ದಾವಣಗೆರೆ

Corporation: ಶಿಥಿಲಾವಸ್ಥೆಯಲ್ಲಿರುವ ಅಪಾಯಕಾರಿ ಕಟ್ಟಡಗಳನ್ನು 7 ದಿನಗಳೊಳಗೆ ತೆರವುಗೊಳಿಸಸಲು ಪಾಲಿಕೆ ಆಯುಕ್ತರ ಆದೇಶ

Share
Share

ದಾವಣಗೆರೆ: (Corporation):  ಹಳೆಯ ಮತ್ತು ಶಿಥಿಲಗೊಂಡ ಕಟ್ಟಡಗಳಿಂದ ಸಂಭವಿಸಬಹುದಾದ ಮುಂಜಾಗ್ರತಾ ಹಾನಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆ ಅಥವಾ ಅಪಾಯಕಾರಿ ಸ್ಥಿತಿಯಲ್ಲಿರುವ ಸಂಪೂರ್ಣ ಕಟ್ಟಡ ಅಥವಾ ಕಟ್ಟಡದ ಭಾಗವನ್ನು ಈ ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿತೆರವುಗೊಳಿಸಬೇಕು ಅಥವಾ ರಿಪೇರಿ ಮಾಡಿಕೊಳ್ಳಬೇಕು ಎಂದು ಮಹಾನಗರಪಾಲಿಕೆ ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಯನ್ವಯ ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ ಕೆಲವು ಕಟ್ಟಡಗಳು ಸಾರ್ವಜನಿಕರಿಗೆ ಹಾಗೂ ನೆರೆ-ಹೊರೆಯ ಆಸ್ತಿಪಾಸ್ತಿಗಳಿಗೆ ಅಪಾಯವನ್ನುಂಟು ಮಾಡುವ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಸದರಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಅಥವಾ ಅದರ ಭಾಗದಿಂದ ಯಾವುದೇ ರೀತಿಯ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿದಲ್ಲಿ ಅದಕ್ಕೆ ಸಂಬಂಧಪಟ್ಟ ಮಾಲೀಕರು ಅಥವಾ ಅನುಭೋಗದಾರರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಆ್ಯಕ್ಟ್ 1976ರ ಸೆಕ್ಷನ್ 322ರ ಅನ್ವಯ, ಮಾಲೀಕರು ತಕ್ಷಣವೇ ಕಟ್ಟಡದ ರಿಪೇರಿ/ತೆರವು ಕಾರ್ಯಾಚರಣೆ ನಡೆಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತೆಯಾಗಿ ಕಟ್ಟಡದ ಸುತ್ತಲೂ ಸುರಕ್ಷತಾ ಬೇಲಿಯನ್ನು ಕಡ್ಡಾಯವಾಗಿ ಅಳವಡಿಸಬೇಕು.

ನಿಗದಿತ 07 ದಿನಗಳ ಅವಧಿಯೊಳಗೆ ಮಾಲೀಕರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಯಾವುದೇ ಪೂರ್ವಭಾವಿ ನೋಟೀಸ್ ನೀಡದೆ ಪಾಲಿಕೆ ವತಿಯಿಂದಲೇ ಸಂಪೂರ್ಣ ಕಟ್ಟಡ ಅಥವಾ ಅದರ ಭಾಗವನ್ನು ತೆರವುಗೊಳಿಸಲಾಗುವುದು. ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸಂಬಂಧಪಟ್ಟ ಮಾಲೀಕರು/ಅನುಭೋಗದಾರರಿಂದಲೇ ವಸೂಲಿ ಮಾಡಲಾಗುವುದು.

ಇಂತಹ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಒಳಗೆ ಸಾರ್ವಜನಿಕರು ಪ್ರವೇಶಿಸಬಾರದು ಹಾಗೂ ಇಂತಹ ಅಪಾಯಕಾರಿ ಕಟ್ಟಡಗಳ ಸುತ್ತಮುತ್ತ ಸಂಚರಿಸುವಾಗ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿ ಮಹಾನಗರ ಪಾಲಿಕೆ ಆಯುಕ್ತರಾದ ಮಹಾಂತೇಶ್‌  ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆ

Hara: ಪಂಚಮಸಾಲಿ ಪೀಠದಲ್ಲಿ ಹೈಡ್ರಾಮಾ: ವಚನಾನಂದ ಶ್ರೀಗಳ ಉಚ್ಚಾಟನೆ – ಏಪ್ರಿಲ್ 27ಕ್ಕೆ ಬಹಿರಂಗ ಲೆಕ್ಕಕ್ಕೆ ಟ್ರಸ್ಟ್ ಸಿದ್ಧ

