ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ : 20 ಪ್ರಕರಣ ದಾಖಲು

ದಾವಣಗೆರೆ: ಹೊನ್ನಾಳಿ ನಗರದಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ಬುಧವಾರ ದಾಳಿ ನಡೆಸಿ   ಕೋಟ್ಪಾ  ಕಾಯ್ದೆ ಉಲ್ಲಂಘಿಸಿದ 20 ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಅವರ ಮಾರ್ಗಸೂಚಿಯಂತೆ ಹೊನ್ನಾಳಿಯ ವಿವಿಧ ಹೋಟೆಲ್, ಬೇಕರಿ, ರೆಸ್ಟೋರೆಂಟ್‍ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ  ನಿಯಮ ಉಲ್ಲಂಘಿಸಿದವರ ಮೇಲೆ ರೂ.2400 ದಂಡ ಸಂಗ್ರಹಿಸಿದೆ.  ಇದೇ ಸಂದರ್ಭದಲ್ಲಿ ಕೋಟ್ಪಾ ಕಾಯ್ದೆ-2003 ಕಾಯ್ದೆಯ ಸೆಕ್ಷನ್ 04 ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಹೋಟೆಲ್ ಬೇಕರಿ ಮಾಲೀಕರಿಗೆ ಸೂಚನೆ  ನೀಡಲಾಗಿದೆ.
ದಾಳಿಯಲ್ಲಿ ಹೊನ್ನಾಳಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಕೆಂಚಪ್ಪ ಆರ್ ಬಂಟಿ, ಆಹಾರ ಸುರಕ್ಷತಾ ಅಧಿಕಾರಿ ಕೊಟ್ರೇಶಪ್ಪ.ಹೆಚ್, ಎನ್‍ಟಿಸಿಪಿ ಸಮಾಜ ಕಾರ್ಯಕರ್ತ ದೇವರಾಜ.ಕೆ.ಪಿ., ಬಿ.ಹೆಚ್.ಈ.ಓ, ಗೀತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್, ಪೊಲೀಸ್ ಸಿಬ್ಬಂದಿ ಹಾಗೂ ಇತರರು  ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!