congress; ದಾವಣಗೆರೆ ಕ್ಷೇತ್ರ ಅಭಿವೃದ್ಧಿ ಬಗ್ಗೆ ನನ್ನದೇ ವಿಜನ್ ಇದೆ: ಎಂಪಿ ಟಿಕೆಟ್ ಆಕಾಂಕ್ಷಿ ವಿನಯ್
ದಾವಣಗೆರೆ, ಆ.18: ದಾವಣಗೆರೆ (davanagere) ಕ್ಷೇತ್ರವನ್ನು ದೇಶದಲ್ಲೇ ಮಾದರಿ ಜಿಲ್ಲೆಯನ್ನಾಗಿಸುವ ಕನಸು ನನ್ನದು. ಈ ನಿಟ್ಟಿನಲ್ಲಿ ಹಿರಿಯ ಮುತ್ಸದ್ದಿ, ಎಸ್ ಎಸ್ ಹಾಗೂ ಸಚಿವ ಮಲ್ಲಣನವರ ಆಶಯಕ್ಕೆ ತಕ್ಕಂತೆ ವಿಭಿನ್ನ ಅಭಿವೃದ್ಧಿಯ ಕನಸು ಕಟ್ಟಿಕೊಂಡಿರುವೆ ಎಂದು ಲೋಕಸಭಾ ಕಾಂಗ್ರೆಸ್ (congress) ಟಿಕೆಟ್ ಆಕಾಂಕ್ಷಿ ಜಿ ಬಿ ವಿನಯ್ ಕುಮಾರ್ ನುಡಿದರು.
ಹರಿಹರದ ಕಾಟ್ವೆ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ವಿನಯ್ ಕುಮಾರ್ (vinay kumar) ಆತ್ಮೀಯ ಬಳಗ ಹಾಗೂ ಹಿತೈಷಿಗಳ ಅಹಿಂದ ಸ್ವಾಭಿಮಾನಿ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದಾವಣಗೆರೆ-ಹರಿಹರ ಸೆರಗಿನ ಹಳ್ಳಿ ಕಕ್ಕರಗೊಳ್ಳ ಗ್ರಾಮದ ಬಡ ಕೃಷಿ ಕುಟುಂಬ ಹಿನ್ನೆಲೆ ಕಡು ಕಷ್ಟಗಳ ನೋವುಂಡ ಜನರ ನಡುವೆ ಬದುಕಿ ಬಂದ ನನಗೆ ಅವರ ಸಮಸ್ಯೆಗಳ ಬಗ್ಗೆ ಅರಿವಿದೆ. ಛಲದಿಂದ ಬರೀ ಕೈಯಲ್ಲಿ ಬೆಂಗಳೂರು ಸೇರಿದ ನಾನು ಸಾವಿರಾರು ಬಡ ಮಧ್ಯಮ ವರ್ಗದ ಮಕ್ಕಳು ತರಬೇತಿ ಪಡೆಯುವ ಇನ್‌ಸೈಟ್ಸ್ ಕೋಚಿಂಗ್ ಸೆಂಟರ್ ಸ್ಥಾಪಿಸಿದ್ದೇನೆ. ಯಾವುದೇ ಸಮಾಜ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಮುಂದೆ ಬರಲು ವಿದ್ಯೆ ಮುಖ್ಯ ಅಂತಹ ಅವಕಾಶ ನೀಡಿದಾಗ ಸಮುದಾಯ ವ್ಯಕ್ತಿ ಮುಂಬರಲು ಸಾಧ್ಯ. ಹೀಗಾಗಿ ಸುಮಾರು ನೂರಕ್ಕೂ ಹೆಚ್ಚು ಎಸ್‌ಸಿ/ಎಸ್ಟಿ ವಿದ್ಯಾರ್ಥಿ ಯುವಜನರಿಗೇ ಉಚಿತ ಕೋಚಿಂಗ್ ಹಾಗೂ ವಿದ್ಯಾರ್ಥಿ ವೇತನ ನೀಡಿ ಅವರ ಭವಿಷ್ಯ ರೂಪಿಸುವ ಇಂತಹ ವಿಭಿನ್ನ ವಿಶೇಷ ಕ್ಷೇತ್ರದ ಪ್ರತಿ ಹಳ್ಳಿ ಹೋಬಳಿಗಳ ಬಗ್ಗೆ ಕಾಳಜಿ ಇರುವ ನನ್ನಂಥವರಿಗೆ ಅವಕಾಶ ಕೊಡಿ, ಎಲ್ಲಾ ದಾವಣಗೆರೆ ೮ ಕ್ಷೇತ್ರಗಳ ಬಗ್ಗೆ ಜನರ ಹಿರಿಯರ ನಿರೀಕ್ಷೆ ಸುಳ್ಳು ಮಾಡದೇ ಅತ್ಯಂತ ಪ್ರಾಮಾಣಿಕ, ಜಾತ್ಯತೀತ, ಮನೋಭಾವ ನೊಂದ ಜನರಿಗೆ ತಕ್ಕ ಸ್ಪಂದಿಸುವುದಾಗಿ ಭರವಸೆ ನೀಡಿದರು.
