ವಿದ್ಯುತ್ ಇಲ್ಲದಿದ್ರೂ ಚಲಿಸುವ ಟ್ರೇಡ್‌ಮಿಲ್ ನಂಗೊಂದು ಬೇಕು! ಈ ಮರದ ಟ್ರೆಡ್‌ಮಿಲ್‌ಗೆ ಫಿದಾ ಆದ ಆನಂದ್ ಮಹೀಂದ್ರಾ

ತೆಲಂಗಾಣ: ತೆಲಂಗಾಣದ ಕುಶಲಕರ್ಮಿ ಕೆ. ಶ್ರೀನಿವಾಸ್ (48) ತಯಾರಿಸಿದ ವಿಶಿಷ್ಟ ಮರದ ಟ್ರೆಡ್‌ಮಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ಗಮನಿಸಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ನನಗೂ ಒಂದು ಟ್ರೆಡ್‌ಮಿಲ್ ಅಗತ್ಯವಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ವಿದ್ಯುತ್ ಇಲ್ಲದೆ ಚಲಿಸುತ್ತದೆ ಈ ಟ್ರೆಡ್‌ಮಿಲ್
ಆನಂದ್ ಮಹೀಂದ್ರಾ ಅವರು ಮರದ ಟ್ರೆಡ್‌ಮಿಲ್ ಅನ್ನು ಇಷ್ಟಪಟ್ಟಿದ್ದಾರೆ. ಇದನ್ನು ತೆಲಂಗಾಣದ ವ್ಯಕ್ತಿಯೊಬ್ಬರು ಸಿದ್ಧಪಡಿಸಿದ್ದಾರೆ. ಈ ಟ್ರೆಡ್‌ಮಿಲ್‌ನ ವಿಡಿಯೋ ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ. ಈ ಟ್ರೆಡ್‌ಮಿಲ್‌ನ ವಿಶೇಷತೆ ಎಂದರೆ, ಇದು ಸಂಪೂರ್ಣವಾಗಿ ಕೈಯಾರೆ ಕೆಲಸ ಮಾಡುತ್ತದೆ ಮತ್ತು ವಿದ್ಯುತ್ ಅನ್ನು ಬಳಸುವುದಿಲ್ಲ. ಈ ಟ್ರೆಡ್‌ಮಿಲ್‌ನಲ್ಲಿ ಓಡುವುದರಿಂದ ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಜಿಮ್‌ಗೆ ಹೋಗಿ ಖರ್ಚು ಮಾಡುವ ಹಣವು ಉಳಿಯುತ್ತದೆ.

ಆನಂದ್ ಮಹೀಂದ್ರಾ ಈ ಟ್ರೆಡ್‌ಮಿಲ್ ಅನ್ನು ಶ್ಲಾಘಿಸಿ ಟ್ವಿಟರ್‌ನಲ್ಲಿ ಹಲವು ವಿಷಯಗಳನ್ನು ಹೇಳಿದ್ದಾರೆ. ಈ ವೇಳೆ ನನಗೂ ಒಂದು ಬೇಕು ಎಂದು ಬರೆದುಕೊಂಡಿದ್ದಾರೆ.
ಈ ‘ಮರದ ಟ್ರೆಡ್ ಮಿಲ್ ವಿದ್ಯುತ್ ಇಲ್ಲದೆ ಓಡುವಂತೆ’ ಮಾಡಿದ ಈ ವ್ಯಕ್ತಿಯ ಗುರುತು ಸದ್ಯಕ್ಕೆ ಬಹಿರಂಗವಾಗಿಲ್ಲ. ಆದರೆ, ಈ 45 ಸೆಕೆಂಡುಗಳ ಕ್ಲಿಪ್ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅದನ್ನು ತಯಾರಿಸಿದವರು ಅದನ್ನು ಹೇಗೆ ಚಲಾಯಿಸಬೇಕು ಎಂಬುದನ್ನು ಸಹ ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!