ವಿಶ್ವ ಛಾಯಾಗ್ರಹಣ ದಿನಾಚರಣೆ: ವೀರ ಯೋಧರಿಗೆ, ಕೊರೋನಾ ವಾರಿಯಾರ್, ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ

ದಾವಣಗೆರೆ : ಕವಿ ಕಾಣದ್ದನ್ನು ರವಿ ಕಂಡ ರವಿ ಕಾಣದ್ದನ್ನು ಫೋಟೋಗ್ರಾಫರ್ ಕಂಡ ಎಂಬತಾಗಿದೆ. ಫೊಟೋಗ್ರಾಫರ್ ವಿಡಿಯೋಗ್ರಾಫರ್ ಸೇವೆ ಅಗಣಿತವಾಗಿದ್ದು, ಎಲ್ಲ ರಂಗಗಳಲ್ಲೂ ಬೆಳಕನ್ನು ಚೆಲ್ಲುವಂತಹ ಕೆಲಸವನ್ನು ನಿರ್ವಹಿಸುವವರು ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಗುರುವಾರ ದಾವಣಗೆರೆ ತಾಲೂಕು ಫೋಟೋ ಮತ್ತು ವೀಡಿಯೋಗ್ರಾರ‍್ಸ್ ಸಂಘದಿಂದ ಏರ್ಪಡಿಸಿದ್ದ ಸಂಘದ 9 ನೇ ವರ್ಷದ ವಾರ್ಷಿಕೋತ್ಸವ 182ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ವೀರ ಯೋಧರಿಗೆ, ಕೊರೋನಾ ವರಿಯರ್ , ಹಿರಿಯ ಛಾಯಾಗ್ರಾಹಕರು, ಲ್ಯಾಬ್ ಮಾಲೀಕರು, ಆಹಾರ ದಿನಸಿ ಕಿಟ್ ವಿತರಿಸಿದ ದಾನಿಗಳಿಗೆ ಸನ್ಮಾನ ಹಾಗೂ ಸಂಘದ ಪದಾಧಿಕಾರಿಗಳಿಗೆ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಆಡುಮುಟ್ಟದ ಸೊಪ್ಪಿಲ್ಲ, ಫೋಟೋಗ್ರಾಫರ್ ಮುಟ್ಟದ ಮನೆ ಇಲ್ಲ ಎಂಬಂತಾಗಿದೆ , ಏನೇ ಕಾರ್ಯಕ್ರಮಗಳಿರಲಿ ಸುಖ, ದುಃಖದ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮ ಯಾವುದೇ ಇರಲಿ ಅದರ ಸ್ಮರಣ ಸಂಚಿಕೆಯಲ್ಲಿ ಬರಬೇಕೆಂದರೆ ನಿಮ್ಮ ಪಾತ್ರ ಬಹಳ ಮುಖ್ಯ ಎಂದರು.
ರಾಜ್ಯಾಂಗ, ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಎಲ್ಲ ಅಂಗಗಳನ್ನು ಇಂದು ಮನೆ ಮನೆಗೆ ಪರಿಚಯಿಸುವ ಒಂದು ಅಂಗ ಎಂದರೆ ಫೋಟೋಗ್ರಫಿ, ವೀಡಿಯೋಗ್ರಫಿ ಅಂಗ. ನ್ಯಾಯಾಲಯದಲ್ಲಿ ಒಬ್ಬ ಅಮಾಯಕರಿಗೆ ನ್ಯಾಯವನ್ನು ನೀಡುವಂತಹ ಶಕ್ತಿ ನೀವುಗಳು ತೆಗೆಯುವ ಫೋಟೋಕ್ಕಿದೆ. ಅದು ಎಂದೇ ತೆಗೆದಿರಲಿ ಅದು ಸಾಕ್ಷಿಯಾಗಲಿದೆ.
