ತಂಬಾಕು ಮುಕ್ತ ದಾವಣಗೆರೆ ವಿಶ್ವವಿದ್ಯಾನಿಲಯ ಘೋಷಣಾ ಕಾರ್ಯಕ್ರಮ

ದಾವಣಗೆರೆ :ನಾವೆಲ್ಲರೂ ನಮ್ಮ ಕುಟುಂಬದವರು ಹಾಗೂ ನೆರೆಹೊರೆಯವರಿಗೂ ತಂಬಾಕುವಿನಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದಲ್ಲಿ ತಂಬಾಕು ಮುಕ್ತ ಸಮಾಜ ನರ‍್ಮಾಣ ಮಾಡಬಹುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಅವರು ಅಭಿಪ್ರಾಯಪಟ್ಟರು.

ಶುಕ್ರವಾರ ದಾವಣಗೆರೆ ವಿಶ್ವವಿದ್ಯಾನಿಲಯದ ಎಂ.ಬಿ.ಎ ಸಭಾಂಗಣದಲ್ಲಿ ಜಿಲ್ಲಾ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕರ‍್ಯ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ರ‍್ಪಡಿಸಲಾಗಿದ್ದ “ತಂಬಾಕು ಮುಕ್ತ ವಿಶ್ವವಿದ್ಯಾನಿಲಯ” ಘೋಷಣಾ ಕರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ದಿನ ವಿಶ್ವವಿದ್ಯಾನಿಲಯವನ್ನು ತಂಬಾಕು ಮುಕ್ತ ಎಂದು ಘೋಷಿಸಿರುವುದು ಸೂಕ್ತವಾಗಿದೆ. ಅದರಂತೆ ವಿದ್ಯರ‍್ಥಿಗಳು ತಮ್ಮ ಫ್ರೌಡಾವಸ್ಥೆಯಲ್ಲಿ ತಪ್ಪು ಮಾಡುವುದು ಸಹಜ ಆದರೆ ಅರಿತುಕೊಂಡು ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು, ತಿದ್ದಿಕೊಳ್ಳದಿರುವುದು ದಡ್ಡತನವಾಗುತ್ತದೆ. ಆದಕಾರಣ ಈ ದಿನದ ವಿಷಯದ ಕುರಿತು ತಾವೆಲ್ಲರೂ, ಕುಟುಂಬದವರು ಹಾಗೂ ನೆರೆಹೊರೆಯವರಿಗೂ ಇದರÀ ಬಗ್ಗೆ ಅರಿವು ಮೂಡಿಸಿ ತಂಬಾಕು ಮುಕ್ತ ಸಮಾಜ ನರ‍್ಮಾಣ ಮಾಡಬೇಕೆಂದು ತಿಳಿಸಿದರು.

ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೌರವ ಕುಲಪತಿಗಳಾದ (ಫ್ರಬಾರೆ) ಪ್ರೋ|| ಲಕ್ಷ್ಮಣ ಪಿ. ಮಾತನಾಡಿ, ವಿದ್ಯರ‍್ಥಿಗಳು ಸಮುದಾಯದ ಜೊತೆಗೆ ಕೆಲಸ ಮಾಡುವುದು ಮುಖ್ಯವಾಗಿರುವುದರಿಂದ ಆರೋಗ್ಯ ಮತ್ತು ದುಷ್ಪರಿಣಾಮಗಳ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವ ಜವಾಬ್ದಾರಿ ಹೊಂದಿರುತ್ತಾರೆ. ಸಾವು ಖಚಿತ, ಆದರೆ ಆರೋಗ್ಯವಂತ ಜೀವನವಿದ್ದರೆ ಸರ‍್ಥಕ ಜೀವನ ಸಾಗಿಸಲು ಸಾಧ್ಯವೆಂದು ತಿಳಿಸಿದರು.

