teachers day; ಸಾಣೆಹಳ್ಳಿ ಮಠ, ಗುರುವಿನ ಬಗ್ಗೆ ವಿದ್ಯಾರ್ಥಿನಿಯ ಮನದಾಳದ ಮಾತು

ದಾವಣಗೆರೆ: ಹೊಸದುರ್ಗದ ಸಾಣೇಹಳ್ಳಿ ಶ್ರೀ ಮಠದ ಪೂಜ್ಯ ಡಾ. ಶ್ರೀಪಂಡಿತಾರಾಧ್ಯ ಶ್ರೀಗಳ ಮುಂದಾಳತ್ವದಲ್ಲಿ ನಾನಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಲ್ಲಿ ಹೋದ ಸಂದರ್ಭದಲ್ಲಿನ ಅನುಭವವನ್ನು ವಿದ್ಯಾರ್ಥಿನಿಯೊಬ್ಬರು ಶಿಕ್ಷಕರ ದಿನಾಚರಣೆ (teachers day) ನಿಮಿತ್ತ ಹಂಚಿಕೊಂಡಿದ್ದಾರೆ.

ದಾವಣಗೆರೆ ತಾಲೂಕು ಕೃಷಿ ಅಧಿಕಾರಿ ಶ್ರೀಧರಮೂರ್ತಿ ಮಗಳು ಎಸ್.ಪ್ರಕೃತಿ ಪ್ರತಿವರ್ಷ ಸಾಣೆಹಳ್ಳಿಯ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯಲ್ಲಿ ನಡೆಯುವ ಮಕ್ಕಳ ಹಬ್ಬಕ್ಕೆ ಹೋಗಿದ್ದು, ಅಲ್ಲಿ ಗುರುಗಳು ಹೇಳಿಕೊಟ್ಟ ಮಾರ್ಗ, ಸಂಪ್ರದಾಯ, ವಚನಗಳನ್ನು ಬಿಚ್ಚಿಟ್ಟಿದ್ದಾರೆ. ನಾನು ಬೇಸಿಗೆ ಶಿಬಿರಕ್ಕೆ ಹೋಗಿದ್ದು, ಮೊದಲನೇ ಬಾರಿ ಮಠದ ವಾತಾವರಣ, ಗುರುಗಳ ವಿಚಾರಧಾರೆ, ಅಲ್ಲಿ ಕಲಿಸಿಕೊಡುವ ವಿವಿಧ ಚಟುವಟಿಕೆಗಳಿಗೆ ಆಕರ್ಷಿತಳಾದೆ. ಸಾಣೆಹಳ್ಳಿಯಲ್ಲಿ ಸಂಸ್ಕಾರ ಕೊಡುವ ಉದ್ದೇಶದಿಂದಲೇ ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಮಕ್ಕಳ ಹಬ್ಬ ಎನ್ನುವ ಶಿಬಿರ ನಡೆಸುತ್ತಿರುವ ಗುರುಗಳ ಈ ಚಿಂತನೆಗೆ ನಾನೂ ಯಾವಾಗಲೂ ಅಬಾರಿ. ಅಂದಹಾಗೆ ಗುರುಗಳ ಬಗ್ಗೆ ಈ ವರ್ಷದ ಶಿಕ್ಷಕರ ದಿನದಂದು ಬರೆಯುವುದಕ್ಕೆ ನನಗೆ ಅವಕಾಶ ಸಿಕ್ಕಿರುವುದು ಪುಣ್ಯದ ಮಾತೇ ಸರಿ.

ಇತ್ತೀಚೆಗೆ ನಾನಾ ರಾಜ್ಯಗಳಲ್ಲಿ ಪ್ರದರ್ಶನಗೊಂಡು ಬಂದಿರುವ ‘ನೀ ಇಲ್ಲದೇ ಮತ್ತಾರು ಇಲ್ಲವಯ್ಯ’ ವಚನ ಸಂಸ್ಕೃತಿ ಅಭಿಯಾನ ಸಾಣೆಹಳ್ಳಿಯಲ್ಲಿ ಯಶಸ್ವಿಯಾಗಿ ಸೆಪ್ಟೆಂಬರ್ 2ರಂದು ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತ್ತು. 14 ರಾಜ್ಯಗಳ 52 ಸ್ಥಳಗಳಲ್ಲಿ ಈ ನಾಟಕ ಪ್ರದರ್ಶನಗೊಂಡಿದೆ. ಅದರ ದಾವಣಗೆರೆಯ ಪ್ರದರ್ಶನದಲ್ಲಿ ನಾನು ಪಾಲ್ಗೊಂಡಿದ್ದು ಅದೃಷ್ಟವೇ ಸರಿ.

ಈ ನಾಟಕದಲ್ಲಿ ವಚನ ನೃತ್ಯವು ನನ್ನ ಮನ ತಣಿಸುವಂತಿತ್ತು. ಪ್ರತಿ ವರ್ಷ ಸಾಣೇಹಳ್ಳಿ ಶ್ರೀಗಳ ಮುಂದಾಳತ್ವದಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿವೆ. ಅದರಲ್ಲಿ ಮತ್ತೆ ಕಲ್ಯಾಣ,ಶ್ರಾವಣ ಸಂಜೆ, ರಾಷ್ಟ್ರೀಯ ನಾಟಕೋತ್ಸವ, ಶಿವ ಸಂಚಾರದ ನಾಟಕಗಳು ನನಗೆ ಅಚ್ಚು ಮೆಚ್ಚುಘಿ.
ಪ್ರತೀ ಮುಂಜಾನೆ ಬರುವ ಅವರ ಒಲಿದಂತೆ ಹಾಡುವೆ ಎನ್ನುವ ವಾಟ್ಸಪ್ ಸಂದೇಶವೂ ತುಂಬಾ ಅಮೂಲ್ಯವಾದದ್ದು, ಶ್ರೀ ಗಳ ಇಷ್ಟಲಿಂಗ ದೀಕ್ಷ, ವಚನ ಸಂದೇಶವೂ ಯಶಸ್ವಿ ಕಾರ್ಯಕ್ರಮಗಳಾಗಿದೆ.

ಸಾಣೆಹಳ್ಳಿ ಮಠದ ಬಗ್ಗೆ ಹೇಳುವುದಾದರೆ, ಇಲ್ಲಿಯ ಕಲಿಕೆಯು ಬಹಳ ವಿಭಿನ್ನ. ರಂಗತರಬೇತಿ ಕೊಡಲು ಹಲವಾರು ಕಟ್ಟಡಗಳಿವೆ. ಎಸ್..ಎಸ್ ರಂಗಮಂದಿರ, ಬಯಲು ರಂಗಮಂದಿರ, ಕುಟೀರ, ರಂಗಶಾಲೆ, ಗ್ರೀಕ್ ಸ್ಟೇಜ್ ಎಂಬ ಕಟ್ಟಡಗಳಿವೆ.

ಸಾಣೆಹಳ್ಳಿಯ ಶ್ರೀಗಳ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಎಲ್ಲಾ ಕಾರ್ಯಕ್ರಮಗಳಿಗೆ ಇಲ್ಲಿನ ಎಲ್ಲಾ ರಂಗ ನಿರ್ದೇಶಕರು, ಸಿಬ್ಬಂದಿವರ್ಗ, ಗುರು ಪಾದೇಶ್ವರ ಶಾಲೆ ಶಿಕ್ಷಕರ ಅಭೂತಪೂರ್ವವಾದ ಕಾರ್ಯ ಬೆಂಬಲವೇ ಕಾರಣ. ಗುರುಗಳು ಹೇಳುವುದಕ್ಕಿಂತ ಮಾಡುವುದು ಮುಖ್ಯ ಎನ್ನುವುದನ್ನು ಅವರ ಕಾರ್ಯಕ್ಷಮತೆಯಿಂದ ನಾವು ತಿಳಿಯಬಹುದಾಗಿದೆ. ಕೊನೆಯದಾಗಿ ಹೇಳುವುದಾದರೆ, ನಾವೆಲ್ಲರೂ ಡಾ.ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ವಿಭಿನ್ನವಾಗಿ ನಾಡಿಗೆ ಕೊಡುತ್ತಿರುವ ಕೊಡುಗೆಯನ್ನು ಬೆಂಬಲಿಸಬೇಕಾಗಿದೆ ಎಂಬುದು ಪ್ರಕೃತಿ ಅಂಬೋಣ.

Leave a Reply

Your email address will not be published. Required fields are marked *

error: Content is protected !!