ಹಿರಿಯ ಅಧಿಕಾರಿಗಳು ನಮ್ಮವರೇ ಇದ್ದಾರೆ, ನೀವುಗಳು ಯಾರೂ ಉಳ್ಳವರು ಇಲ್ಲ, ಕಷ್ಟದಲ್ಲಿದ್ದೀರಿ. ನಿಮ್ಮದೇ ಆದ ಬಡಾವಣೆ ನಿರ್ಮಿಸಿಕೊಡುವಂತೆ ಕಷ್ಟದಲ್ಲಿರುವ ನೀವು ನಿಮ್ಮದೇ ನೆಲೆಗಾಗಿ ಜಿಲ್ಲಾಧಿಕಾರಿಗಳು, ಮೇಯರ್‌ರಿಗೆ ಮನವಿ ನೀಡಿ ಪಡೆಯುವ ಕಾರ್ಯ ನಡೆಯಲಿ. ತಿಂಗಳಾನುಗಟ್ಟಲೆ ಪ್ರತಿಯೊಂದು ಪ್ರಾಣಿ ಜೀವ ಸಂಕುಲ ಬದುಕನ್ನು ಹತ್ತಿರದಿಂದ ತೋರಿಸುವಂತಹ ಒಬ್ಬ ಮಹಾಮೇದಾವಿ ಸಾಧಕ ಎಂದರೆ ಒಬ್ಬ ಫೋಟೋಗ್ರಾಫರ್, ವೀಡಿಯೋಗ್ರಾಫರ್‌ರಿಂದ ಸಾಧ್ಯ. ಫೋಟೋಗ್ರಾಫರ್, ವೀಡಿಯೋಗ್ರಾಫರ್ ಲ್ಯಾಬ್‌ಗಳಲ್ಲಿರುವವರು ಕೆಲಸ ಮಾಡುವವರು ಕಷ್ಟದಲ್ಲಿದ್ದೀರಿ. ನೀವು ಏನೇ ಕಷ್ಟವಾಗಲಿ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಿರಿ. ನಿಮ್ಮ ಸಂಘ ಇನ್ನೂ ಉತ್ತಮ ಕಾರ್ಯ ಮಾಡುವ ಮೂಲಕ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಫೋಟೋಗ್ರಫಿ ಎನ್ನುವುದು ಕೆಲವರಿಗೆ ಹವ್ಯಾಸವಾಗಿದೆ. ಕ್ಯಾಮರಾಗಳ ಬೆಲೆ ಕೂಡಾ ಬಹಳ ಜಾಸ್ತಿ, ಮೊಬೈಲ್ ಬಂದ ಮೇಲೆ ಫೋಟೋ, ವೀಡಿಯೋಗ್ರಾರ‍್ಸ್, ಸ್ಟುಡಿಯೋ ಮಾಲೀಕರಿಗೆ ಬಹಳ ಹೊಡೆತ ಬಿದ್ದಿದೆ.
ಅಂತಹದರಲ್ಲೂ ತಮ್ಮ ವೃತ್ತಿಯನ್ನು ಫೋಷಿಸಿಕೊಂಡು ಬಂದಿದ್ದಾರೆ. ಜೀವನದ ಕೊನೆವರೆಗೂ ನಮ್ಮ ನೆನಪುಗಳನ್ನು ಕಾಪಾಡುವ ಕೆಲಸವನ್ನು ಈ ಫೋಟೋಗಳು ಮಾಡುತ್ತವೆ. ಈ ವೃತ್ತಿ ವಿಶಿಷ್ಟವಾದದ್ದು, ಈ ಸಂಘದ ಪದಾಧಿಕಾರಿಗಳು, ಸದಸ್ಯರು ತಮ್ಮ ವೃತ್ತಿಯ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ತಮ್ಮ ಕಾಯಕ, ಕರ್ತವ್ಯದ ಜೊತೆಗೆ ಸಮಾಜಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೊರೋನಾ ಇಲ್ಲ ಎಂದು ಮೈಮರೆಯಬೇಡಿ, ತಮ್ಮ ವೈಯಕ್ತಿಕ ಜೀವನದ ರಕ್ಷಣೆ ಮಾಡಿಕೊಳ್ಳಿರಿ. ಕಾಯಕ ಯಾವುದಾದರೇನು ಶ್ರದ್ಧೇಯಿಂದ ಮಾಡಿದರೆ ದೇವರನ್ನು ಕಾಣಲು ಸಾಧ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ತಾಂತ್ರಿಕತೆ ಬದಲಾದಂತೆ ಹೊಸ ಹೊಸ ಅವಿಷ್ಕಾರಗಳು ಬಂದಿವೆ. ಮಧುರ ಕ್ಷಣಗಳನ್ನು ಸೆರೆ ಹಿಡಿಯುವ ಕಾರ್ಯ ಮಾಡುತ್ತೀರಿ. ಇಂದು ನಡೆದ ಕಾರ್ಯಕ್ರಮವನ್ನು ಮುಂದಿನ 20 ವರ್ಷದ ನಂತರ ಈ ದಿನವನ್ನು ನೆನಪಿಸುವಂತಹ ಕೆಲಸವನ್ನು ಈ ಫೋಟೋಗ್ರಫಿ ಮಾಡುತ್ತದೆ. ತಾಂತ್ರಿಕತೆ ಬದಲಾಗಿದ್ದು, ಡಿಜಿಟಲ್ ಬಂದರೂ ಸಹಾ ಹಿಂದೆ ತೆಗೆದ ಫೋಟೊಗಳಿಗೆ ಬಹಳ ಬೆಲೆ ಇರುತ್ತದೆ. ಫೋಟೋಗ್ರಫಿ ಪ್ರೊಫೆಷನ್‌ನಲ್ಲಿ ವಿಶ್ವ ಸುದ್ದಿ ಮಾಡಿದವರು ಇದ್ದಾರೆ. ಈಗ ಫೋಟೋ ಜರ್ನಲಿಸಂ ಅಂತಾ ಬಂದಿದೆ. ಒಂದು ಫೋಟೊ ಅಲ್ಲಿ ನಡೆದ ಘಟನೆ ಬಗ್ಗೆ ತಿಳಿಸುತ್ತದೆ.
ಫೋಟೋಗ್ರಫಿಯಲ್ಲಿ ದೇಶ ವಿದೇಶಗಳಲ್ಲಿ ಅವಾರ್ಡ್ಸ್ಗಳಿವೆ, ಈ ಅಸೋಸಿಯೇಷನ್ ಇಂತಹ ತರಬೇತಿಯನ್ನು ನೀಡುವ ಇನ್ನೂ ಹೆಚ್ಚಿನ ಕಾರ್ಯ ಮಾಡಬೇಕು. ಫೋಟೋ ತೆಗೆಯುವ ಕ್ಯಾಲಿಬರ್ ನಾವು ಬೆಳೆಸಿಕೊಳ್ಳಬೇಕು. ಎಷ್ಟು ವರ್ಷ ಫೋಟೋಗ್ರಫಿ ಮಾಡಿದರೂ ಕೂಡಾ ಕಲಿಯುವುದು ಇನ್ನೂ ಇರುತ್ತದೆ. ಕಲಿಕೆಗೆ ಕೊನೆ ಇಲ್ಲ. ನಿಮ್ಮ ವೃತ್ತಿ ಜೊತೆಗೆ ಸಾಕಷ್ಟು ಅವಕಾಶಗಳಿವೆ, ಅಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ, ತಂತ್ರಜ್ಞರಿಂದ ಮಾಹಿತಿ ಪಡೆಯಿರಿ. ನಮ್ಮ ದಾವಣಗೆರೆ ಜಿಲ್ಲೆಗೆ ಪ್ರಶಸ್ತಿಗಳು ಬರುವಂತಾಗಲಿ ಎಂದು ಹೇಳಿದರು
ಮೇಯರ್ ಎಸ್.ಟಿ.ವೀರೇಶ ಮಾತನಾಡಿ, ಒಬ್ಬ ಫೋಟೋಗ್ರಾಫರ್ ಶುಭ ಕಾರ್ಯಕ್ರಮಗಳಲ್ಲಿ ಫೋಟೊಗ್ರಾಫರ್ ಆಗಿ ಕೆಲಸ ಮಾಡುವುದಿಲ್ಲ, ಒಬ್ಬ ಪುರೋಹಿತರಾಗಿಯೂ ಕೂಡಾ ಕೆಲಸ ಮಾಡುತ್ತಾರೆ.