ದಾವಣಗೆರೆ:(Hara) ಹರಿಹರದ ಪಂಚಮಸಾಲಿ ಪೀಠದಲ್ಲಿ ಉಂಟಾಗಿರುವ ಭಿನ್ನಮತ ಈಗ ಬಹಿರಂಗ ಸಂಘರ್ಷಕ್ಕೆ ನಾಂದಿ ಹಾಡಿದೆ. ಮಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಹಾಗೂ ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಅವರು ಹರಿಹರ ಪೀಠದ...

ಅಪರಾಧದಾವಣಗೆರೆ

Canara Bank: ಕೆನರಾ ಬ್ಯಾಂಕ್‌ಗೆ 4.15 ಲಕ್ಷ ರೂ. ದಂಡ ವಿಧಿಸಿದ ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗ

ದಾವಣಗೆರೆ: (Canara Bank) ಗೃಹ ಸಾಲದ ಮೂಲ ದಾಖಲೆಗಳನ್ನು ಹಿಂತಿರುಗಿಸುವಲ್ಲಿ ನಿರ್ಲಕ್ಷ್ಯ ತೋರಿದ ಕೆನರಾ ಬ್ಯಾಂಕ್‌ಗೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಒಟ್ಟು 4,15,000 ರೂ.ಗಳ ಪರಿಹಾರ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ. ನಗರದ ಶ್ರೀಮತಿ ಮಂಜುಳಾ ಕೆ.ಬಿ. ಅವರು ಕೆನರಾ ಬ್ಯಾಂಕ್‌ನಲ್ಲಿ ತಮ್ಮ ಮನೆಯ ಮೂಲ ದಾಖಲೆಗಳನ್ನು ಅಡಮಾನವಿಟ್ಟು 21,50,000 ರೂ.ಗಳ ಗೃಹ ಸಾಲ ಪಡೆದಿದ್ದರು. 2024 ರ...

Related Articles
ಅಪರಾಧದಾವಣಗೆರೆರಾಜ್ಯ / ಕರ್ನಾಟಕ

PSI: ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪಾನಮತ್ತ ಮಹಿಳೆ.!

ದಾವಣಗೆರೆ: (PSI) ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಪಾನಮತ್ತ ಮಹಿಳೆಯೊಬ್ಬಳು ಹಲ್ಲೆ ನಡೆಸಿ, ಅಸಭ್ಯವಾಗಿ...

ಅಪರಾಧದಾವಣಗೆರೆದೇಶರಾಜ್ಯ / ಕರ್ನಾಟಕ

Pocso: ವಚನಾನಂದ ಸ್ವಾಮಿ ಪೋಕ್ಸೊ ಪ್ರಕರಣ: ಹೈಕೋರ್ಟ್ ನಲ್ಲಿ ಪ್ರಕರಣ; ಜೂನ್ 30ಕ್ಕೆ ಆದೇಶ ಮುಂದೂಡಿಕೆ

​ದಾವಣಗೆರೆ: ದಾವಣಗೆರೆ ಸ್ಥಳೀಯ ಪೋಕ್ಸೊ (POCSO) ನ್ಯಾಯಾಲಯದಲ್ಲಿ ಇಂದು ನಿಗದಿಯಾಗಿದ್ದ  ವಚನಾನಂದ ಸ್ವಾಮಿ ಅವರ ಜಾಮೀನು ರದ್ದು...

ದಾವಣಗೆರೆಅಪರಾಧ

Matka: ದಾವಣಗೆರೆ – ಹರಿಹರದಲ್ಲಿ ಅಕ್ರಮ ಚಟುವಟಿಕೆ ಹಾಗೂ ಕೆ.ಎಸ್. ಭಗವಾನ್ ಹೇಳಿಕೆ ವಿರುದ್ಧ ಶಾಸಕ ಬಿ.ಪಿ. ಹರೀಶ್ ಕಿಡಿ

ದಾವಣಗೆರೆ:(Matka) ಜಿಲ್ಲೆ ಹಾಗೂ ಹರಿಹರ ತಾಲೂಕಿನಲ್ಲಿ ಹೆಚ್ಚುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು, ಇತ್ತೀಚೆಗೆ ನಡೆದ ವಿವಾದಾತ್ಮಕ...