ಕಲಬುರ್ಗಿ ಜಿಲ್ಲೆಯಲ್ಲಿ ಹೆಚ್ಚಿದ ಕಾಡು ಹಂದಿಗಳ ಹಾವಳಿ.! ಕಂಗಾಲದ ರೈತರು.! ಸಂಸದರಿಂದ ಡಿಸಿಗೆ ಪತ್ರ
ಕಲಬುರ್ಗಿ: ಜಿಲ್ಲೆಯ ಕಮಾಲಾಪುರ ತಾಲ್ಲೂಕಿನ ಓಕಳಿ ಗ್ರಾಮ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಸ್ಥಳೀಯ ರೈತರು ಕಂಗಾಲಾಗಿದ್ದಾರೆ.
ಕಾಡು ಹಂದಿ ಅಪಾಯಕಾರಿ ಪ್ರಾಣಿ ಹೌದು, ಗುಂಪಾಗಿ ಬಂದು ದಾಳಿ ಮಾಡುವುವುದರಿಂದ ಸ್ಥಳೀಯ ರೈತರು ಕಂಗಾಲಾಗಿದ್ದಾರೆ. ಬೆಳೆ ಹಾನಿ ಪರಿಹಾರವು ಇಲ್ಲ, ರೈತರಿಗೆ ರಕ್ಷಣೆಯ ಇಲ್ಲವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಸಂಸದ ಡಾ.ಉಮೇಶ್ ಜಿ.ಜಾಧವ್ ಜಿಲ್ಲಾಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದಾರೆ.
ಈ ಪ್ರದೇಶದಲ್ಲಿ ಉದ್ದು, ಹೆಸರು, ತೊಗರಿ, ಕಡಲಿ, ಸೋಯಾಬೀನ್, ಜೋಳ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದು, ಹಂದಿಗಳು ಹಾನಿ ಮಾಡುತ್ತಿವೆ. ಈ ಕುರಿತು ರೈತರೂ ಸಹ ನನ್ನ ಗಮನಕ್ಕೆ ತಂದಿದ್ದಾರೆ. ಕಾರಣ ಬೆಳೆಗಳು ಹಾನಿಯಾಗಿ ನಷ್ಟವಾಗುತ್ತಿರುವುದರಿಂದ ಕಾಡು ಹಂದಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಸಭಾ ಸದಸ್ಯ ಡಾ.ಉಮೇಶ ಜಿ.ಜಾಧವ್ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ರೈತರ ಬೆಳೆ ನಷ್ಟ ಕುರಿತು ಅಂದಾಜಿಸಿ ಹಾಗೂ ಕಾಡುಹಂದಿಗಳ ನಿಯಂತ್ರಣವನ್ನು ತಡೆಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಅವರು ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ.