ದಾವಣಗೆರೆ

Agriculture: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರೈತರಿಗೆ ಕೃಷಿ ಉಪಕರಣ ವಿತರಣೆ

Share
Share

ದಾವಣಗೆರೆ: (Agriculture ) ಕರ್ನಾಟಕ ರಾಜ್ಯ ಮನರೇಗಾ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ಪ್ರಾದೇಶಿಕ ಕಚೇರಿ ವತಿಯಿಂದ ಇಲ್ಲಿನ ನಗರದ ರೋಟರಿ ಬಾಲಭವನದಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಮತ್ತು ರೈತರಿಗೆ ಕೃಷಿ ಉಪಕರಣಗಳಾದ ಅಡಿಕೆ ಮರ ಹತ್ತುವ ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರುಣಾ ಸುರೇಶ್ ನಿಟ್ಟುವಳ್ಳಿ ಅವರು ಮಾತನಾಡಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯು ಕೆಲವು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿಗಳು ನೀಡುವ ಸಿಎಸ್ಆರ್ ಫಂಡ್ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಉಪಕರಣಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ರಾಜಪ್ಪ ಮಲ್ಲಿಗೇನಹಳ್ಳಿ ಅವರು, ಕಾರ್ಮಿಕರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಇರುವ ಪರಿಹಾರಗಳು ಹಾಗೂ ಸರ್ಕಾರದಿಂದ ಸಿಗುವ ಸೌಕರ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕಾರ್ಮಿಕ ವರ್ಗದ ಮಕ್ಕಳಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಎಲ್ಲ ಸೌಲಭ್ಯಗಳು ಸಿಗಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಕಾರಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು 25 ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯ ಮೇಲೆ ಗೀತಮ್ಮ ಎಸ್.ಡಿ. ಹರಿಹರ, ಪುಷ್ಪ ಮಹೇಶ್ವರಪ್ಪ, ಮಹೇಶ್ವರಪ್ಪ ದೊಡ್ಡಮನಿ, ಶಾಂತಪ್ಪ, ವಿಜಯ್ ಕುಮಾರ್ ಹಾಗೂ ರಾಜು ಉಪಸ್ಥಿತರಿದ್ದರು. ಕಾರ್ಮಿಕ ಸಂಘದ ಅನೇಕ ಮುಖಂಡರು, ಪೋಷಕರು ಮತ್ತು ಮಕ್ಕಳು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಡಿ. ಮಹೇಶ್ವರಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಜ್ಯೋತಿ ಪ್ರಾರ್ಥಿಸಿದರು.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆರಾಜ್ಯ / ಕರ್ನಾಟಕ

Transfer:ದಾವಣಗೆರೆಯ ದಕ್ಷ ಅಧಿಕಾರಿ ಗಾಯತ್ರಿ ವರ್ಗಾವಣೆ: ಈ ಹಿಂದೆ ಕಾಂಗ್ರೆಸ್ ಮುಖಂಡನ ಪುತ್ರರ ಬಂಧಿಸಿ ಸುದ್ದಿಯಾಗಿದ್ದ ಇನ್ಸ್‌ಪೆಕ್ಟರ್

ದಾವಣಗೆರೆ: (Transfer) ಕರ್ನಾಟಕ ಪೊಲೀಸ್ ಇಲಾಖೆಯ ಇತ್ತೀಚಿನ ವರ್ಗಾವಣೆ ಆದೇಶದನ್ವಯ, ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಾಯತ್ರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರನ್ನು ಬಳ್ಳಾರಿ ಜಿಲ್ಲೆಯ...

ರಾಜ್ಯ / ಕರ್ನಾಟಕ

DYSP: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಸರ್ಜರಿ: 74 ಡಿವೈಎಸ್‌ಪಿಗಳ ವರ್ಗಾವಣೆ – ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಬೆಂಗಳೂರು:(DYSP) ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ವರ್ಗಾವಣೆ ಪ್ರಕ್ರಿಯೆ ನಡೆಸಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ಒಟ್ಟು 74 ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳನ್ನು ವಿವಿಧ ಸ್ಥಳಗಳಿಗೆ ನಿಯೋಜಿಸಿ...

Related Articles
ಅಪರಾಧದಾವಣಗೆರೆ

Robbery: ದಾವಣಗೆರೆಯಲ್ಲಿ ವ್ಯಾಪಾರಿ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆ: ಕೃತ್ಯ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

ದಾವಣಗೆರೆ: (Robbery)  ದಾವಣಗೆರೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರನ್ನು ಹಣಕಾಸಿನ ಮಾತುಕತೆ ನೆಪದಲ್ಲಿ ಕರೆದೊಯ್ದು, ಕೊಠಡಿಯೊಂದರಲ್ಲಿ ಬಂಧಿಸಿ 10...

ದಾವಣಗೆರೆರಾಜ್ಯ / ಕರ್ನಾಟಕ

IGP: ದಾವಣಗೆರೆ ಪೂರ್ವ ವಲಯ ಐಜಿಪಿಯಾಗಿ ಎನ್. ಸತೀಶ್ ಕುಮಾರ್ ವರ್ಗಾವಣೆ

ದಾವಣಗೆರೆ: (IGP) ಕರ್ನಾಟಕ ಸರ್ಕಾರವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಹಿರಿಯ ಐಪಿಎಸ್ ಅಧಿಕಾರಿ...

ದಾವಣಗೆರೆರಾಜ್ಯ / ಕರ್ನಾಟಕ

Lokayukta SP: ದಾವಣಗೆರೆ ನೂತನ ಲೋಕಾಯುಕ್ತ ಎಸ್‌ಪಿಯಾಗಿ ಆ್ಯಂಟನಿ ಜಾನ್ ಅಧಿಕಾರ ಸ್ವೀಕಾರ: ದೂರು ಸಲ್ಲಿಕೆಗೆ ಕರೆ

ದಾವಣಗೆರೆ: (Lokayukta SP) ದಾವಣಗೆರೆ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ (ಎಸ್‌ಪಿ) ಆ್ಯಂಟನಿ ಜಾನ್ ಜೆ.ಕೆ...