ರೈತರು ಉಚಿತ/ರಿಯಾಯ್ತಿ ದರದಲ್ಲಿ ಸೋಲಾರ್ ಪಂಪ್‌ಸೆಟ್ ಪಡೆಯಲು ಇರಬೇಕಾದ ಅರ್ಹತೆಗಳೇನು?
ದಾವಣಗೆರೆ : ಸರ್ಕಾರ ರೈತರಿಗೆ ಉಚಿತ/ರಿಯಾಯ್ತಿ ದರದಲ್ಲಿ ಸೋಲಾರ್ ಪಂಪ್‌ಸೆಟ್ ವಿತರಿಸುತ್ತಿದೆಯೇ? ವಿತರಿಸುತ್ತಿದ್ದಲ್ಲಿ ಉಚಿತವಾಗಿ ಸೋಲಾರ್ ಪಂಪ್‌ಸೆಟ್ ಪಡೆಯಲು ಇರಬೇಕಾದ ಅರ್ಹತೆಗಳೇನು? ಎಂದು ವಿಧಾನಸಭೆ ಕಲಾಪದಲ್ಲಿ ಕೆ.ವಿ. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಖೃತಿ ಸಚಿವ ವಿ. ಸುನೀಲ್ ಕುಮಾರ್ ಉತ್ತರಿಸಿದ್ದಾರೆ. ರೈತರ ಕೊಳವೆ ಬಾವಿಗಳಿಗೆ 5 ಹೆಚ್.ಪಿ ಸಾಮರ್ಥ್ಯದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್ ಅಳವಡಿಸುವ ಯೋಜನೆಯನ್ನು 2014-15ನೇ ಸಾಲಿನಲ್ಲಿ ಸರ್ಕಾರದಿಂದ ಜಾರಿಗೆ ತರಲಾಗಿದ್ದು, ಸದರಿ ಯೋಜನೆಯಡಿ ಪ್ರತಿ ಪಂಪ್‌ಸೆಟ್‌ಗೆ ಕೇಂದ್ರ ಸರ್ಕಾರದ ಸಹಾಯಧನ ಗರಿಷ್ಠ ಶೇ.30ರಷ್ಟು ಒದಗಿಸಲಾಗಿದ್ದು, ಸಾಮಾನ್ಯ ವರ್ಗದ ರೈತ ಫಲಾನುಭವಿಗಳಿಂದ ಪ್ರತಿ ಸೌರಪಂಪ್‌ಸೆಟ್‌ಗಳನ್ನು ಅನುಷ್ಠಾನಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಸಹಾಯಧನ ಹಾಗೂ ಫಲಾನುಭವಿಗಳ ವಂತಿಗೆ ನಂತರ ಉಳಿದ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸಲಾಗಿದ್ದು, ನವೆಂಬರ್ 2019ರ ಅಂತ್ಯಕ್ಕೆ ಒಟ್ಟು 3710 ಸಂಖ್ಯೆ (ಸಾಮಾನ್ಯ ವರ್ಗ 3009, ಪರಿಶಿಷ್ಟ ಜಾತಿ 487, ಪರಿಶಿಷ್ಟ ಪಂಗಡ 214) ಹೆಚ್.ಪಿ ಸಾಮರ್ಥ್ಯ ಸೌರ ಪಂಪ್‌ಸೆಟ್‌ಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಕಾರ್ಯಕ್ರಮ ಪೂರ್ಣಗೊಳಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಇದರಡಿ ಒಟ್ಟು 701 ಸಂಖ್ಯೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಉಚಿತವಾಗಿ ಸೌರ ಪಂಪ್‌ಸೆಟ್‌ಗಳನ್ನು ಒದಗಿಸಲಾಗಿದೆ. ಕೇಂದ್ರ ಸರ್ಕಾರವು ಸೌರ ಶಕ್ತಿ ಆಧಾರಿತ ಜಾಲಮುಕ್ತ ಸೌರ ನೀರಾವರಿ ಪಂಪ್‌ಸೆಟ್ ಅಳವಡಿಸುವ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪಿಎಂ-ಕೆಯುಎಸ್‌ಯುಎA ಯೋಜನೆಯಡಿಯಲ್ಲಿ 7.5 ಹೆಚ್.ಪಿ ಸಾಮರ್ಥ್ಯದವರೆಗೆ ಶೇ.30 ರಷ್ಟು ಕೇಂದ್ರ ಸಹಾಯಧನ ಒದಗಿಸಲಾಗುತ್ತಿದೆ. ರಾಜ್ಯ ಸರ್ಕಾರವು ಶೇ.30 ರಷ್ಟು ಸಹಾಯಧನ ಒದಗಿಸಬೇಕಾಗಿದ್ದು ಹಾಗೂ ಫಲಾನುಭವಿಗಳ ವಂತಿಗೆ ಶೆ. 40 ರಷ್ಟು ಆಗಿರುತ್ತದೆ. ಪಿಎಂ-ಕೆಯುಎಸ್‌ಯುಎA ಯೋಜನೆಯಡಿಯಲ್ಲಿ 2019-20ನೇ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಬುಡಕಟ್ಟು ಉಪ ಯೋಜನೆಯಡಿ ಶೇ. 50ರಷ್ಟು ರಾಜ್ಯ ಸರ್ಕಾರದ ಎಸ್.ಸಿ.ಎಸ್.ಪಿ/ಟಿಎಸ್‌ಪಿ ಬೊಕ್ಕಸದಿಂದ ಭರಿಸಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಂದ ಶೇ.20ರಷ್ಟು ಫಲಾನುಭವಿಯ ವಂತಿಕೆಯಾಗಿ ಪಡೆದು, ಇನ್ನುಳಿದ ಶೇ.30 ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರದಿಂದ ಪಡೆದು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಈವರೆಗೆ ಒಟ್ಟು 206 ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿರುತ್ತದೆ.