Application; ಪಾಲಿಹೌಸ್, ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಅರ್ಜಿ ಆಹ್ವಾನ
ಹಿರಿಯರಾದ ಖರ್ಗೆ ರಾಹುಲ್ ಕ್ರಿಯಾತ್ಮಕ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah), ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ರವರ ಪಕ್ಷ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ದಾವಣಗೆರೆ ಯಲ್ಲಿ ಬೃಹತ್ ಮಟ್ಟದಲ್ಲಿ 50 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಸಮಾವೇಶ ಸಂಘಟಿಸುವುದಾಗಿ ವಿನಯ್ ಕುಮಾರ್ ತಿಳಿಸಿ ದಾವಣಗೆರೆ ಹಿರಿಯರಾದ ಎಸ್ ಎಸ್ ಸಚಿವ ಎಸ್ಸೆಸ್ ಮಲ್ಲಣ್ಣನವರ ಸಲಹೆ ಸೂಚನೆ ಆಶೀರ್ವಾದ ಪಡೆದು ಮುಂದುವರೆಯುವುದಾಗಿ ತಿಳಿಸಿದರು.
ಸೋಷಿಯಲ್ ಮೀಡಿಯಾ ಬಳಕೆ ಪ್ರಮಾದಗಳ ಬಗ್ಗೆ ವಿನಯ್ ಕಿವಿಮಾತು
ಈಗೀಗ ಪ್ರಿಂಟ್, ಟೆಲಿ ಮೀಡಿಯಾಗಳಿಗಿಂತ ಸೋಷಿಯಲ್ ಮೀಡಿಯಾ (social media) ತುಂಬ ವೇಗ ಸುದ್ದಿ ಹರಡುವುದೇನೋ ಸರಿ, ಆದರೆ ಸುದ್ದಿ ಸತ್ಯ ಸತ್ಯತೆ ಬಗ್ಗೆ ಗಮನ ಹರಿಸುತ್ತಿಲ್ಲ. ಯಾವಾಗಲೋ ಆಡಿದ ಮಾತುಗಳು, ಹಳೇ ತುಣುಕುಗಳು, ಕಟ್ ಅಂಡ್ ಪೇಸ್ಟ್ ವೈರಲ್ ಆಗುತ್ತಿದ್ದು ಇದು ಒಳ್ಳೆಯ ಬೆಳವಣಿಗೆ ಅಲ್ಲ, ಇಂಥ ಕೃತ್ಯಗಳಿಂದ ರಾಜಕೀಯ ಮುತ್ಸದ್ದಿಗಳ ಪ್ರತಿಷ್ಠಿತ ವ್ಯಕ್ತಿಗಳ ಘನತೆಗೆ ಚ್ಯುತಿ ಬರುತ್ತದೆ ಹೊರತು, ಆಗಿರುವ ಪ್ರಮಾದ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಸೋಷಿಯಲ್ ಮೀಡಿಯಾ ಬಳಕೆ ಯುವ ಸಮೂಹ ಎಚ್ಚರ ವಹಿಸಬೇಕು ಅದರ ಬಳಕೆಯಿಂದ ದೂರವಿರಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಕುಂಬಳೂರ ನಾಗರಾಜ್, ಟಿ ಎಸ್ ಮುರುಗಣ್ಣನವರ್, ರಾಜನಹಳ್ಳಿ ವಿಶ್ವ ಭಾರತಿ ವಿದ್ಯಾಸಂಸ್ಥೆ ಮಂಜುನಾಥ್, ನಿಂಚನ ಪಬ್ಲಿಕ್ ಸ್ಕೂಲ್ ನಿಂಗಪ್ಪ, ಮುಸ್ಲಿಂ ಸಮುದಾಯದ ಮುಖಂಡ ಅಸಿಫ್ ಅಲಿಖಾನ್, ನಾಸೀರ್ ಅಹ್ಮದ್ ರವರು ರಾಜಕಾರಣ ಈಗೀಗ ಉಧ್ಮಮ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.