ರಾಜ್ಯಪುರಸ್ಕಾರ ತರಬೇತಿ ಶಿಬಿರ ಮುಕ್ತಾಯ
ದಾವಣಗೆರೆ : ಜೂ.10 ರಿಂದ 12 ರಂದು ದಾವಣಗೆರೆ ಜಿಲ್ಲಾ ಸಂಸ್ಥೆ ವತಿಯಿಂದ ಕೊಂಡಜ್ಜಿ ಬಸಪ್ಪ ರಾಜ್ಯ ಸ್ಕೌಟ್ ಗೈಡ್ ತರಬೇತಿ ಕೇಂದ್ರ, ಕೊಂಡಜ್ಜಿಯಲ್ಲಿ ರಾಜ್ಯಪುರಸ್ಕಾರ ಪೂರ್ವಭಾವಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ 94 ಸ್ಕೌಟ್ಸ್ ಮತ್ತು 92 ಗೈಡ್ಸ್‍ಗಳು ಭಾಗವಹಿಸಿದ್ದರು. ಸ್ಕೌಟ್ ವಿಭಾಗದ ನಾಯಕರಾಗಿ ಹಾಲಪ್ಪ.ಡಿ ಜಿಲ್ಲಾ ತರಬೇತಿ ಆಯುಕ್ತರು ಸ್ಕೌಟ್ ಹಾಗೂ ಗೈಡ್ ವಿಭಾಗದ ನಾಯಕರಾಗಿ ರತ್ನ.ಎಂ ಜಿಲ್ಲಾ ಕಾರ್ಯದರ್ಶಿಗಳು ಕಾರ್ಯನಿರ್ವಹಿಸಿದರು. ಇವರಿಗೆ ಸಹಾಯಕರುಗಳಾಗಿ ಸುವರ್ಣಮ್ಮ, ಗೀತಾ.ಟಿ.ಕೆ.ಪಿ, ತಾಸಿನ್ ತಾಜ್, ಮಂಜುಳ, ಜೆ.ಎಸ್.ವಿಜಯ್, ಗಂಗಾಧರ್ ಸ್ವಾಮಿ, ಆರೋಗ್ಯಮ್ಮ, ಕೊಟ್ರಯ್ಯ, ಸೌಮ್ಯನಾಯಕ್, ಮಹಾಂತೇಶ್ ಕಾರ್ಯನಿರ್ವಹಿಸಿದರು.
ಶಿಬಿರಕ್ಕೆ ಜಿಲ್ಲಾ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಜೆ. ಚಿಗಟೇರಿ, ಜಿಲ್ಲಾ ಸ್ಕೌಟ್ ಆಯುಕ್ತರಾದ ಎ.ಪಿ.ಷಡಾಕ್ಷರಪ್ಪ, ಹಾಲಪ್ಪ ಜಿಲ್ಲಾ ಸಹಾಯಕ ಆಯುಕ್ತರು ಭೇಟಿ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಖಾಲಿದ್ ಅರಣ್ಯಾಧಿಕಾರಿಗಳು ಶಿಬಿರಕ್ಕೆ ಭೇಟಿ ನೀಡಿ ಪರಿಸರ ರಕ್ಷಣೆ ಮತ್ತು ಕಾಡುಗಳನ್ನು ಬೆಳಿಸುವ ಬಗ್ಗೆ ಹಾಗೂ ಬೀಜದುಂಡೆ ತಯಾರಿಕೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಕ್ವಾಟರ್ ಮಾಸ್ಟರ್ ಆಗಿ ಸಿ.ಆರ್.ಮರುಳಪ್ಪ ಮತ್ತು ಸುಖವಾಣಿ ಜಿಲ್ಲಾ ಜಂಟಿ ಕಾರ್ಯದರ್ಶಿಗಳು ಕಾರ್ಯನಿರ್ವಹಿಸಿದರು. ಅಶ್ವಿನಿ.ಜೆ ಎಸ್.ಜಿ.ವಿ ಶಿಬಿರವನ್ನು ಸಂಘಟಿಸಿದರು.
garudavoice21@gmail.com 9740365719