ಶಿವಮೊಗ್ಗದಲ್ಲಿನ ಟ್ರಯಲ್ ಬ್ಲಾಸ್ಟ್ ಕೇಸ್/ ಹೊನ್ನಾಳಿ & ಮಂಗಳೂರಿನಲ್ಲಿ ಇಬ್ಬರ ಬಂಧನ ! ಯಾಸಿನ್ , ಮಾಜ್ಗು ಲಿಂಕ್
ಶಿವಮೊಗ್ಗ :ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ಕಳೆದ ವರ್ಷ 19-09-22 ರಂದು ದಾಖಲಾಗಿದ್ದ ಎಫ್ಐಆರ್ ಸಂಖ್ಯೆ 325/2022 ಪ್ರಕರಣದ ಸಂಬಂಧ ಎನ್ಐಎ ಮತ್ತಿಬ್ಬರನ್ನು ಬಂಧಿಸಿದೆ.ಈ ಸಂಬಂಧ ಎನ್ಐಎ RC-46/2022/NIA/DLI ಕೇಸ್ ದಾಖಲಿಸಿಕೊಂಡಿತ್ತು. ಅಷ್ಟೆಅಲ್ಲದೆ ಈ ಮೊದಲು ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಿತ್ತು.
ಸದ್ಯ ಇದೇ ಕೇಸ್ನಲ್ಲಿ (NIA) ನಿನ್ನೆ ಇಬ್ಬರನ್ನು ಬಂಧಿಸಿದೆ ಮಂಗಳೂರಿನ ಮಜೀನ್ ಅಬ್ದುಲ್ ರೆಹಮಾನ್ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿಯ ನದೀಮ್ ಅಹಮದ್ ಕೆ.ಎ ಎಂಬಿಬ್ಬರನ್ನು ಎನ್ಐಎ ಅರೆಸ್ಟ್ ಮಾಡಿದೆ.
ಇವತ್ತು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ (IS) ನ ಕೃತ್ಯಗಳನ್ನು ವಿಸ್ತರಿಸುವ ಸಲುವಾಗಿ ಆರೋಪಿಗಳು, ಈ ಮೊದಲು ಬಂಧಿತರಾಗಿರುವ ಆರೋಪಿಗಳ ಜೊತೆ ಸೇರಿಕೊಂಡು ಸಂಚು ರೂಪಿಸಿರುವ ಆರೋಪ ಮಾಡಲಾಗಿದೆ.
ತನಿಖ ವೇಳೆ ಮಾಜ್ ಮುನೀರ್ ಮಜೀನ್ ಅಬ್ದುಲ್ ರೆಹಮಾನ್ನನ್ನು ಮತ್ತು ಯಾಸೀನ್ ನದೀಮ್ನನ್ನು ಐಎಸ್ ಚಟುವಟಿಕೆಗಳಿಗಾಗಿ ನೇಮಿಸಿಕೊಂಡಿದ್ದರು . ಅಲ್ಲದೆ ಈ ಸಂಬಂಧ ದುಷ್ಕೃತ್ಯವೆಸಗಲು ಸಂಚು ರೂಪಿಸಿದ್ದರು ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.