ವೈಕುಂಠ ಏಕಾದಶಿ, ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜನಸಂದಣಿ, ದರ್ಶನಕ್ಕಾಗಿ ಸಾಲಾಗಿ ನಿಂತ ಭಕ್ತರು

Vaikuntha Ekadashi, Crowd at Sri Venkateswara Temple, devotees queuing up for darshan

ದಾವಣಗೆರೆ: ವೈಕುಂಠ ಏಕದಾಶಿ ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಗಳಿಗಿಂತಲೂ ವಿಶೇಷ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ಶ್ರೀವೇಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವರ ಅವಾಸ ಸ್ಥಾನವಾದ ವೈಕುಂಠದ ಬಾಗಿಲು ತೆರೆದಿರುತ್ತದೆ ಎನ್ನುವ ನಂಬಿಕೆ ಇದೆ.

ಅಂತೆಯೇ ದಾವಣಗೆರೆಯ ಎಂಸಿಸಿ ಬಿ ಬ್ಲಾಕಿನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸನ ದರ್ಶನ ಮಾಡಲು ಜನಸಂದಣಿ ಹೆಚ್ಚಾಗಿತ್ತು. ಸಾಲುಸಾಲಾಗಿ ಜನರು ದೇವರ ದರ್ಶನಕ್ಕಾಗಿ ಕಾದು ನಿಂತಿದ್ದರು. ಏಕಾದಶಿ ನಿಮಿತ್ತ ದೇವಸ್ಥಾನದ ಆಡಳಿತ ಮಂಡಳಿ ಎಲ್ಲಾ ಏರ್ಪಾಡು ಮಾಡಿತ್ತು. ಅದರೂ ಜನತೆ ನಾ ಮುಂದು ತಾ ಮುಂದು ಎನ್ನುವಂತೆ ಮುಗಿಬಿದ್ದು ದೇವರ ದರ್ಶನ ಮಾಡಿದರು.


ಈ ವೇಳೆ ಕೆಲವರಿಗೆ ದೇವರ ದರ್ಶನವಾದರೆ, ಇನ್ನೂ ಕೆಲವರು ಅವಸರದಲ್ಲಿ ದೇವರ ದರ್ಶನ ಅಗಲಿಲ್ಲ ಎಂದು ಗೊಣಗುತ್ತಲೇ ವಾಪಸ್ಸಾದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಲಡ್ಡು ಪ್ರಸಾದ, ತುಳಸಿ, ಹೊವು ವಿತರಿಸಿದರು. ಇದನ್ನು ಸ್ವೀಕರಿಸಿದ ಜನತೆ ಧನ್ಯತಾ ಭಾವ ಮೆರೆದರು.

ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ ದ್ವಾರವನ್ನು ಪ್ರವೇಶಿಸಿದರೆ ಅಂದರೆ ದೇವಾಲಯದ ಹೊರ ಭಾಗದಿಂದ ಒಳ ಭಾಗಕ್ಕೆ ದ್ವಾರದ ಮೂ¯ಕ ಪ್ರವೇಶಿಸಿದರೆ ಸಾಕ್ಷಾತ್ ವೈಕುಂಠಕ್ಕೆ ಪ್ರವೇಶ ಮಾಡಿದಂತೆ, ಈ ರೀತಿ ಪ್ರವೇಶ ಮಾಡಿದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿದೆ.

ವೈಕುಂಠ ಏಕಾದಶಿಯ ದಿನ ವೈಕುಂಠದ ಸ್ವರ್ಗದ ಅಥವಾ ವಿಷ್ಣುಲೋಕದ ಬಾಗಿಲು ತೆರೆದಿರುತ್ತದೆ ಎಂದು ಪ್ರತೀತಿ ಇದೆ. ಏಕಾದಶಿಯಂದು ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯು ಹಿಂದೂ ಧರ್ಮಿಯರಲ್ಲಿ ಇದೆ.

ಹಿಂದೂ ಪಂಚಾAಗದ ೧೨ ಮಾಸಗಳ ಶುಕ್ಲ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗಿತ್ತದೆ. ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಆಚರಿಸುತ್ತಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!