ಆಶ್ರಯ ಶಾಖೆಯಲ್ಲಿ 2 ಲಕ್ಷ ಲಂಚ.! ಮ್ಯಾನೇಜರ್ ಗೋವಿಂದ ನಾಯ್ಕ್ ಪ್ರಳಯಾಂತಕ – ಅಜಯ್ ಕುಮಾರ್

ಆಶ್ರಯ ಶಾಖೆಯಲ್ಲಿ 2 ಲಕ್ಷ ಲಂಚ

ದಾವಣಗೆರೆ: ಮಹಾನಗರ ಪಾಲಿಕೆಯ ಆಡಳಿತ ಸುಗಮವಾಗಿ ನಡೆಯಬೇಕೆಂದರೆ “ಆಶ್ರಯ” “ಆರೋಗ್ಯ ಶಾಖೆ “ಮತ್ತು “ಕಂದಾಯ ಶಾಖೆ” ಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಸದಸ್ಯರ ಮಾನ ಹರಾಜು ಆಗುತ್ತದೆ ಎಂದು ಬಿಜೆಪಿಯ ಮಾಜಿ ಮೇಯರ್ ಬಿ ಜೆ ಅಜಯ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಮೇಯರ್ ಅಜಯ್ ಕುಮಾರ್ 2023 24 ನೇ ಸಾಲಿನ ಆಯವ್ಯಯದ ಬಗ್ಗೆ ಮಾತನಾಡುತ್ತಾ ಜನಪ್ರತಿನಿಧಿಗಳಿಗೆ ತಿಳಿಯದಂತೆ ಆಶ್ರಯ ಸಮಿತಿಯ ನೌಕರರು ತಮಗೆ ತಿಳಿದಂತೆ ವರ್ತಿಸುತ್ತಿದ್ದಾರೆ. ಒಂದು ನಿವೇಶನಕ್ಕೆ ಒಂದು ಲಕ್ಷ, 2 ಲಕ್ಷ ರೂಪಾಯಿ ಲಂಚ ಕೇಳುತ್ತಾರೆ ಹೀಗೆ ಕೊಟ್ಟವರು ನಮ್ಮ ಬಳಿ ಹೇಳಿದ್ದಾರೆಂದು ಬಿಜೆಪಿ ಮತ್ತು ಕಾಂಗ್ರೆಸ್ಸಿನ ಸದಸ್ಯರುಪಕ್ಷಾತೀತವಾಗಿ ಆಯುಕ್ತರ ಗಮನಕ್ಕೆ ತಂದರು.
ಕಾಂಗ್ರೆಸಿನ ಶ್ರೀಮತಿ ಮೀನಾಕ್ಷಿ ಜಗದೀಶ್ ಅವರು ಮಾತನಾಡಿ ನಮ್ಮ ವಾರ್ಡಿನಲ್ಲಿ ನಮಗೆ ಗೊತ್ತಿಲ್ಲದಂತೆ 11 ಜನರಿಗೆ ನಿವೇಶನ ಮಂಜೂರಾತಿ ಪತ್ರ ಕೊಟ್ಟಿದ್ದಾರೆ.ಇದನ್ನು ಹಿಡಿದುಕೊಂಡು ಕೆಲವರು ನಮ್ಮ ಬಳಿ ಬಂದು ಕೇಳುತ್ತಾರೆ. ಆಶ್ರಯ ವಿಭಾಗಕ್ಕೆ ಬಂದು ಕೇಳಿದರೆ ಅಲ್ಲಿನ ಮ್ಯಾನೇಜರ್ ಗೋವಿಂದ ನಾಯ್ಕ್ ಎಂಬುವವರು ನಮಗೇನು ಗೊತ್ತಿಲ್ಲವೆಂದು ಹೇಳುತ್ತಾರೆ ಹಾಗಾದರೆ ನಾವು ಯಾರಿಗೆ ಹೇಳಬೇಕೆಂದು ಗೋ ಗೆರೆದರು. ಇವರ ಮಾತನ್ನು ಕೆಲವರು ಕೇಳಿಸಿಕೊಳ್ಳದಿದ್ದಾಗ ಅವರ ಬೆಂಬಲಕ್ಕೆ ಬಿಜೆಪಿಯ ಸದಸ್ಯರಾದ ಅಜಯ್ ಕುಮಾರ್, ಎಸ್ ಟಿ ವೀರೇಶ್, ನಿಂತು ಆಶ್ರಯ ನಿವೇಶನ ಕೊಡುವಾಗ ಯಾವ ಮಾನದಂಡ ಉಪಯೋಗಿಸುತ್ತೀರಿ. ಇಲ್ಲಿರುವ ಗೋವಿಂದ ನಾಯ್ಕ್ ಬಹಳ ವರ್ಷದಿಂದ ಇಲ್ಲಿಯೇ ಇದ್ದಾರೆ ಯಾರು ನಗೇನು ಮಾಡಲಾಗುವುದಿಲ್ಲವೆಂದು ಉತ್ತರ ಕೊಡುತ್ತಾನೆ. ಇವರು ಕೆಲವರನ್ನ ಸಾಕಿ- ಕೊಂಡಿದ್ದು ಅವರ ಮೂಲಕ 1 ರಿಂದ 2 ಲಕ್ಷ ಗಳವರೆಗೆ ಹಣ ಕೇಳುತ್ತಾರೆಂದು ಆಯುಕ್ತರ ಗಮನಕ್ಕೆ ತಂದರು. ಇವರು ಪಾಲಿಕೆಯಲ್ಲಿ ಎಲ್ಲಿ ಬೇಕು ಅಲ್ಲಿ ಮೊಳೆ ಹೊಡೆದಿದ್ದಾರೆ, ಇವರು ಪ್ರಳಯಾಂತಕ ಎಂದು ಕಠೋರವಾಗಿ ಮಾತನಾಡಿದರು.


75, ಸಾವಿರ ಅರ್ಜಿಗಳು ನಿವೇಶನ ನೀಡುವಂತೆ ಬಂದಿವೆ ಎಂದು ನಾಗರಾಜ್ ಹೇಳಿದಾಗ ಇಲ್ಲ 27 ಸಾವಿರ ಅರ್ಜಿಗಳು ಪೆಂಡಿಗ್ ಇವೆ ಎಂದು ಅಜಯ್ ಕುಮಾರ್ ವಿವರಣೆ ನೀಡಿ. ಸೀನಿಯಾರಿಟಿ ಆಧಾರದ ಮೇಲೆ ಸೈಟ್ ಕೊಡಬೇಕು ಆದರೆ ಅಯಾ ವಾರ್ಡ್ ಸದಸ್ಯರ ಗಮನಕ್ಕೆ ತಂದುಕೊಟ್ಟರೆ ಒಳ್ಳೆಯದು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ 31ನೇ ವಾರ್ಡಿನಲ್ಲಿಯೂ ಅದೇ ರೀತಿ ಆಗಿದೆ ಎಂದು ಸದಸ್ಯರೋರ್ವರು ತಿಳಿಸಿ. ಅಲ್ಲಿನ ವ್ಯವಸ್ಥಾಪಕ ತ್ರಿನೇತ್ರರವರು ಸಹ ಸರಿಯಾದ ಮಾಹಿತಿ ನೀಡಿಲ್ಲವೆಂದರು. ಸಮಿತಿಯಲ್ಲಿ ಶಾಸಕರು, ಉಪ ವಿಭಾಗಾಧಿಕಾರಿಗಳು, ಆಯುಕ್ತರು, ನಾಮ ನಿರ್ದೇಶಿತ ಸದಸ್ಯರು ಇರುತ್ತಾರೆ. ಇವರು ಹೇಳಿದಂತೆ ವ್ಯವಸ್ಥಾಪಕರು ಕೇಳಬೇಕೆಂದು ನುಡಿದ ಆಯುಕ್ತರು ಗೋವಿಂದ ನಾಯ್ಕ್ ಉತ್ತರ ನೀಡುವಂತೆ ಸೂಚಿಸಿದರು.
ಈಗ 1600 ನಿವೇಶನ ಮಂಜುರಾಗಿ ಬಂದಿವೆ. ಶಾಸಕ ಶಾಮನೂರು ಶಿವಶಂಕರಪ್ಪನವರು ಸೂಚಿಸಿದಂತೆ ತಾವು ಕೆಲಸ ನಿರ್ವಹಿಸಿರುವುದಾಗಿ ಸಭೆಗೆಗೋವಿಂದ ನಾಯ್ಕ್ ಸ್ಪಷ್ಟಪಡಿಸಿದರು.
ಇದರಲ್ಲಿ ಯಾವ ಸದಸ್ಯರ ಹಸ್ತಕ್ಷೇಪ ಇಲ್ಲ. ಆದರೆ ಕೆಲ ಅಧಿಕಾರಿಗಳು ಮಾಡುವ ತಪ್ಪಿನಿಂದಾಗಿ ಪಾಲಿಕೆಯ ಮಾನ ಹರಾಜು ಆಗುತ್ತಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎಸ್ ಶಾಂತಕುಮಾರ್ ಸೋಗಿ ತಿಳಿಸಿ, ತಪ್ಪು ಮಾಡಿದವರ ಮೇಲೆ ಕ್ರಮವೇನು ಎಂದರು. ಈಗಾಗಲೇ ನಿವೇಶನಕ್ಕಾಗಿ ಲಂಚ ಕೊಟ್ಟವರಿದ್ದಾರೆ ಬೇಕಾದರೆ ಅವರನ್ನೆಲ್ಲ ಇಲ್ಲಿಗೆ ಕರೆಸುತ್ತೇನೆ ಎಂದು 31ನೇ ವಾರ್ಡಿನ ಸದಸ್ಯರು ನುಡಿದಾಗ ಮಧ್ಯ ಪ್ರವೇಶಿಸಿದ ಆಯುಕ್ತೆ ಶ್ರೀಮತಿ ರೇಣುಕಾರವರು ಈ ಬಗ್ಗೆ ನಮ್ಮ ಗಮನಕ್ಕೆ ತಂದರೆ ಕೆ ಸಿ ಎಸ್ ಆರ್ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.


ಒಟ್ಟಾರೆ ಆಶ್ರಯ ಶಾಖೆಯಲ್ಲಿ ಕಬಂಧ ಬಾಹುಗಳ ಬೇರುರಿದ್ದೂ ಬುಡ ಸಮೇತ ಕೀಳಬೇಕಾಗಿದೆ ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಗೋಡೆಗಳಲ್ಲಿ ಭಾರಿ ಸದ್ದು ಎದ್ದಿರುವುದಂತು ನಿಜ.

Leave a Reply

Your email address will not be published. Required fields are marked *

error: Content is protected !!