ನಾಳೆ `ಅಪ್ಪು ಮ್ಯೂಸಿಕಲ್ ನೈಟ್’

Tomorrow is 'Appu Musical Night'

ನಾಳೆ `ಅಪ್ಪು ಮ್ಯೂಸಿಕಲ್ ನೈಟ್'

ದಾವಣಗೆರೆ: ಶ್ರೀ ಹರ ಮ್ಯೂಸಿಕಲ್ ವರ್ಲ್ಡ್ ಹಾಗೂ ಶ್ರೀನಿವಾಸ ದಾಸಕರಿಯಪ್ಪ ಇವರ ಸಹಯೋಗದೊಂದಿಗೆ ಅಪ್ಪ ವೈಭವ ಅಪ್ಪು ಮ್ಯೂಸಿಕಲ್ ನೈಟ್ ಕಾರ್ಯಕ್ರಮವನ್ನು ಇದೇ 18ರಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಆರನೇಕಲ್ಲು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗದ ಜಯದೇವ ವೃತ್ತದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಉದ್ಘಾಟಿಸಲಿದ್ದಾರೆ. ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್ ಅಧ್ಯಕ್ಷತೆ ವ ಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಸುನೀಲ್ ಮೈರಾ, ಮಂಜುನಾಥ್, ಅರ್ಪಿತ್, ಮಂಜುನಾಥ ಬಂಡೆ, ಮಂಜುಥ ಸ್ವಾಮಿ, ರವಿಕುಮಾರ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!