ಮಹೀಂದ್ರಾದಿಂದ ಕ್ರಾಂತಿಕಾರಿ, ಲಘು ಓಜಸ್ ಶ್ರೇಣಿ ಟ್ರ‍್ಯಾಕ್ಟರ್ ಬಿಡುಗಡೆ

ಚಿತ್ರದುರ್ಗ : ಮಹೀಂದ್ರಾ ಸಮೂಹದ ಭಾಗವಾಗಿರುವ ಮಹೀಂದ್ರಾ ಟ್ರ್ಯಾಕ್ಟರ್ ಬಹುನಿರೀಕ್ಷಿತ, ಭವಿಷ್ಯ-ಸಿದ್ಧ ಶ್ರೇಣಿಯ ಮಹೀಂದ್ರ ಓಜಸ್ ಟ್ರ‍್ಯಾಕ್ಟರ್‍ಗಳನ್ನು ಇತ್ತೀಚೆಗೆ ‘ಫ್ಯೂಚರ್‍ಸ್ಕೇಪ್’ ಕಾರ‍್ಯಕ್ರಮದಲ್ಲಿ ಬಿಡುಗಡೆ ಮಾಡಿದೆ.
ಸಂಸ್ಕೃತ ಪದ “ಓಜಸ್” ಅಂದರೆ ಕನ್ನಡದಲ್ಲಿ ಓಜಸ್ಸು ಅಥವಾ ತೇಜಸ್ಸು ಎಂಬ ಅರ್ಥ, ಅಂದರೆ ಶಕ್ತಿಯ ಪವರ್ ಹೌಸ್ . ಓಜಸ್, ಮಹೀಂದ್ರಾದ ಅತ್ಯಂತ ಮಹತ್ವಾಕಾಂಕ್ಷೆಯ ಜಾಗತಿಕ ಹಗುರ ಟ್ರ‍್ಯಾಕ್ಟರ್. ಭಾರತದ ಮಹೀಂದ್ರಾ ರಿಚರ್ ವ್ಯಾಲಿಯ ಎಂಜಿನಿಯರಿಂಗ್ ತಂಡಗಳು.
ಮಹೀಂದ್ರಾ ಎಎಫ್‍ಎಸ್ ಮತ್ತು ಜಪಾನ್‍ನ ಮಿತ್ಸುಬಿಷಿ ಮಹೀಂದ್ರಾ ಅಗ್ರಿಕಲ್ಚರ್ ಮೆಷಿನರಿಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಸಹಭಾಗಿತ್ವದಲ್ಲಿ 1,200 ಕೋಟಿ ರೂಪಾಯಿ ಹೂಡಿಕೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಹೀಂದ್ರಾ & ಮಹೀಂದ್ರಾದ ಫರ್ಮ ಎಕ್ವಿಪ್‍ಮೆಂಟ್ ವಿಭಾಗದ ಅಧ್ಯಕ್ಷ ಹೇಮಂತ್ ಸಿಕ್ಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.ಕಾಂಪ್ಯಾಕ್ಟ್ ಮತ್ತು ಸ್ಮಾಲ್ ಯುಟಿಲಿಟಿ ಪ್ಲಾಟ್‍ಫಾರಂನಲ್ಲಿ ಭಾರತೀಯ ಮಾರುಕಟ್ಟೆಗೆ 7 ಹೊಸ ಟ್ರ‍್ಯಾಕ್ಟರ್ ಮಾದರಿಗಳನ್ನು ಬಿಡುಗಡೆ ಮಾಡಿದೆ.
ಈ ಮಾದರಿಗಳು 20 ಎಚ್ ಪಿಯಿಂದ 40 ಎಚ್ ಪಿ ಸಾಮಥ್ರ್ಯದವರೆಗು ಇದ್ದು, ವ್ಯಾಪಕ ಶ್ರೇಣಿಯ ಬಳಕೆ ಮತ್ತು ಉಪಯೋಗಗಳಿಗಾಗಿ, ಸರಿಸಾಟಿಯಿಲ್ಲದ ವೇದಿಕೆಯ ಬಹುಮುಖತೆ ಮತ್ತು ದಕ್ಷತೆಯಿಂದ ವೈವಿಧ್ಯಮಯ ಕೃಷಿ ಕಾರ‍್ಯಗಳನ್ನು ನಿರ್ವಹಿಸಲು ನೆರವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.ಮಹೀಂದ್ರ ಓಜಸ್ ಟ್ರ‍್ಯಾಕ್ಟರ್ ಶ್ರೇಣಿಯನ್ನು ತೆಲಂಗಾಣದ ಜಹೀರಾಬಾದ್‍ನಲ್ಲಿರುವ ಮಹೀಂದ್ರಾದ ಅತ್ಯಾಧುನಿಕ ಟ್ರ‍್ಯಾಕ್ಟರ್ ಉತ್ಪಾದನಾ ಸೌಲಭ್ಯದಲ್ಲಿ ಪ್ರತ್ಯೇಕವಾಗಿ ತಯಾರಿಸಲಾಗುವುದು, ಇದು ಭಾರತದ ಅತಿದೊಡ್ಡ ಮತ್ತು ಅತ್ಯಾಧುನಿಕ ಟ್ರ‍್ಯಾಕ್ಟರ್ ಉತ್ಪಾದನಾ ಘಟಕಗಳಲ್ಲಿ ಒಂದಾಗಿದೆ. ಸಂಯೋಜಿತ ಟ್ರ‍್ಯಾಕ್ಟರ್ ಸೌಲಭ್ಯ ಇದಾಗಿದ್ದು, ಮಹೀಂದ್ರಾದ ವ್ಯಾಪಕ ಶ್ರೇಣಿಯ ಟ್ರ‍್ಯಾಕ್ಟರ್ ಗಳನ್ನು ಹೊರತರುತ್ತದೆ ಎಂದು ವಿವರಿಸಿದೆ.