police; ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ; ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕೆ. ವರ್ಗಾವಣೆ
ದಾವಣಗೆರೆ, ಆ.22: ರಾಜ್ಯದಲ್ಲಿ ಕಾಂಗ್ರೆಸ್ (congress) ಸರ್ಕಾರ ಬಂದ ನಂತರ ಪೊಲೀಸ್ ಇಲಾಖೆಗೆ (Police Department) ಮೇಜರ್ ಸರ್ಜರಿ ಮಾಡಲಾಗಿದೆ. ಇಂದು ದಾವಣಗೆರೆ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕೆ. ಐಪಿಎಸ್ ಇವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಕಲಬುರ್ಗಿ ಜಿಲ್ಲೆಯ ಪೊಲೀಸ್ (police)ತರಬೇತಿ ಕೇಂದ್ರದ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಈ ಹಿಂದೆ ಕಲಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ ಅರುಣ್ ಚುನಾವಣಾ ಸಮಯದ ಹಿನ್ನೆಲೆಯಲ್ಲಿ ದಾವಣಗೆರೆ (davanagere) ಜಿಲ್ಲೆಯ ಎಸ್ ಪಿ ಆಗಿ ನೇಮಕಗೊಂಡಿದ್ದರು. ಡಾ. ಅರುಣ್ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ದಾವಣಗೆರೆ ಎಸ್ ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು, ಕೇವಲ 5 ತಿಂಗಳಿಗೆ ಎಸ್ ಪಿ ಅರುಣ್ ಅವರನ್ನ ಸರ್ಕಾರ ವರ್ಗಾವಣೆ ಮಾಡಿದೆ.
ಶಾಸಕರ ಆಸೆ ಈಡೇರಿಸಿದ ಸರ್ಕಾರ:
ಇತ್ತೀಚೆಗೆ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶಾಂತನಗೌಡ ಅವರು ಮರಳು ಎತ್ತಲು ಎಸ್ ಪಿ ಬಿಡುತ್ತಿಲ್ಲ, ಅವರನ್ನು ಟ್ರಾನ್ಸಫರ್ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಒತ್ತಾಯಿಸಿದ್ದರು. ತದನಂತರ ಎಸ್ ಎಸ್ ಮಲ್ಲಿಕಾರ್ಜುನ್ ಅವರು ತಮ್ಮ ಭಾಷಣದಲ್ಲಿ ಶಾಂತನಗೌಡ್ರಿ ಕೇಳೋದು ಒಂದೇ ಎಸ್ ಪಿ ಟ್ರಾನ್ಸಫರ್ ಮಾಡ್ರಿ ಅಂತಾ, ಅವರೊಬ್ಬರೆ ಅಲ್ಲಾ ಎಲ್ಲಾ ಶಾಸಕರು ಕೇಳಿದ್ದಾರೆ ಎಂದಿದ್ದರು. ಹಾಗೇನೆ ಎಸ್ ಪಿ ಒಳ್ಳೆಯವರು ಇದ್ದಾರೆ, ಬಿಗಿನೂ ಇದ್ದಾರೆ, ಒಳ್ಳೆ ಅಧಿಕಾರಿಗಳು ಇರಬೇಕು ಎಂದಿದ್ದರು. ಆದರೆ ಸರ್ಕಾರದಿಂದ ಎಸ್ ಪಿ ಡಾ, ಅರುಣ್ ಅವರನ್ನು ವರ್ಗಾವಣೆಗೊಳಿಸಿರುವುದರಿಂದ ದಾವಣಗೆರೆ ಜಿಲ್ಲೆಯ ಎಲ್ಲಾ ಶಾಸಕರುಗಳಿಗೂ ಹಾಲು ಕುಡಿದಷ್ಟು ಸಂತೋಷವಾಗಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗಳು
ದಿವ್ಯ ವಿ ಗೋಪಿನಾಥ್. ಐಪಿಎಸ್, ಉಮಾ ಪ್ರಶಾಂತ್ ಐಪಿಎಸ್, ಅಮತ್ ವಿಕ್ರಮ್ ಐಪಿಎಸ್ ಇವರನ್ನು ಕೂಡ ವರ್ಗಾವಣೆ ಮಾಡಲಾಗಿದೆ.