ಬೀದಿ ನಾಯಿಗಳಿಂದ ಮುಗ್ಧ ಜೀವಗಳು ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳುವುದೇ ಪಾಲಿಕೆ.? – ಕೆ.ಎಲ್.ಹರೀಶ್ ಬಸಾಪುರ.

Will the corporation wake up before innocent lives are killed by stray dogs? - KL Harish Basapur.

ಬೀದಿ ನಾಯಿಗಳಿಂದ ಮುಗ್ಧ ಜೀವಗಳು ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳುವುದೇ ಪಾಲಿಕೆ

ದಾವಣಗೆರೆ: ದಾವಣಗೆರೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ, ಬೀದಿ ನಾಯಿಗಳ ದಾಳಿಯಿಂದ ಮುಗ್ಧ ಜೀವಗಳು ಬಲಿಯಾದ ನಂತರ ಪಾಲಿಕೆ ಎಚ್ಚೆತ್ತುಕೊಳ್ಳಬಹುದೇ???

ಪಾಲಿಕೆಗೆ ಮುಗ್ಧಜೀವಗಳ ಬಲಿ ಬೇಕಾಗಿದೆಯೇ??? ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದ್ದು, ನೂತನ ಆಯುಕ್ತರು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಬಗ್ಗೆ ಗಮನಹರಿಸಬೇಕಾಗಿದೆ.

ನಗರದ ಸಿದ್ಧವೀರಪ್ಪ ಬಡಾವಣೆ, ಸ್ವಾಮಿ ವಿವೇಕಾನಂದ ಬಡಾವಣೆ, ಆಂಜನೇಯ ಬಡಾವಣೆ, ತರಳಬಾಳು ಬಡಾವಣೆ, ವಿದ್ಯಾನಗರ, ವಿನಾಯಕ ಬಡಾವಣೆ, ಸರಸ್ವತಿ ನಗರ, ಶಕ್ತಿನಗರ, ಕಾಳಿದಾಸ ಸರ್ಕಲ್, ರಾಮನಗರ, ಕೆಟಿಜೆ ನಗರ, ಲೆನಿನ್ ನಗರ, ನಿಟ್ಟುವಳ್ಳಿ, ಅವರಗೆರೆ, ಬಸಾಪುರ ಹಾಗೂ ಹಳೆಯ ದಾವಣಗೆರೆ ಭಾಗದ ಎಲ್ಲಾ ಕಡೆಗಳಲ್ಲೂ ಸಹ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ರೋಸಿ ಹೋಗಿದ್ದು ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪಾಲಿಕೆ ಬೀದಿ ನಾಯಿಗಳನ್ನು ನಿಯಂತ್ರಿಸದೆ, ಬೀದಿ ನಾಯಿಗಳನ್ನು ಕಡಿವಾಣ ಹಾಕಲು ಪ್ರಾಣಿ ದಯಾ ಸಂಘ ಹಾಗೂ ಇನ್ನಿತರ ಸಂಘಗಳು ವಿರೋಧಿಸುತ್ತವೆ, ಎನ್ನುವ ಕುಂಟು ನೆಪ ಹೇಳುವ ಬದಲು ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಮೂಲಕ, ಸಾರ್ವಜನಿಕರು ಸೋ ಕಾಲ್ಡ್, ಸ್ಮಾರ್ಟ್ ಸಿಟಿಯಲ್ಲಿ. ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕಾಗಿ ಸಾರ್ವಜನಿಕರ ಆಗ್ರಹವಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!