18.75 ಲಕ್ಷ ರೂ. ಮೌಲ್ಯದ ಅಕ್ರಮ ಸಾಗುವಾನಿ ಮರದ ತುಂಡುಗಳ ವಶ

ಅಕ್ರಮ ಸಾಗುವಾನಿ ಮರದ ತುಂಡು
ದಾವಣಗೆರೆ: ಜಿಲ್ಲೆಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿಟ್ಟುಕೊಂಡಿದ್ದ ಸುಮಾರು 18.75 ಲಕ್ಷ ರೂ. ಮೌಲ್ಯದ 327 ಸಾಗುವಾನಿ ಮರದ ತುಂಟುಗಳನ್ನು ಚನ್ನಗಿರಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಮಲ್ಲೇನಹಳ್ಳಿ ಗ್ರಾಮದ ವಾಟರ್ ಟ್ಯಾಂಕ್ ಹತ್ತಿರ ಹಾಗೂ ಸಿದ್ದಪ್ಪ ಅವರ ವಾಸ ಮನೆಯ ಪಕ್ಕದಲ್ಲಿ ಸಾಗುವಾಣಿ ಮರದ ತುಂಡುಗಳನ್ನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಳ್ಳಲಾಗಿತ್ತು.
ದಾವಣಗೆರೆ ನಗರದ ಶಕ್ತಿ ನಗರದ ವಾಸಿ ಕುಮಾರ ನಾಯ್ಕ ಎಂಬುವವರಿಗೆ ಈ ಮರದ ತುಂಡುಗಳು ಸೇರಿದ್ದವು ಎನ್ನಲಾಗಿದ್ದು, ಖಿಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶ ಪಡಿಸಿಂಡು ಪ್ರಕರಣ ದಾಖಲಿಸಲಾಗಿದೆ.
ಚನ್ನಗಿರಿ ಪಿಎಸ್‌ಐ ಎಂ.ವಿ. ಮೇಘರಾಜ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಕಾಶ್, ಟಿ.ಸಿ. ರವಿಕುಮಾರ್, ರಾಘವೇಂದ್ರ, ಶಿವಲಿಂಗ, ಉಮೇಶ್ ದಾಳಿಯಲ್ಲಿ ಭಾಗವಹಿಸಿದ್ದರು.