ಯಾವುದೇ ರಾಜಕಾರಣಿಗಳಿರಲಿ ಅವರಿಗೆ ಮೊದಲು ಫೋಟೋಗ್ರಾಫರ್ ಇರಲೇಬೇಕು. ಇಂದಿನ ಸಿಹಿ ಘಟನೆಗಳು ನಾಳೆಯ ಸವಿ ನೆನಪುಗಳು ಈ ಸವಿನೆನಪುಗಳನ್ನು ನೂರಾರು, ಹಲವಾರು ದಶಕಗಳ ಕಾಲ ನೆನಪುಗಳನ್ನು ಉಳಿಸಿಕೊಡುವುದು ಈ ಫೋಟೋಗ್ರಫಿ. ಈ ಸಂಘದ ಸದಸ್ಯರು ಹಿರಿಯರ ಸಲಹೆ ಸಹಕಾರ ಪಡೆದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತರಬೇತಿ ಪಡೆದು ಇನ್ನೂ ಉತ್ತಮ ಕೆಲಸಗಳನ್ನು ನಿರ್ವಹಿಸಿರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಎಸ್.ಎಲ್.ಆನಂದಪ್ಪ, ಉದ್ಯಮಿ ಲೋಕಿಕೆರೆ ನಾಗರಾಜ ಮಾತನಾಡಿದರು. ಸಂಘದ ಅಧ್ಯಕ್ಷ ಬಿ.ಮಂಜುನಾಥ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೀರ ಯೋಧರಾದ ಚಂದ್ರಮೋಹನ್, ಎಂ.ಮಂಜುನಾಥ, ಸುರೇಶ ರಾವ್, ಕೊರೊನಾ ವಾರಿರ‍್ಸ್ ಆದ ಡಾ.ಡಿ.ವಿ.ವೆಂಕಟೇಶ, ಎ.ಡಿ.ಅರುಣಾದೇವಿ, ಜೆ.ಎಂ.ಶಾಕೀರುಲ್ಲಾ ಖಾನ್, ಹಿರಿಯ ಛಾಯಾಗ್ರಾಹಕರಾದ ವಿವೇಕ್, ಸುರೇಶ ಬೂತೆ, ಎಚ್.ಟಿ.ಮಂಜುನಾಥ, ಕುಮರ, ರಾಜು ಎಲ್.ಬದ್ದಿ, ಶಿವಯೋಗಿ, ಮುದ್ದಳ್ಳಿ ಅರುಣ, ಬಿ.ಎಂ.ಗಿರಿಧರ, ಲ್ಯಾಬ್‌ನ ಮೋಹನ್, ಎಂ.ರಾಘವೇAದ್ರ, ಬಸವರಾಜರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಂಘದ ಅಧ್ಯಕ್ಷ ಆರ್.ಎನ್.ಪಾಟೀಲ್, ತಾಲೂಕು ಸಂಘದ ಉಪಾಧ್ಯಕ್ಷ ಗಣೇಶ ಸಿ.ಚಿನ್ನಿಕಟ್ಟೆ, ಕಿರಣ್ ಅಮೃತ್, ಪ್ರಧಾನ ಕಾರ್ಯದರ್ಶಿ ಎಂ.ಮನು, ಎಚ್.ರಾಜಶೇಖರ, ಮಾಲತೇಶ ಜಾದವ್, ಸಂತೋಷ ಗಣೇಶ, ಚಂದ್ರಶೇಖರ, ಚನ್ನಬಸವ ಶೀಲವಂತ್, ಮಲ್ಲೇಶ ಪಾಟೀಲ್, ಟಿ.ಎಸ್.ಗಿರೀಶ, ಎ.ಸುರೇಶ, ಹರೀಶ, ವಿರೇಶ, ರಮೇಶ, ಸಂಜಯ್, ಸಂತೋಷಕುಮಾರ, ಪಂಚಾಕ್ಷರಯ್ಯ, ಮನೋಜ್, ವೀರೇಶ ಇತರರು ಇದ್ದರು. ಸಂತೋಷ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.