ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಗರ ವ್ಯಾಪ್ತಿಯಲ್ಲಿ ತಂಬಾಕು ಮಾರಾಟಕ್ಕೆ ಪರವಾನಗಿ ಕುರಿತು ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ವರ್ಷದ ಆರಂಭಿಕವಾಗಿ ತರಬೇತಿಯನ್ನು ಆಯೋಜಿಸಿದ್ದು ಕಳೆದ ವರ್ಷಕ್ಕಿಂತ ಪ್ರಸ್ತುತ ವರ್ಷದಲ್ಲಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಸಾರ್ವಜನಿಕರು ಕಂಡ-ಕಂಡಲ್ಲಿ ಧೂಮಪಾನ ಮಾಡದಂತೆ ಸೂಕ್ತ ಕ್ರಮ ವಹಿಸಿ ದಂಡ ವಿಧಿಸಿ ಕೋಟ್ಪಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಈ ತರಬೇತಿ ಮುನ್ನುಡಿಯಾಗಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಜಿ.ಡಿ ಮಾತಾನಾಡಿ, ತಂಬಾಕು ಬಳಸುವವರ ಸಂಖ್ಯೆ ಪ್ರಪಂಚದಲ್ಲಿಯೇ 2 ನೇ ರಾಷ್ಟ್ರವಾಗಿದ್ದು, ಅದರಲ್ಲಿ ಶೇ.28.6 ರಷ್ಟು ತಂಬಾಕು ಬಳಕೆದಾರರಿದ್ದು ಪುರುಷರು ಶೇ.42.4 ಮಹಿಳೆಯರು 14.2 ರಷ್ಟು ಬಳಕೆ ಮಾಡುತ್ತಿದ್ದು ಭಾರತದಾದ್ಯಂತ ಪ್ರತಿ ವರ್ಷ 15 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನ ಮಾರಾಟಗಾರರಿಗೆ ಪರವಾನಗಿ ನೀತಿಯನ್ನು ಜಾರಿಗೊಳಿಸಿ ಎಲ್ಲೇಂದರಲ್ಲಿ ತಂಬಾಕು ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ಕೋಟ್ಪಾ ಕಾಯ್ದೆಯನ್ನು ಅನುಷ್ಠಾನಗೊಳಿಸಿ ಮಕ್ಕಳಿಗೆ ತಂಬಾಕು ಉತ್ಪನ್ನಗಳು ಸಿಗದಂತೆ ನಿಯಂತ್ರಿಸಿ ಯುವಕರು ತಂಬಾಕಿಗೆ ದಾಸರಾಗಿ ಬಲಿಯಾಗದಂತೆ ನೋಡಿಕೊಳ್ಳುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಷಣ್ಮುಖಪ್ಪ.ಎಸ್. ಮಾತನಾಡಿ ಧೂಮಪಾನ ಮಾಡುವ ವ್ಯಕ್ತಿಗಳು ಶೇಕಡಾ 40 ರಷ್ಟು ಕ್ಷಯರೋಗಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ತಂಬಾಕು ಬಳಸುವುದರಿಂದ ಕ್ಯಾನ್ಸರ್, ಹೃದಯಘಾತ, ಪಾಶ್ರ್ವವಾಯು, ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಮಧುಮೇಹ, ನಪುಂಸಕತೆ ಇನ್ನು ನಾನಾ ತರಹದ ಖಾಯಿಲೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ಸಾರ್ವಜನಿಕರಿಗೆ ಹೆಚ್ಚು ಅರಿವು ಮೂಡಿಸುವ ಕಾಯಕ್ರಮವನ್ನು ಹಮ್ಮಿಕೊಂಡು ಜನರನ್ನು ರಕ್ಷಿಸುವುದು ಹಾಗೆಯೇ ಕಾಯ್ದೆಯನ್ನು ಅನುಷ್ಠಾನಗೊಳಿಸುವುದು ಪ್ರಸ್ತುತ ದಿನಗಳಲ್ಲಿ ಸೂಕ್ತವಾಗಿರುತ್ತದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ ಸಂತೋಷ್, ಡೆಂಟಲ್ ವಿಭಾಗದ ಮುಖ್ಯಸ್ಥರಾದ ಡಾ.ತಿಪ್ಪೇಸ್ವಾಮಿ ಪಿ.ಎಂ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸುರೇಶ್ ಬಾರ್ಕಿ, ಜಿಲ್ಲಾ ಸಲಹೆಗಾರರದ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ, ದೇವರಾಜ್.ಕೆ.ಪಿ, ಡಿಸಿಆರ್ಬಿ ಮಂಗಳ, ನಾಗಭೂಷಣ, ಹಾಗೂ ಜಿಲ್ಲೆಯ ಪೊಲೀಸ್ ಉಪ ನಿರೀಕ್ಷಕರು, ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಮುಖ್ಯಪೇದೆ ಮತ್ತು ಪೇದೆ ಭಾಗವಹಿಸಿದ್ದರು.