಿ ಬಸರ್ಗಿ, ಅಬಕಾರಿ ಎಸ್ಪಿ ಸಪ್ನ, ಡಿಡಿಪಿಐ ಷಣ್ಮುಖಪ್ಪ,  ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನೂರಾರು ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಸೇರಿದ ಅತಿಥಿಗಳು ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಅಭಿಯಾನದಲ್ಲಿ ಹಸ್ತಾಕ್ಷರ ಹಾಕುವ ಮೂಲಕ ಸಾಮಾಜಿಕ ಪಿಡುಗು ತಡೆಯಲು ಬೆಂಬಲಿಸಿ ಬೋರ್ಡ್ ಪಲಕದಲ್ಲಿ ಸಹಿ ಹಾಕಿದರು.

Leave a Reply

Your email address will not be published. Required fields are marked *

error: Content is protected !!