ಉನ್ನತ ಕೌಶಲ್ಯ ಮತ್ತು ಇಂಟರ್ನ್‌ಶಿಪ್ ಅವಕಾಶಗಳು: ಬೆಂಗಳೂರಿನ ಸಿ ಡಾಕ್ ಸಂಸ್ಥೆಯಿಂದ ಕಾರ್ಯಾಗಾರ

ದಾವಣಗೆರೆ: ಬೆಂಗಳೂರಿನ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಸಂಸ್ಥೆಯು ದಿನಾಂಕ 28ನೇ ಬುಧವಾರದಂದು ಕಾಲೇಜಿನ ಜಿಎಂ ಹಾಲಮ್ಮ ಸುಭಾಂಗಣದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಿ ಡಾಕ್ ಸಂಸ್ಥೆಯ ಕೋರ್ಸ್ಗಳ ಅರಿವು, ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿ ಕಾರ್ಯಕ್ರಮ ಮತ್ತು ಇಂಟರ್ನ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಸ್ಕಿಲ್, ಅಪ್ ಸ್ಕಿಲ್, ಪ್ರೈಮ್ ಸ್ಕಿಲ್ ಗಳ ಬಗ್ಗೆ ವಿದ್ಯಾರ್ಥಿಗಳೊಡನೆ ವಿವರವಾಗಿ ಚರ್ಚಿಸಲಾಯಿತು. ವಿದ್ಯಾರ್ಥಿಗಳ ತಾಂತ್ರಿಕ ಗುಣಮಟ್ಟ ಹೆಚ್ಚಿಸುವಲ್ಲಿ ತರಬೇತಿ ಕಾರ್ಯಕ್ರಮಗಳು ಅತ್ಯವಶ್ಯಕ ಆ ನಿಟ್ಟಿನಲ್ಲಿ ಸಿ ಡಾಕ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು ಇದರ ಉಪಯೋಗ ಪಡೆಯುವಂತೆ ಸಿ ಡಾಕ್ ಸಂಸ್ಥೆಯ ಪ್ಲೇಸ್ಮೆಂಟ್ ಆಫೀಸರ್ ಮತ್ತು ಮಾರ್ಕೆಟಿಂಗ್ ಹೆಡ್ ಶ್ರೀಮತಿ ಇಂದ್ರಾಣಿ ಹಂಡೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಡಾ ವಿಶಾಲ್ ರಾಥೋಡ್, ಐ ಓ ಟಿ ತಂತ್ರಜ್ಞಾನದ ಬಗ್ಗೆ ಮತ್ತು ಐ ಓ ಟಿ ತಂತ್ರಜ್ಞಾನದ ಮೇಲೆ ನಡೆಯುತ್ತಿರುವ ಪ್ರಾಜೆಕ್ಟ್ ಗಳ ಬಗ್ಗೆ ಕೂಲಂಕುಶವಾಗಿ ವಿದ್ಯಾರ್ಥಿಗಳೊಡನೆ ಮಾಹಿತಿಯನ್ನು ಹಂಚಿಕೊಂಡರು.
ಅಡ್ಮಿನಿಸ್ಟ್ರೇಟಿವ್ ಆಫೀಸರ್ ಶ್ರೀ ಮೊಹಮ್ಮದ್ ಅಶ್ಪಕ್ ಎಲ್ಲಾ ವಿದ್ಯಾರ್ಥಿಗಳಿಗೂ ಮುಂದಿನ ಸಂದರ್ಶನ ಪ್ರಕ್ರಿಯೆ ಮತ್ತು ವಿದ್ಯಾಭ್ಯಾಸದ ಕುರಿತು ಒಳ್ಳೆಯದಾಗಲಿ ಎಂದು ಹರಸಿದರು.
ಕಾಲೇಜಿನ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ಸಿ ಡಾಕ್ ನಾ ಎಲ್ಲಾ ಪ್ರತಿನಿಧಿಗಳನ್ನು ಸ್ವಾಗತ ಕೋರುವುದರ ಮೂಲಕ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಸಿ ಡಾಕ್ ಜಂಟಿ ನಿರ್ದೇಶಕರಾದ ಶ್ರೀ ಷಣ್ಮುಗನಾಥನ್, ವಿಭಾಗದ ಮುಖ್ಯಸ್ಥರುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.