ದಂತ ವಿಭಾಗದ ಮುಖ್ಯಸ್ಥರಾದ, ಡಾ||ತಿಪ್ಪೆಸ್ವಾಮಿ.ಪಿ.ಎಂ ಮಾತನಾಡಿ, ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಬಾಯಿ ಕ್ಯಾನ್ಸರ್ ಬಗ್ಗೆ ಸವಿಸ್ತಾರವಾಗಿ ಸ್ನಾತಕೋತ್ತರ ವಿದ್ಯರ‍್ಥಿಗಳಿಗೆ ತಿಳಿಸಿದರು.ಜಿಲ್ಲಾ ರ‍್ವೇಕ್ಷಣಾಧಿಕಾರಿಗಳಾದ ಡಾ|| ಜಿ.ಡಿ ರಾಘವನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಟುಂಬದವರು ಹಾಗೂ ನೆರೆಹೊರೆಯವರಿಗೂ ಇದರÀ ಬಗ್ಗೆ ಅರಿವು ಮೂಡಿಸಿದಲ್ಲಿ ತಂಬಾಕು ಮುಕ್ತ ಸಮಾಜ ನರ‍್ಮಾಣ ಮಾಡಬಹುದೆಂದು ತಿಳಿಸಿದರು.

ವೇದಿಕೆ ಕರ‍್ಯಕ್ರಮಕ್ಕೂ ಮುನ್ನ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಪ್ರತಿಮೆ ವೃತ್ತದ ಮುಂದೆ ಆಗಮಿತ ಗಣ್ಯರು “ತಂಬಾಕು ಮುಕ್ತ ದಾವಣಗೆರೆ ವಿಶ್ವವಿದ್ಯಾನಿಲಯ” ಎಂಬ ನಾಮಫಲಕವನ್ನು ಗಾಳಿಯಲ್ಲಿ ಬಲೂನ್ ಹಾರಿಸುವುದರ ಮೂಲಕ ತಂಬಾಕು ಮುಕ್ತ ದಾವಣಗೆರೆ ವಿಶ್ವವಿದ್ಯಾನಿಲಯ ಎಂದು ಅನಾವರಣಗೊಳಿಸಿದರು.

ಕರ‍್ಯಕ್ರಮದಲ್ಲಿ ಕುಲಸಚಿವರಾದ ಸರೋಜ ಬಿ.ಬಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗರಾಜ, ಸಮಾಜ ಕರ‍್ಯ ಅಧ್ಯಯನದ ಮುಖ್ಯಸ್ಥರಾದ ಡಾ|| ಶಿವಲಿಂಗಪ್ಪ ಬಿ.ಪಿ ಪ್ರಾಧ್ಯಾಪಕರಾದ ಡಾ||ಲೋಕೇಶ್, ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಪ್ರೋ.ರಾಜು, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ವಿಶ್ವವಿದ್ಯಾನಿಲಯ ಇತರೆ ವಿಭಾಗದ ಪ್ರಾಧ್ಯಾಪಕರು, ಸಂಶೋಧನರ‍್ಥಿಗಳು ಹಾಗೂ ವಿದ್ಯರ‍್ಥಿಗಳು ಭಾಗವಹಿಸಿದ್ದರು.

ಸಂಶೋಧನರ‍್ಥಿ ಶ್ರೀಮತಿ ಕಲ್ಪನಾ ಬಿ.ಎಸ್ ನಿರೂಪಿಸಿದರು. ಡಾ||ಪ್ರದೀಪ್ ಬಿ.ಎಸ್ ಪ್ರಾಧ್ಯಾಪಕರು ಸಮಾಜ ಕರ‍್ಯ ಅಧ್ಯಯನ ವಿಭಾಗ, ಇವರು ಸ್ವಾಗತಿಸಿದರು ಹಾಗೂ ಸಮಾಜ ಕರ‍್ಯರ‍್ತರಾದ ದೇವರಾಜ್ ಕೆ.ಪಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!