ಅಪರಾಧದೇಶರಾಜ್ಯ / ಕರ್ನಾಟಕ

Police: ಖಾಕಿ ಕದi: ಹಬ್ಬದ ಸಂಭ್ರಮದ ಮರೆಯಲ್ಲೇ ‘ದಸರಾ ಪಟ್ಟಿ’ ವಸೂಲಿ ಜೋರು! ವ್ಯಾಪಾರಿಗಳು ಕಂಗಾಲು

Share
Share

ಬೆಂಗಳೂರು: (Police) ನಾಡಹಬ್ಬ ದಸರಾ ಮತ್ತು ದೀಪಾವಳಿ ಹಬ್ಬಗಳು ಸಮೀಪಿಸುತ್ತಿದ್ದಂತೆ, ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಅನಧಿಕೃತ ‘ದಸರಾ ಪಟ್ಟಿ’ ಎತ್ತುವ ಅಕ್ಷರಶಃ ಚಾಳಿ ಮುನ್ನೆಲೆಗೆ ಬಂದಿದೆ. ಹಬ್ಬದ ಖರ್ಚಿಗಾಗಿ ಠಾಣೆಗಳ ವತಿಯಿಂದ ಸ್ಥಳೀಯ ವ್ಯಾಪಾರಿಗಳು, ಉದ್ಯಮಿಗಳು, ಮತ್ತು ಅಕ್ರಮ  ಧಂದೆಕೋರರಿಗೆ ವಿಧಿಸಲಾಗುತ್ತಿರುವ ಬಲವಂತದ ವಂತಿಗೆ ವಸೂಲಿ ದಂಧೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಸಾರ್ವಜನಿಕರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಖಾಕಿ ಪಡೆಯ ಕೆಲ ಉನ್ನತ ಮಟ್ಟದ ಅಧಿಕಾರಿಗಳು, ಕೆಲ ಠಾಣೆ ವ್ಯಾಪ್ತಿಯ ಸಿಬ್ಬಂದಿ, ಹಬ್ಬದ ನೆಪದಲ್ಲಿ ಠಾಣಾ ವ್ಯಾಪ್ತಿಯ ಸಣ್ಣ-ಪುಟ್ಟ ಅಂಗಡಿಕಾರರು, ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರು, ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ‘ಮಾಮೂಲಿ ಪಟ್ಟಿ’ ತಯಾರಿಸುತ್ತಿದ್ದಾರೆ ಎನ್ನಲಾಗಿದೆ.

ಹೇಗಿರುತ್ತೆ ಈ ‘ದಸರಾ ಪಟ್ಟಿ’ ಕಲೆಕ್ಷನ್ ಗೇಮ್?
ಬೀಟ್ ಅಥವಾ ಎಸ್ ಬಿ (ಸ್ಪೆಷಲ್ ಬ್ರಾಂಚ್) ಪೊಲೀಸರ ಎಂಟ್ರಿ: ಸಂಭಂದಿಸಿದ ಠಾಣೆಯ ಪೊಲೀಸರು ನೇರವಾಗಿ ವ್ಯಾಪಾರಿಗಳ ಬಳಿಗೆ ತೆರಳಿ ಹಬ್ಬದ ಚಂದಾ ಅಥವಾ ಪೂಜಾ ಖರ್ಚಿನ ಹೆಸರಿನಲ್ಲಿ ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಿ ಪಟ್ಟಿ ಬರೆಸಿಕೊಳ್ಳುತ್ತಾರೆ.

ಭಯದ ವಾತಾವರಣ: “ಶಾಂತವಾಗಿ ವ್ಯಾಪಾರ ಮಾಡ್ಬೇಕಂದ್ರೆ ಪಟ್ಟಿ ಕೊಡ್ಲೇಬೇಕು” ಎಂಬ ಪರೋಕ್ಷ ಬೆದರಿಕೆಯಿಂದಾಗಿ, ಸಣ್ಣ ವ್ಯಾಪಾರಿಗಳು ಅನಿವಾರ್ಯವಾಗಿ ಹಣ ನೀಡಬೇಕಾದ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ.

ಅಕ್ರಮಗಾರರ ಜತೆ ಒಡನಾಟ: ಕಾನೂನುಬಹಿರ ಚಟುವಟಿಕೆ ನಡೆಸುವವರು ಪೊಲೀಸರ ಕಣ್ಣುತಪ್ಪಿಸಲು ಹಾಗೂ ಹಬ್ಬದ ಸೋಗಿನಲ್ಲಿ ಯಾವುದೇ ತೊಂದರೆಯಾಗದಂತೆ ತಡೆಯಲು ಈ ಪಟ್ಟಿಗಳಿಗೆ ಬೇಕಂತಲೇ ದೊಡ್ಡ ಮೊತ್ತದ ದೇಣಿಗೆಯನ್ನು ಮುಂಗಡವಾಗಿ ಮುಟ್ಟಿಸುತ್ತಾರೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ.

ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ವಾರ್ನಿಂಗ್!
ಇಲಾಖೆಯ ಮರ್ಯಾದೆಯನ್ನು ಹರಾಜು ಹಾಕುವ ಇಂತಹ ಶಿಸ್ತುಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳು ಕಣ್ಣಿಟ್ಟಿದ್ದು, ಯಾವುದೇ ಠಾಣೆಯಲ್ಲಿ ‘ದಸರಾ ಪಟ್ಟಿ’ ಅಥವಾ ವಂತಿಗೆ ವಸೂಲಿ ಮಾಡುವ ಸಿಬ್ಬಂದಿ ಕಂಡುಬಂದಲ್ಲಿ ನೇರವಾಗಿ ಅಮಾನತುಗೊಳಿಸುವುದಾಗಿ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಆದರೂ ಕೆಲ ಅಧಿಕಾರಿಗಳು, ಸಿಬ್ಬಂದಿಗಳು ಯಾವುದೋ ಬಾಹ್ಯ ಒತ್ತಡದ ಕಾರಣಕ್ಕಾಗಿ ಮಾತ್ರ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸುತ್ತಲೇ ಇದ್ದಾರೆ. ಹಬ್ಬದ ಸಂಭ್ರಮದಲ್ಲಿ ಜನ ಸಾಮಾನ್ಯರು ಮಿಂದೇಳುತ್ತಿದ್ದರೆ, ಇತ್ತ ತೆರೆಮರೆಯಲ್ಲಿ ನಡೆಯುತ್ತಿರುವ ಈ ‘ಖಾಕಿ ವಸೂಲಿ ಪರ್ವ’ದಿಂದಾಗಿ ಪ್ರಾಮಾಣಿಕ ವ್ಯಾಪಾರಿಗಳು ರೋಸಿಹೋಗಿದ್ದಾರೆ.

ಪೋಲಿಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇಂತಹ ಅಕ್ರಮ ವಸೂಲಿಗಳಿಗೆ ಬ್ರೇಕ್ ಹಾಕಿ, ಇಲಾಖೆಯ ವರ್ಚಸ್ಸನ್ನು ಉಳಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

 

Share

Leave a comment

Leave a Reply

Your email address will not be published. Required fields are marked *

Don't Miss

ರಾಜ್ಯ / ಕರ್ನಾಟಕ

Records:ಭೂದಾಖಲೆಗಳ ನಕಲು ಪ್ರತಿ ಶುಲ್ಕ ಪರಿಷ್ಕರಣೆ: ಸಾರ್ವಜನಿಕರಿಗೆ ಹೊಸ ದರಗಳ ಮಾಹಿತಿ

ಬೆಂಗಳೂರು:(Records) ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ವಿವಿಧ ಸರ್ವೆ ದಾಖಲೆಗಳ ನಕಲು ಪ್ರತಿಗಳನ್ನು ಪಡೆಯಲು ವಿಧಿಸಲಾಗುವ ಶುಲ್ಕವನ್ನು ಪರಿಷ್ಕರಿಸಿ ಹೊಸ ಸುತ್ತೋಲೆ ಹೊರಡಿಸಿದೆ. ಇಲಾಖೆಯ ದಾಖಲೆಗಳ ವಿತರಣೆಯಲ್ಲಿ...

ದಾವಣಗೆರೆ

Agriculture: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರೈತರಿಗೆ ಕೃಷಿ ಉಪಕರಣ ವಿತರಣೆ

ದಾವಣಗೆರೆ: (Agriculture ) ಕರ್ನಾಟಕ ರಾಜ್ಯ ಮನರೇಗಾ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ಪ್ರಾದೇಶಿಕ ಕಚೇರಿ ವತಿಯಿಂದ ಇಲ್ಲಿನ ನಗರದ ರೋಟರಿ...

Related Articles
ಜಿಲ್ಲೆಗಳುರಾಜ್ಯ / ಕರ್ನಾಟಕ

SP: ಚಿತ್ರದುರ್ಗದ ನೂತನ ಎಸ್ಪಿಯಾಗಿ ಕುಶಾಲ್ ಚೌಕ್ಸೆ ನೇಮಕ

ಬೆಂಗಳೂರು:(SP) ಕರ್ನಾಟಕ ಸರ್ಕಾರವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಬೆಂಗಳೂರಿನ ಆಡಳಿತ ವಿಭಾಗದ ಡಿಸಿಪಿಯಾಗಿದ್ದ (DCP...

ಅಪರಾಧದಾವಣಗೆರೆ

Robbery: ದಾವಣಗೆರೆಯಲ್ಲಿ ವ್ಯಾಪಾರಿ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆ: ಕೃತ್ಯ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

ದಾವಣಗೆರೆ: (Robbery)  ದಾವಣಗೆರೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರನ್ನು ಹಣಕಾಸಿನ ಮಾತುಕತೆ ನೆಪದಲ್ಲಿ ಕರೆದೊಯ್ದು, ಕೊಠಡಿಯೊಂದರಲ್ಲಿ ಬಂಧಿಸಿ 10...

ದಾವಣಗೆರೆರಾಜ್ಯ / ಕರ್ನಾಟಕ

IGP: ದಾವಣಗೆರೆ ಪೂರ್ವ ವಲಯ ಐಜಿಪಿಯಾಗಿ ಎನ್. ಸತೀಶ್ ಕುಮಾರ್ ವರ್ಗಾವಣೆ

ದಾವಣಗೆರೆ: (IGP) ಕರ್ನಾಟಕ ಸರ್ಕಾರವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಹಿರಿಯ ಐಪಿಎಸ್ ಅಧಿಕಾರಿ...

ಅಪರಾಧರಾಜಕೀಯರಾಜ್ಯ / ಕರ್ನಾಟಕ

ED: ಕರ್ನಾಟಕ ಸಚಿವ ಸತೀಶ್ ಜಾರಕಿಹೊಳಿ ಆಸ್ತಿಗಳ ಮೇಲೆ ಇ.ಡಿ ದಾಳಿ: ಇ ಡಿ ಮಹತ್ವದ ಮಾಹಿತಿ ಬಿಡುಗಡೆ

ಬೆಂಗಳೂರು: (ED) ಕರ್ನಾಟಕದ ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸೇರಿದ...