ಲೋಕಲ್ ಸುದ್ದಿ

davanagere; ಪಂಚಪ್ರಾಣ ಪ್ರತಿಜ್ಞೆ ಬದುಕಿನಲ್ಲಿ ಅಳವಡಿಸಿಕೊಂಡರೆ ಯಶಸ್ಸು: ಜೆಎನ್ ಕರಿಬಸಪ್ಪ

ದಾವಣಗೆರೆ, ಆಗಸ್ಟ್ 17: ನಗರದ ಬಾಡ ಕ್ರಾಸ್ ಬಳಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ (Sri Veereshwara Punyashrama) ಆಗಸ್ಟ್ 15ರ 77ರ ಸ್ವಾತಂತ್ರೋತ್ಸವದ ಪ್ರಯುಕ್ತ ಪಂಚಪ್ರಾಣ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನುದಾವಣಗೆರೆ ವಿಶ್ವವಿದ್ಯಾನಿಲಯ (Davanagere University) ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುಣ್ಯಾಶ್ರಮದ ಕಾರ್ಯದರ್ಶಿ ಜೆಎನ್ ಕರಿಬಸಪ್ಪ ಅವರು ಮಾತನಾಡಿ, ಸ್ವಾತಂತ್ರ್ಯೋತ್ಸವ ಕೇವಲ ಸರ್ಕಾರಿ ಸಂಸ್ಥೆಗಳು ಹಾಗೂ ಕಾನೂನಿಗೆ ಸೀಮಿತವಲ್ಲ. ದೇಶದ ಪ್ರತಿಯೊಬ್ಬ ನಾಗರಿಕನು ಈ ಪಂಚಪ್ರಾಣ ಪ್ರತಿಜ್ಞೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಂಡಿತ ಎಂದು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

accident; ಮಾನವೀಯತೆ ಮೆರೆದ ಮಾಜಿ ಶಾಸಕ ರೇಣುಕಾಚಾರ್ಯ

ಕಾರ್ಯಕ್ರಮದ ನೇತೃತ್ವವನ್ನು ಎನ್ಎಸ್ಎಸ್ ಸ್ವಯಂಸೇವಕರಾದ ಸೈಯದ್ ನದೀಮ್ ಎಂಡಿ ಹಾಗೂ ಲೋಹಿತ್ ಕುಮಾರ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಸುಮಾರು 50 ಅಂಧ ವಿದ್ಯಾರ್ಥಿಗಳು, ಅನಾಥ ಹಾಗೂ ಅಂಗವಿಕಲ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top