accident; ಮಾನವೀಯತೆ ಮೆರೆದ ಮಾಜಿ ಶಾಸಕ ರೇಣುಕಾಚಾರ್ಯ
ಹೊನ್ನಾಳಿ, ಆಗಸ್ಟ್ 17: ತಾಲೂಕಿನ ದಿಡಗೂರು ಕೃಷ್ಣಪ್ಪ ನಗರದ ಬಳಿ ಅಪಘಾತವಾಗಿದ್ದು (accident), ಯುವಕರಿಗೆ ಗಾಯವಾಗಿದೆ.
ಸ್ಥಳೀಯ ಗ್ರಾಮದ ರಾಜೇಶ್ ಹಾಗೂ ಆತನ ಸ್ನೇಹಿತ ಗಾಯಗೊಂಡ ಯುವಕರು.
ಮಹೀಂದ್ರಾದಿಂದ ಕ್ರಾಂತಿಕಾರಿ, ಲಘು ಓಜಸ್ ಶ್ರೇಣಿ ಟ್ರ‍್ಯಾಕ್ಟರ್ ಬಿಡುಗಡೆ
ಮಾನವೀಯತೆ ಮೆರೆದ ಮಾಜಿ ಶಾಸಕ
ಈ ಯುವಕರು ಬೈಕ್ ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಇದೇ ರಸ್ತೆಯಲ್ಲಿ ಹೊರಟಿದ್ದ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಮಾಜಿ ಶಾಸಕ ರೇಣುಕಾಚಾರ್ಯ (M.P. Renukacharya) ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದರು. ಅಲ್ಲದೇ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ಮಾಜಿ ಶಾಸಕ ರೇಣುಕಾಚಾರ್ಯ ತಮ್ಮ ಕಾರಿನಲ್ಲೇ ಕರೆತಂದು ಸೇರಿಸುವ ಮೂಲಕ ಮಾನವೀಯತೆ ಮೆರೆದುದಲ್ಲದೇ ಸೂಕ್ತ ಚಿಕಿತ್ಸೆ ನೀಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು.