ಸಂಚಾರಿ ನಿಯಮ ಉಲ್ಲಂಘನೆ, ದ್ವಿಚಕ್ರ ವಾಹನ ಸವಾರರಿಗೆ ೧೦೫೦೦ ದಂಡ
ದಾವಣಗೆರೆ : ಸಂಚಾರಿ ನಿಯಮಗಳನ್ನು ಪದೇಪದೇ ಉಲ್ಲಂಘಿಸಿ ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಜಿಲ್ಲಾ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಕಳೆದ ೨ದಿನಗಳ ಹಿಂದೆಯಷ್ಟೇ ಪದೇಪದೇ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದ ದ್ವಿಚಕ್ರವಾಹನ ಸವಾರನಿಗೆ ೨೬ ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ೧೬ ಸಾವಿರ ದಂಡ ಕಟ್ಟುವಂತೆ ನೋಟಿಸ್ ನೀಡಿದ್ದ ಸಂಚಾರಿ ಪೊಲೀಸ್ ಇದೀಗ ಮತೋಂದು ಪ್ರಕರಣದಲ್ಲಿ ೨೧ ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಸ್ಥಳೀಯ ಕಾಲೇಜೊಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿರುವ ದ್ವಿಚಕ್ರ ವಾಹನ ೧೦೫೦೦ ರೂ.,ದಂಡ ವಿಧಿಸಿದ್ದಾರೆ.
ಈ ಪ್ರಕಣÀದಲ್ಲಿ ೨೧ ಬಾರಿಯೂ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ೧೦೫೦೦ ರೂ., ದಂಡ ವಿಧಿಸಲಾಗಿದ್ದು , ವಿಳಾಸ ಪತ್ತೆ ಹಚ್ಚಿದ ಸಂಚಾರಿ ಪೊಲೀಸರು , ಅವರಿದ್ದಲ್ಲಿಗೆ ತೆರಳಿ ದಂqದÀ ನೋಟಿಸನ್ನು ನೀಡಿ , ಪಾವತಿ ಮಾಡುವಂತೆ ಸೂಚನೆ ನೀಡಿದ್ದಾರೆ.
ದಾವಣಗೆರೆಯಂತಹ ಮಹಾನಗರದಲ್ಲಿ ದ್ವಿಚಕ್ರವಾಹನ ಸವಾರರು ಸಮಚಾರಿ ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಕಾರಣ ಅವರ ಒಳಿತಿಗಾದರೂ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದು ಅಗತ್ಯವಾಗಿದೆ ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.