ತುಮ್‌ಕೋಸ್ ಮಾರ್ಕೇಟ್ ಉದ್ಘಾಟನೆಯಲ್ಲಿ ಶಾಸಕರ ಭಾಷಣ ಸಂದರ್ಭದಲ್ಲಿ ಜನರಿದ್ದರು.! ವಿರೋಧಿಗಳಿಂದ ಮಿಡಿಯಾಗೆ ತಪ್ಪು ಮಾಹಿತಿ ರವಾನೆ.!

ಚನ್ನಗಿರಿ: ಚನ್ನಗಿರಿ ಪಟ್ಟಣದಲ್ಲಿರುವ ತುಮ್‌ಕೋಸ್ ಸೂಪರ್ ಮಾರುಕಟ್ಟೆಯನ್ನು ಸೋಮವಾರ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ಬೃಹತ್ ಪೆಂಡಾಲ್, ಬರುವ ಜನತೆಗೆ ಕುಳಿತುಕೊಳ್ಳಲು ಸಾವಿರಾರು ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಶಾಸಕರು ಮಾರುಕಟ್ಟೆ ಉದ್ಘಾಟಿಸಿ ಭಾಷಣ ಮಾಡುವಾಗ ಸಮಾರಂಭದ ಜಾಗದಲ್ಲಿ ಬರೀ ಖಾಲಿ ಕುರ್ಚಿಗಳೇ ಇದ್ದವು. ಬಂದವರ ಸಂಖ್ಯೆ ಅತಿ ವಿರಳವಾಗಿತ್ತು.
ಶಾಸಕರಿಗೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿರೋಧಿಗಳು ವಿಡಿಯೋ ವನ್ಮ ಮೀಡಿಯಾಗಳಿಗೆ ಕಳಿಸಿ ತಪ್ಪು ಸಂದೇಶಗಳನ್ನು ರವಾನಿಸಿದ್ದಾರೆ ಎಂದು ಶಾಸಕರ ಆಪ್ತರು ಹೇಳಿದ್ದಾರೆ.
ಸಭೆಗೆ ಬಂದವರು ಬಾಷಣ ಮುಗಿದ ನಂತರ ಕಾರ್ಯಕ್ರಮ ಮುಕ್ತಾಯ ಸಂದರ್ಭದಲ್ಲಿ ಊಟಕ್ಕೆ ತೆರಳಿದ್ದಾರೆ, ಈ ವೇಳೆ ವಿರೋಧಿಗಳು ವಿಡಿಯೋ ತೆಗೆದು ಮಾಧ್ಯಮಗಳಲ್ಲಿ ಪ್ರಸಾರ ಮಾಡಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