team india; ದಕ್ಷಿಣ ಆಫ್ರಿಕದ ವಿರುದ್ಧ ಭರ್ಜರಿ ಜಯ ಗಳಿಸಿದ ಭಾರತ

ದಕ್ಷಿಣ ಆಫ್ರಿಕದ ವಿರುದ್ಧ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ತಂಡ (team india) 243 ರನ್‌ಗಳ ಭರ್ಜರಿ ಜಯ ಗಳಿಸಿದೆ. ಹುಟ್ಟುಹಬ್ಬದ ದಿನವೇ ಶತಕ ಸಿಡಿಸಿದ ವಿರಾಟ್ ಅಬ್ಬರದ ಆಟಕ್ಕೆ ಕ್ರಿಕೆಟ್ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದಲ್ಲದೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ತಮ್ಮ ಎಕ್ಸ್ ಖಾತೆಯಲ್ಲಿ ಶುಭಕೋರಿದ್ದಾರೆ. ಇನ್ನೂ ಗೂಗಲ್ ಇಂಡಿಯಾ ಈ ಗೆಲುವನ್ನು ವಿಶೇಷ ರೀತಿಯಲ್ಲಿ ವ್ಯಾಖ್ಯಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂದಿನ ಪಂದ್ಯವನ್ನು ‘ಕಾಪಿ-ಪೇಸ್ಟ್’ ಎಂದು ಗೂಗಲ್ ವಿಶೇಷ ರೀತಿಯಲ್ಲಿ ಬಣ್ಣಿಸಿದೆ.

ಭಾರತ ದಕ್ಷಿಣ ಆಫ್ರಿಕ ತಂಡದ ವಿರುದ್ಧ 243 ರನ್​ಗಳ ಭರ್ಜರಿ ವಿಜಯ ದಾಖಲಿಸಿದೆ. ಅದರಲ್ಲೂ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿನ 49ನೇ ಶತಕವನ್ನು ಮಾಡುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇನ್ನೂ ವಿರಾಟ್ ಅವರು ಶತಕ ಬಾರಿಸುವ ಮೂಲಕ ಅಭಿಮಾನಿಗಳಿಗೂ ಭರ್ಜರಿ ಖುಷಿ ನೀಡಿದ್ದಾರೆ. ಒಟ್ಟಿನಲ್ಲಿ ಕೋಲ್ಕತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕ 27.1 ಓವರ್​​ಗಳಲ್ಲಿ 83 ರನ್​ಗಳಿಗೆ ಆಲೌಟ್​​ ಆಗಿ ಹೀನಾಯ ಸೋಲು ಕಂಡಿದೆ.

award; ಏಕಲವ್ಯ ಪ್ರಶಸ್ತಿಗೆ ಜಿಲ್ಲೆಯ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಶುಭಕೋರಿದ್ದಾರೆ. ನಮ್ಮ ಕ್ರಿಕೆಟ್ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ. ದಕ್ಷಿಣ ಆಫ್ರಿಕ ವಿರುದ್ಧ ಅಮೋಘ ಪ್ರದರ್ಶನ ನೀಡಿದ ತಂಡಕ್ಕೆ ಅಭಿನಂದನೆಗಳು. ಇಂದು ಸುಂದರ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿಗೆ ತಂಡದವರೂ ಚೆನ್ನಾಗಿ ಆಡಿ ಹುಟ್ಟುಹಬ್ಬದ ಉಡುಗೊರೆಯನ್ನೂ ನೀಡಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಭಕೋರಿ, ಮತ್ತೊಂದು ದೃಢವಾದ ವಿಜಯಕ್ಕಾಗಿ ಮೆನ್​ ಇನ್​ ಬ್ಲ್ಯೂಗೆ ಅಭಿನಂದನೆಗಳು. ಪಂದ್ಯಾವಳಿ ಯುದ್ದಕ್ಕೂ ಅಮೋಘ ಆಟವಾಡಿ, ಏಕದಿನ ಶತಕಗಳ ದಾಖಲೆ ಸರಿಗಟ್ಟಿದ ವಿರಾಟ್​​ಗೆ ಇದು ನಿಜವಾಗಿಯೂ ವಿಶೇಷ ದಿನ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಹೀಗೆ ಹಲವರು ಭಾರತದ ವಿಜಯಕ್ಕೆ ಸಂಭ್ರಮ ವ್ಯಕ್ತಪಡಿಸಿ, ಅಭಿನಂದನೆಗಳನ್ನು ತಿಳಿಸಿದ್ದಾರೆ. ಆದರೆ ಗೂಗಲ್ ಇಂಡಿಯಾ ಈ ಗೆಲುವನ್ನು ವಿಶೇಷ ರೀತಿಯಲ್ಲಿ ವ್ಯಾಖ್ಯಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂದಿನ ಪಂದ್ಯವನ್ನು ‘ಕಾಪಿ-ಪೇಸ್ಟ್’ ಎಂದು ಗೂಗಲ್ ವಿಶೇಷ ರೀತಿಯಲ್ಲಿ ಬಣ್ಣಿಸಿದೆ.

ಆದರೆ ಗೂಗಲ್ ಇಂಡಿಯಾ ಈ ಗೆಲುವನ್ನು ವಿಶೇಷ ರೀತಿಯಲ್ಲಿ ವ್ಯಾಖ್ಯಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂದಿನ ಪಂದ್ಯವನ್ನು ‘ಕಾಪಿ-ಪೇಸ್ಟ್’ ಎಂದು ಗೂಗಲ್ ವಿಶೇಷ ರೀತಿಯಲ್ಲಿ ಬಣ್ಣಿಸಿದೆ. ಅರ್ಥಾತ್, ಇದೇ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಆಡಿದ್ದ ಪಂದ್ಯದಲ್ಲಿನ ಪರ್ಫಾರ್ಮೆನ್ಸೇ ಇಲ್ಲಿ ಮರುಕಳಿಸಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!