ಮತದಾನ ಜಾಗೃತಿ ಅಭಿಯಾನ ಮತದಾನ ಮಾರಾಟಕ್ಕಲ್ಲ… ಅಭಿವೃದ್ಧಿಗಾಗಿ ಮತ…

ದಾವಣಗೆರೆ : ಮತದಾನ ಮಾರಾಟಕ್ಕಲ್ಲ ಅದು ನಮ್ಮ ಹಳ್ಳಿ,ನಗರಗಳ ಅಭಿವೃದ್ಧಿ ಕಾರ್ಯಗಳಿಗೆ….
ನಮ್ಮ ನಡಿಗೇ.. ಮತಗಟ್ಟೆ ಕಡೇಗೇ…ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ತಾಲೂಕಿನ ಅವರಗೊಳ್ಳ ಹಾಗೂ ಹರಿಹರ ತಾಲೂಕಿನ ಕದರನಾಯಕನಹಳ್ಳಿಯಲ್ಲಿ ದಾವಣಗೆರೆ ಸ್ಪಂದನ ತಂಡದ ಇಪ್ಟಾ ಬೀದಿ ನಾಟಕ ಕಲಾವಿದರು ಜಾಗೃತಿ ಮೂಡಿಸುವ ನಾಟಕ ಹಾಗೂ ಹಾಡುಗಳ ಹಾಡಿ ನೆರೆದ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಕ್ರಮ ಕೈಗೊಂಡರು.
ಇಂದು ಬೆಳಗ್ಗೆ ಅವರಗೊಳ್ಳ ಪಂಚಾಯತ್ ಸ್ಥಳೀಯ ಸಂಸ್ಥೆ ಗಳು ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ನೆಡೆಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಆಶಾ ಕಾರ್ಯಕರ್ತೆರು, ಮಹಿಳಾ ಮಂಡಳಿಗಳ ಒಕ್ಕೂಟ ಸದಸ್ಯರು ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಮಏ10 ರಂದು ಕಡ್ಡಾಯ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಸಹಕರಿಸಿ ಎಂದು ಬೀದಿ ನಾಟಕ ಜಾಗೃತಿ ಗೀತೆಗಳ ಪ್ರಸ್ತುತ ಪಡಿಸಿದರಲ್ಲದೇ ನಂತರ ಮಧ್ಯಾಹ್ನ 11 ಕ್ಕೆ ಹರಿಹರ ತಾಲೂಕಿನ ಕದರನಾಯಕನಹಳ್ಳಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಿಲ್ಪಾ ರವರ ನೇತೃತ್ವದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ನೆಡೆಸಲಾಯಿತು.
ಸ್ಥಳೀಯ ಪ್ರತಿನಿಧಿ ಶ್ರೀಮತಿ ರಂಗಮ್ಮ ನವರು ಸೇರಿದಂತೆ ಹಲವು ಮಹಿಳೆಯರು ಮತ್ತು ಅಂಗನವಾಡಿ ಕಾರ್ಯಕರ್ತೆ,ಆಶಾ ಕಾರ್ಯಕರ್ತೆರು, ಸ್ಪಂದನ ತಂಡದ ಬೀದಿ ನಾಟಕ ಕಲಾವಿದ ಅಧ್ಯಕ್ಷ ಐರಣಿ ಚಂದ್ರು ನಿರ್ದೇಶನದ ಮತದಾನ ನಮ್ಮ ಹಕ್ಕು….
ಅದು ಮಾರಾಟಕ್ಕಲ್ಲ ಎಂಬ ಸಂದೇಶ ಸಾರುವ ಹಾಡುಗಳನ್ನು ಕಲಾವಿದರಾದ ಶರಣಪ್ಪ ಶ್ಶಾಗಲೆ, ಕುಕ್ಕುವಾಡ ಮಹಾಂತೇಶ್ ಶೌಕತ್ ಅಲಿ, ಶ್ರೀನಿವಾಸ್ ತುರ್ಚಘಟ್ಟ, ಶಾಂಭವಿ, ಖಾದರ್ ಪುರಂದರ ಲೋಕಿ ಕೆರೆ ಹಲವರು ಭಾಗವಹಿಸಿದ್ದರು.