Twitter War cm vs ex cm; ಸಾಮಾಜಿಕ ಜಾಲತಾಣದಲ್ಲಿ ಹಾಲಿ, ಮಾಜಿ ಸಿಎಂಗಳ ‘ಟ್ವಿಟ್ಟರ್ ಕಾಳಗ’! ಸಿದ್ದು, ಸಿಎಂ ಗೆ ನೀಡಿದ ಆ ಸಲಹೆ ಏನು ಗೊತ್ತಾ.?

ಬೆಂಗಳೂರು: ಜನಪರ ಆಡಳಿತ ನಡೆಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಗಿಳಿಪಾಠ ಮಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಟ್ವೀಟ್ ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಲಿ ಮತ್ತು ಮಾಜಿ ಸಿಎಂಗಳ’ಟ್ವಿಟ್ಟರ್ ವಾರ್’ ಶುರುವಾಗಿದೆ.!

ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ‘ನೀವು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಸುಲ್ತಾನ್ ಅವರ ಆಡಳಿತದಲ್ಲಿ ಮಾಡಿದಂತೆ ಹಿಂದೂ ಕಾರ್ಯಕರ್ತರನ್ನು ಕೊಲ್ಲುವ ಮೂಲಕ ನೀವು ಹಿಂದೂ ವಿರೋಧಿಗಳ ಐಕಾನ್ ಆಗಿದ್ದೀರಿ, ನಾನು ನಿಮ್ಮಿಂದ ಆಡಳಿತ ಅಥವಾ ಪೊಲೀಸ್ ವ್ಯವಸ್ಥೆ ಕಲಿಯಬೇಕಾಗಿಲ್ಲ, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಲು ನಮ್ಮಲ್ಲಿ ಸಮರ್ಥ ಪೊಲೀಸ್ ಪಡೆ ಇದೆ. ನಿಮ್ಮ ಸರ್ಕಾರದ ಅಡಿಯಲ್ಲಿ ಇದೆಲ್ಲವೂ ಶೂನ್ಯವಾಗಿತ್ತು ಎಂದು ಸಿದ್ದರಾಮಯ್ಯ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬೊಮ್ಮಾಯಿ‌ ಟ್ವೀಟ್ ನಿಂದ ಕುದ್ದು ಹೋಗಿರುವ ಸಿದ್ದರಾಮಯ್ಯ ರೊಚ್ಚಿಗೆದ್ದು ಮರುಟ್ವೀಟ್ ಮಾಡಿದ್ದು, ‘ಒಬ್ಬ ಅಜ್ಞಾನಿಯಂತೆ, ನಾನು ಹಿಂದೂಗಳನ್ನು ಕೊಲ್ಲುತ್ತೇನೆ ಎಂದು ನೀವು ಆರೋಪಿಸಿದ್ದೀರಿ. ಇಂತಹ ಸಡಿಲವಾದ ಕಾಮೆಂಟ್‌ಗಳನ್ನು ಮಾಡುವ ಮೊದಲು ರಾಜ್ಯದ ಮುಖ್ಯಮಂತ್ರಿಯಾಗಿರುವ ನೀವು ಯೋಚಿಸಬೇಕಿತ್ತು. ನಿಮ್ಮ ಹೇಳಿಕೆ ಖಂಡಿಸಿ ನಾನು ಮಾನನಷ್ಟ ಮೊಕದ್ದಮೆ ದಾಖಲಿಸಬಹುದು. ಆದರೆ ನಾನು ಹಾಗೆ ಮಾಡದೆ, ಕೇವಲ ನಿಮ್ಮನ್ನು ಸರಿಪಡಿಸಲು ನಿಮಗೆ ಸಲಹೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ‘ಟ್ವಿಟ್ಟರ್ ಕಾಳಗ’ ಶುರುವಾಗಿದ್ದು, ಇದು ಇನ್ನೂ ಎಲ್ಲಿಗೆ ತಲುಪುವುದೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!