ಮಾರ್ಕೆಟ್ ವ್ಯಾಪ್ತಿಯಲ್ಲಿ ಪೀಕ್ ಟೈಮ್‌ನಲ್ಲಿ ಅನ್‌ಲೋಡಿಂಗ್ ನಿಷೇಧ

ಮಾರ್ಕೆಟ್ ವ್ಯಾಪ್ತಿಯಲ್ಲಿ ಪೀಕ್ ಟೈಮ್‌ನಲ್ಲಿ ಅನ್‌ಲೋಡಿಂಗ್ ನಿಷೇಧ

ದಾವಣಗೆರೆ :ದಾವಣಗೆರೆ ನಗರದ ಹಳೇ ಭಾಗದಲ್ಲಿ ಪೀಕ್ ಟೈಂನಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಅನ್‌ಲೋಡಿಂಗ್ ಮಾಡುವುದರಿಂದ ಟ್ರಾಫಿಕ್ ಜಾಮ್‌ನಂತಹ ತೊಂದರೆಗಳು ಹೆಚ್ಚಾಗುತ್ತಿದ್ದು, ಶೀಘ್ರವೇ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ಹೇಳಿದ್ದಾರೆ.
ಜನನಿಬಿಡಿ ಪ್ರದೇಶಗಳಾದ ಹಳೇ ಭಾಗದ ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ 9 ರಿಂದ 11 ಹಾಗೂ ಸಂಜೆ 4 ರಿಂದ6 ರವರೆಗೆ ಗೂಡ್ಸ್ ಗಾಡಿಗಳು ನಿಲ್ಲುವ ಹಾಗಿಲ್ಲ. ಅನ್‌ಲೋಡಿಂಗ್ ಮಾಡುವಂತಿಲ್ಲ ಎಂದು ಆದೇಶ ಮಾಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಸ್ಪಿ ರಿಷ್ಯಂತ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!